ಮೈಸೂರು: ಸಮಸ್ತ ಕನ್ನಡಿಗರ ಆಸ್ತಿಯಾಗಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಇಂದು ಒಂದು ಗುಂಪಿನ ಹಿಡಿತಕ್ಕೆ ಸಿಲುಕಿದ್ದು, ಈ ಗುಂಪು ಪರಿಷತ್ತಿನ ಆರ್ಥಿಕ ಮೂಲ ವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಆರೋಪಿಸಿದರು.
ಮೈಸೂರಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ ವನ ಆವರಣದ ಬಯಲು ರಂಗಮಂದಿ ರದಲ್ಲಿ ಮೈಸೂರು ಕನ್ನಡ ವೇದಿಕೆ ವತಿ ಯಿಂದ ಕಾರ್ಮಿಕ ದಿನಾಚರಣೆ ಅಂಗ ವಾಗಿ ಮಂಗಳವಾರ ಹಮ್ಮಿಕೊಂಡಿದ್ದ `ಕಾಯಕ ಯೋಗಿ ಪ್ರಶಸ್ತಿ’ ಪ್ರದಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
105 ವರ್ಷಗಳ ಹಿಂದೆ ಮೇ 5ರಂದು ಕಸಾಪ ಅಸ್ತಿತ್ವಕ್ಕೆ ಬಂದಿತು. ಈ ಸಂದರ್ಭ ದಲ್ಲಿ ಕನ್ನಡ ನಾಡು ಹರಿದು ಹಂಚಿ ಹೋಗಿ ಏಕೀಕರಣದ ಕೂಗು ಕೇಳಿ ಬರುತ್ತಿತ್ತು. ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆ ಯರ್ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಡಿ ಪಾಯ ಹಾಕಿದರು. ಆದರೆ ಇಂದು ಅಂತಹ ಮಹತ್ವದ ಸಂಸ್ಥೆ ಒಂದು ಗುಂಪಿನ ಕಪಿಮುಷ್ಟಿಗೆ ಸಿಲುಕುವಂತಾಗಿದೆ ಎಂದು ಕಿಡಿಕಾರಿದರು.
ಪರಿಷತ್ತಿನ ಹಾಲಿ ಅಧ್ಯಕ್ಷ ಮನು ಬಳಿಗಾರ್ ಹಾಗೂ ಪದಾಧಿಕಾರಿಗಳು ಪರಿ ಷತ್ತನ್ನು ಇಂದು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದಾರೆ. 3 ವರ್ಷಕ್ಕೆ ಸೀಮಿತವಾಗಿದ್ದ ಅಧ್ಯಕ್ಷರ ಅಧಿಕಾರಾವಧಿಯನ್ನು ಮನು ಬಳಿಗಾರ್ 5 ವರ್ಷಕ್ಕೆ ವಿಸ್ತರಿಸಿಕೊಂಡಿದ್ದಾರೆ. ಪರಿ ಷತ್ತಿನ ಸದಸ್ಯತ್ವ ಶುಲ್ಕವನ್ನು ದುಪಟ್ಟು ಮಾಡಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿಷತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸಿ ಕನ್ನಡಾಭಿಮಾನಿಗಳು ಹೈಕೋರ್ಟ್ ಮೊರೆ ಹೋಗಿದ್ದು, ಮೇ 23ರ ನಂತರ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.
ಕಸಾಪ ಬೈಲಾದಲ್ಲಿ (ಉಪವಿಧಿ) ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಾಪನೆ ಮಾಡುವುದಕ್ಕೆ ಒತ್ತು ನೀಡಬೇಕೆಂದು ಉಲ್ಲೇಖಿಸಲಾಗಿದೆ. ಆದರೆ ಇಂದಿನ ಕಸಾಪ ಅಧ್ಯಕ್ಷರು ಹಾಗೂ ಪದಾಧಿ ಕಾರಿಗಳು ಒಂದು ಕನ್ನಡ ಮಾಧ್ಯಮ ಶಾಲೆ ಆರಂಭಿಸುವ ಗೋಜಿಗೆ ಹೋಗಿಲ್ಲ. ಜೊತೆಗೆ ಉಪವಿಧಿ ಪ್ರಕಾರ ಕನ್ನಡ ಮಾಧ್ಯಮ ಶಾಲೆಗಳಿಗೆ ಉತ್ತೇಜನ ನೀಡು ವಂತೆ ಕಾರ್ಯಕ್ರಮಗಳನ್ನು ಪರಿಷತ್ತು ನಡೆಸಬೇಕು. ಹೀಗಿದ್ದರೂ ಅದನ್ನೂ ಮಾಡಿಲ್ಲ ಎಂದು ಆಪಾದಿಸಿದರು.
ಇದಕ್ಕೂ ಮುನ್ನ 8 ಮಂದಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಕೂಲಿ ಕಾರ್ಮಿಕ ಭೈರಪ್ಪ, ವಿಶೇಷಚೇತನರಾದ (ಟೈಲರಿಂಗ್ ವೃತ್ತಿ) ರೇಣುಕಾ, ಮೆಕ್ಯಾನಿಕ್ ಶರವಣ, ಮೊಬೈಲ್ ದುರಸ್ತಿಗಾರ ಸತೀಶ್, ಕೊಳಾಯಿ ಕಾರ್ಮಿಕ ಎಂ.ಮಹೇಶ್, ಮಾಧ್ಯಮ ಕ್ಷೇತ್ರದ ಜಿ.ಜಯಂತ್, ಬಿ.ಆರ್.ಸವಿತಾ ಹಾಗೂ ಕೆ.ಮಹೇಶ್ ಅವರು ಪ್ರಶಸ್ತಿಗೆ ಭಾಜನರಾದರು.
ಮೈಸೂರು ಮಹಾನಗರ ಪಾಲಿಕೆ ಸದ ಸ್ಯರೂ ಆದ ಮೈಸೂರು ಕೋ ಆಪ ರೇಟಿವ್ ಬ್ಯಾಂಕ್ ಅಧ್ಯಕ್ಷ ಎಸ್.ಬಿ.ಎಂ. ಮಂಜು ಪ್ರಶಸ್ತಿಗಳನ್ನು ಪ್ರದಾನ ಮಾಡಿ ದರು. ಸಾಹಿತಿ ಡಾ.ವಿ.ಮುನಿವೆಂಕಟಪ್ಪ, ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ರಾಜಪ್ಪ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮತ್ತಿತರರು ಹಾಜರಿದ್ದರು.