ಮೈಸೂರು: ಹೋರಾಟದ ಕುಟುಂಬದಿಂದ ಬಂದು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ರಾಜಕಾರಣ ಪ್ರವೇಶಿಸಿ, ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆ ಅಲಂಕರಿಸಿ ಉತ್ತಮ ಆಡಳಿತ ನೀಡುವ ಮೂಲಕ ದೇಶವನ್ನು ವಿಶ್ವಮಟ್ಟ ದಲ್ಲಿ ಗುರ್ತಿಸುವಂತೆ ಮಾಡಿದವರು ದಿ.ರಾಜೀವ್‍ಗಾಂಧಿ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಇಂದಿಲ್ಲಿ ತಿಳಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿ ಯಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಸದ್ಭಾವನಾ ದಿನದ ಅಂಗವಾಗಿ ರಾಜೀವ್‍ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರು ಮಾತನಾಡಿದರು.
ರಾಜೀವ್‍ಗಾಂಧಿ ಅವರ ಆಡಳಿತ ವೈಖರಿ, ಆದರ್ಶ, ವಿಚಾರ, ಜೀವನ ಪದ್ಧತಿ ಎಲ್ಲರಿಗೂ ಮಾದರಿಯಾಗಿದೆ. ಯಾವುದೇ ಜಾತಿ, ವರ್ಗ, ಧರ್ಮ ಭೇದ ಮಾಡದೆ ಎಲ್ಲ ವರ್ಗಗಳನ್ನು ಒಟ್ಟಾಗಿ ಕೊಂಡೊ ಯ್ಯುವ ಮೂಲಕ ಸಂಘಟನೆ ಮಾಡಿ ದರು. ಕಾಂಗ್ರೆಸ್ ಎಂದರೆ ಸಂಘಟನೆ ಎಂಬುದನ್ನು ಸಾಬೀತು ಮಾಡಿ ತೋರಿ ಸಿದ ಸಜ್ಜನ ರಾಜಕಾರಣಿ. ಅವರ ಪ್ರೇರಣೆ ಯಂತೆ ದೇಶವನ್ನು ಕಟ್ಟಲು ನಾವೆಲ್ಲರೂ ಸಂಕಲ್ಪ ತೊಡಬೇಕು ಎಂದರು.
ರಾಜೀವ್‍ಗಾಂಧಿ ಸದ್ಭಾವನಾ ದಿನದ ಅಂಗವಾಗಿ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗಿಡ ಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಎಂಎಲ್‍ಸಿ ಆರ್.ಧರ್ಮಸೇನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಧಾಮಣಿ, ಪಕ್ಷದ ಪದಾಧಿಕಾರಿಗಳಾದ ಶಿವಸ್ವಾಮಿ, ಈಶ್ವರ ಚಕ್ಕಡಿ, ಭಾಸ್ಕರ್ ಗೌಡ, ಶಿವಣ್ಣ, ಡೈರಿ ವೆಂಕಟೇಶ್, ಸುಶೀಲಾ ಕೇಶವ ಮೂರ್ತಿ, ಎಂ.ಕೆ.ಅಶೋಕ್, ಲೀಲಾ ಪಂಪಾಪತಿ, ಪಿ.ರಾಜು, ಚಂದ್ರು, ಆರ್. ಎಚ್.ಕುಮಾರ್, ಡಾ.ಸುಜಾತಾ ರಾವ್, ಟಿ.ಎಸ್.ರವಿಶಂಕರ್, ಶಾರದಾ ಸಂಪತ್ತು, ದೀಪಕ್‍ರಾಜ್ ಇನ್ನಿತರರು ಉಪಸ್ಥಿತರಿದ್ದರು.