ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನ ಅಂದಕ್ಕೆ ಸವಾಲಾಗಿ ಪರಿಣಮಿಸುತ್ತಿದ್ದ ಕೈಗಾರಿಕೆಗಳ ಅನುಪ ಯುಕ್ತ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಗರದ ಹೊರ ವಲಯದಲ್ಲಿ ನಾಲ್ಕು ಕಡೆ ಡಂಪಿಂಗ್ ಯಾರ್ಡ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೂರ್ಗಳ್ಳಿಯಲ್ಲಿ ಎರಡು ಎಕರೆಯಲ್ಲಿ ಹೊಸದಾಗಿ ಡಂಪಿಂಗ್ ಯಾರ್ಡ್ ಕಾರ್ಯಾ ರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೈಸೂರು ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಕಾಲಕ್ಕೆ ವಿಲೇವಾರಿ ಮಾಡದೇ ಇದ್ದ ಹಿನ್ನೆಲೆಯಲ್ಲಿ ವಿದ್ಯಾರಣ್ಯ ಪುರಂನಲ್ಲಿರುವ ಸೂಯೇಜ್ ಫಾರಂ ನಲ್ಲಿ ಲಕ್ಷಾಂತರ ಟನ್ ಕಸ ಸಂಗ್ರಹಣೆ ಯಾಗಿ ದೊಡ್ಡ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪರಿಸರ ನಿಯಂತ್ರಣ ಮಂಡಳಿ, ಕೆಐಎಡಿಬಿ, ಜಿಲ್ಲಾ ಕೈಗಾರಿಕಾ ಸಂಸ್ಥೆ ಇದೀಗ ಜಿಲ್ಲಾ ಧಿಕಾರಿ ಸೂಚನೆ ಮೇರೆಗೆ ಡಂಪಿಂಗ್ ಯಾರ್ಡ್ ಸ್ಥಾಪಿಸಲು ಮುಂದಾಗಿದೆ. ಕೈಗಾರಿಕೆಗಳ ಅನುಪಯುಕ್ತ ತ್ಯಾಜ್ಯವನ್ನು ವೈಜ್ಞಾನಿಕ ರೀತಿ ವಿಲೇವಾರಿ ಮಾಡುವ ಮೂಲಕ ಸಮಸ್ಯೆ ಉಲ್ಭಣಗೊಳ್ಳದಂತೆ ಕಟ್ಟೆಚ್ಚರ ವಹಿಸಲು ನಿರ್ಧರಿಸಿವೆ. ಜಿಲ್ಲಾಧಿಕಾರಿ ನೇತೃತ್ವದ `ಏಕಗವಾಕ್ಷಿ’ ಸಭೆಯಲ್ಲಿ ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಸ್ಥಳ ಗುರುತಿಸಿ ನೀಡುವಂತೆ ಸೂಚನೆ ನೀಡಲಾಗಿದೆ.
ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿತ್ತು: ಮೈಸೂರು ಜಿಲ್ಲೆಯಲ್ಲಿ 14 ಕೈಗಾರಿಕಾ ಪ್ರದೇಶಗಳಿದ್ದು, ಅವುಗಳಲ್ಲಿ ಸಣ್ಣ, ಮಧ್ಯಮ, ದೊಡ್ಡ ಹಾಗೂ ಭಾರೀ ಪ್ರಮಾಣ ದಲ್ಲಿ ನೂರಾರು ಕೈಗಾರಿಕೆ ಕಾರ್ಯನಿರ್ವ ಹಿಸುತ್ತಿವೆ. ಮೈಸೂರು ನಗರಕ್ಕೆ ಹೊಂದಿ ಕೊಂಡಂತೆ ಯಾದವಗಿರಿ, ಹೆಬ್ಬಾಳು, ಮೇಟಗಳ್ಳಿ ಹಾಗೂ ಕೂರ್ಗಳ್ಳಿ ಕೈಗಾರಿಕಾ ಪ್ರದೇಶವಿದೆ. ಬಹುತೇಕ ಎಲ್ಲಾ ಕೈಗಾರಿಕೆ ಗಳಲ್ಲೂ ಉತ್ಪತ್ತಿಯಾಗುವ ತ್ಯಾಜ್ಯಗಳಲ್ಲಿ ಕೆಲವನ್ನು ಮಾತ್ರ ಡೀಲರ್‍ಗಳ ಮೂಲಕ ಮಾರಾಟ ಮಾಡಿದರೆ, ಮತ್ತಷ್ಟು ತ್ಯಾಜ್ಯ ವನ್ನು ಕೈಗಾರಿಕಾ ಆವರಣದಲ್ಲಿಯೇ ಶೇಖರಿಸಿಟ್ಟುಕೊಳ್ಳಲಾಗುತ್ತಿತ್ತು. ಸಂಗ್ರಹವಾದ ತ್ಯಾಜ್ಯದ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅನಿ ವಾರ್ಯವಾಗಿ ಕಾರ್ಖಾನೆ ಆಡಳಿತ ಮಂಡಳಿ ರಸ್ತೆ ಬದಿಯಲ್ಲಿ ರಾತ್ರೋರಾತ್ರಿ ಸುರಿ ಯುವುದಕ್ಕೆ ಮುಂದಾಗುತ್ತಿತ್ತು. ಇದರಿಂದಾಗಿ ರಿಂಗ್ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆ ಬದಿಯಲ್ಲಿ ಕೈಗಾರಿಕಾ ತ್ಯಾಜ್ಯ ರಾಶಿ ಕಂಡು ಬರುತ್ತಿದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ಪರಿಸರ ಮಾಲಿನ್ಯ ನಿಯಂ ತ್ರಣ ಮಂಡಳಿ ಎಲ್ಲಾ ಕೈಗಾರಿಕೆಗಳಿಗೂ ಸುತ್ತೋಲೆ ನೀಡಿ, ತ್ಯಾಜ್ಯವನ್ನು ರಸ್ತೆ ಬದಿ ಸುರಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.
ಆದರೂ ರಾತ್ರಿ ವೇಳೆ ಕೈಗಾರಿಕಾ ತ್ಯಾಜ್ಯ ರಸ್ತೆ ಬದಿ ಪ್ರತ್ಯಕ್ಷವಾಗುತ್ತಿತ್ತು. ಈ ಹಿನ್ನೆಲೆ ಯಲ್ಲಿ 15 ದಿನದ ಹಿಂದೆ ಏಕಗವಾಕ್ಷಿ ಸಭೆ ನಡೆಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಶೀಘ್ರದಲ್ಲೇ ಡಂಪಿಂಗ್ ಯಾರ್ಡ್‍ಗೆ ಸ್ಥಳ ಗುರುತಿಸುವಂತೆ ಕೆಐಎಡಿಬಿಗೆ ಸೂಚನೆ ನೀಡಿದ್ದಾರೆ. ಸರ್ಕಾರಿ ಜಾಗ ಇಲ್ಲದಿದ್ದರೆ, ಖಾಸಗಿ ಜಾಗವನ್ನಾದರೂ ಗುರುತಿಸುವಂತೆ ಆದೇಶಿಸಿದ್ದಾರೆ. ಪ್ರಮುಖವಾಗಿ ಯಾದವಗಿರಿ, ಹೆಬ್ಬಾಳು, ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳ ತ್ಯಾಜ್ಯ ಸಂಗ್ರಹಕ್ಕೆ ತುರ್ತಾಗಿ ಡಂಪಿಂಗ್ ಯಾರ್ಡ್ ನಿರ್ಮಿಸುವಂತೆ ಸೂಚಿಸಿರುವುದರಿಂದ, ಕೆಐಎಡಿಬಿ ಜಾಗ ಹುಡುಕುವುದರಲ್ಲಿ ನಿರತವಾಗಿದೆ. ಹೂಟ ಗಳ್ಳಿಯಲ್ಲಿ ಎರಡು ಎಕರೆ ಜಾಗ ದೊರೆ ತಿರುವುದರಿಂದ ಆ ಭಾಗದ ಕೈಗಾರಿಕೆಗಳ ತ್ಯಾಜ್ಯ ವಿಲೇವಾರಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದು, ಯಾರ್ಡ್ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಸಮಸ್ಯೆ ಉಲ್ಭಣಿಸದಿರಲಿ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಂ.ಬಿ.ಪ್ರಕಾಶ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಪಯುಕ್ತ ತ್ಯಾಜ್ಯ ಉತ್ಪಾದನೆಯಾಗುತ್ತ್ತಿದೆ. ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವು ದಕ್ಕೆ ಇದುವರೆಗೂ ಕ್ರಮ ಕೈಗೊಂಡಿರ ಲಿಲ್ಲ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ವಿದ್ಯಾರಣ್ಯಪುರಂನಲ್ಲಿರುವ ಸೂಯೇಜ್ ಫಾರಂ ರೀತಿಯಲ್ಲೇ ಮುಂದಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸುತ್ತಿತ್ತು. ಈ ಹಿನ್ನೆಲೆ ಯಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸ ಲಾಗುತ್ತಿದೆ. ಕಾರ್ಖಾನೆಗಳಲ್ಲಿ ಉತ್ಪತ್ತಿ ಯಾಗುವ ಕಬ್ಬಿಣ, ಪೇಪರ್, ಯಂತ್ರದ ಬಿಡಿಭಾಗಗಳನ್ನು ಪುನರ್ ಬಳಕೆಗೆ ನೀಡಲಾಗುತ್ತದೆ. ಈಗಾಗಲೇ ಕೆಲವು ಸ್ಕ್ರಾಪ್ ಡೀಲರ್‍ಗಳು ತ್ಯಾಜ್ಯ ಖರಿದಿಸಲು ಮುಂದೆ ಬರುತ್ತಿದ್ದಾರೆ ಎಂದರು.
ವಿಂಗಡಿಸಿ ನೀಡಬೇಕು
ಹೊಸ ಕೈಗಾರಿಕಾ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ಇವೆ. ಹಳೆಯ ಕೈಗಾರಿಕಾ ಪ್ರದೇಶದಲ್ಲಿ ಇರಲಿಲ್ಲ. ಇದರಿಂದ ಕೈಗಾರಿಕಾ ತ್ಯಾಜ್ಯದ ವ್ಯವಸ್ಥಿತ ವಿಲೇವಾರಿ ಸಾಧ್ಯವಾಗಿರಲಿಲ್ಲ. ಹೆಬ್ಬಾಳು, ಮೇಟಗಳ್ಳಿ, ಯಾದವಗಿರಿಯಲ್ಲಿ ಸ್ಥಳವಿಲ್ಲ. ಜಾಗ ಗುರುತಿಸಿ. ಇಲ್ಲದಿದ್ದರೆ ಖಾಸಗಿ ಭೂಮಿಯನ್ನಾದರೂ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಕೈಗಾರಿಕೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ವಿಷಕಾರಿ, ಗಾಜು ಸೇರಿದಂತೆ ಅಪಾಯಕಾರಿ ತ್ಯಾಜ್ಯವನ್ನು ಕೆಂಪು ವಿಭಾಗದಲ್ಲಿ ವಿಂಗಡಿಸಬೇಕು. ಇನ್ನಿತರ ವಸ್ತುಗಳನ್ನು ಹಳದಿ ವಿಭಾಗದಲ್ಲೂ ಹಾಗೂ ಹಸಿ ಮತ್ತು ಒಣ ಕಸವನ್ನು ಹಸಿರು ವಿಭಾಗದಲ್ಲಿ ವಿಂಗಡಿಸಿ ಪರಿಸರ ನಿಯಂತ್ರಣ ಮಂಡಳಿಗೆ ಒಪ್ಪಿಸಿದರೆ, ಅವುಗಳನ್ನು ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ 14 ಕೈಗಾರಿಕಾ ಪ್ರದೇಶವಿದ್ದು, ನೂರಾರು ಸಣ್ಣ, ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳಿವೆ. ಡಂಪಿಂಗ್ ಯಾರ್ಡ್ ನಿರ್ಮಿಸುವುದರಿಂದ ಕೈಗಾರಿಕಾ ತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಜಿಲ್ಲಾ ಕೈಗಾರಿಕಾ ಸಂಸ್ಥೆ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಅಭಿಪ್ರಾಯಪಟ್ಟರು.
ಎಂ.ಟಿ.ಯೋಗೇಶ್ ಕುಮಾರ್