ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

May 20, 2019

ಮೈಸೂರು: ನಂಜನಗೂಡು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತದ ವತಿಯಿಂದ ಮೇ 21ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 66/11 ಕೆ.ವಿ ಹುಲ್ಲಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಗೂ ಮೇ 21ರಂದೇ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ 66/11 ಕೆ.ವಿ ದೇವನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ, 66/11 ಕೆ.ವಿ ಸುತ್ತೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ, 66/11 ಕೆ.ವಿ ತಲಕಾಡು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮತ್ತು 66/11 ಕೆ.ವಿ ಪರಿಣಮಿಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ವಿ.ವಿ ವ್ಯಾಪ್ತಿಯಲ್ಲಿ ಶಿರಮಳ್ಳಿ, ಹೆಗ್ಗಡಹಳ್ಳಿ, ಹಗಿನವಾಳು, ರಾಂಪುರ, ಹುಲ್ಲಹಳ್ಲಿ, ನೆಲ್ಲಿತಾಳಪುರ, ಕುರಿಹುಂಡಿ, ಹರದನಹಳ್ಳಿ ಮತ್ತು ದುಗ್ಗಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿ ಪ್ರದೆಶಗಳು. ದೇವನೂರು ವಿ.ವಿ ವ್ಯಾಪ್ತಿಯಲ್ಲಿ ತಗಡೂರು, ಬದನವಾಳು, ಚುಂಚನಹಳ್ಳಿ, ಗಟ್ಟವಾಡಿಪುರ, ಕಾರ್ಯ, ಅಳಗಂಚಿ, ಹೆಡತಲೆ, ಕೋಣನೂರು, ನೇರಳೆ, ಹೆಮ್ಮರಗಾಲ, ಕವಲಂದೆ ಗ್ರಾಮಗಳು/ ಗ್ರಾಮಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು. ಸುತ್ತೂರು ವಿ.ವಿ ವ್ಯಾಪ್ತಿಯಲ್ಲಿ ಸುತ್ತೂರು, ಬಿಳಿಗೆರೆ, ಹೊರಳವಾಡಿ, ನಗರ್ಲೆ, ತಾಯೂರು, ಮಲ್ಲೂಪುರ, ಹೊಸಕೋಟೆ, ತುಮ್ಮನೇರಳೆ, ಗೋಳೂರು ಮತ್ತು ಮಹದೇವನಗರ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು. ತಲಕಾಡು ವಿವಿ ವ್ಯಾಪ್ತಿಯಲ್ಲಿ ತಲಕಾಡು, ಬಿ.ಶೆಟ್ಟಳ್ಳಿ, ಬನವೆ, ದೊಡ್ಡಪುರ, ಹೆಮ್ಮಿಗೆ, ಕರವಟ್ಟಿ ಗ್ರಾಮಗಳು/ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು. ಪರಿಣಮಿಪುರ ವಿವಿ ವ್ಯಾಪ್ತಿಯಲ್ಲಿ ಕುರುಬಾಳನಹುಂಡಿ, ವಿಜಯಪುರ, ಕಲ್ಮಟ, ಕಾವೇರಿಪುರ, ಮೂಡಲಹುಂಡಿ, ಮುಡುಕುತೊರೆ, ಪರಿಣಮಿಪುರ. ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »