ಮರು ಮೌಲ್ಯಮಾಪನದಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚಾದ 8 ಅಂಕ
ಮೈಸೂರು

ಮರು ಮೌಲ್ಯಮಾಪನದಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚಾದ 8 ಅಂಕ

May 28, 2019

ಮೈಸೂರು: ಮರು ಮೌಲ್ಯಮಾಪನದಿಂದಾಗಿ ಮೈಸೂರಿನ ವಿದ್ಯಾರ್ಥಿ ಯೊಬ್ಬಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 8 ಹೆಚ್ಚುವರಿ ಅಂಕ ಲಭಿಸಿದೆ. ಫಲಿತಾಂಶ ಪ್ರಕಟವಾದಾಗ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿನಿ ಮಂದಾರ ಜಗದೀಶ್, ಕನ್ನಡದಲ್ಲಿ 129, ಇಂಗ್ಲಿಷ್ ಹಾಗೂ ಗಣಿತದಲ್ಲಿ ಶೇ.100, ಕನ್ನಡ ಹಾಗೂ ವಿಜ್ಞಾನದಲ್ಲಿ ತಲಾ 99, ಸಮಾಜ ವಿಜ್ಞಾನದಲ್ಲಿ 89 ಅಂಕ ಬಂದಿತ್ತು. ಅತೀ ಕಡಿಮೆ ಅಂಕ ಬಂದಿದ್ದ ಸಮಾಜ ವಿಜ್ಞಾನ ಉತ್ತರ ಪತ್ರಿಕೆಯ ಫೋಟೋ ಪ್ರತಿ ತರಿಸಿಕೊಂಡು, ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಮರು ಮೌಲ್ಯ ಮಾಪನದ ಬಳಿಕ ಸಮಾಜ ವಿಜ್ಞಾನದಲ್ಲಿ 8 ಅಂಕ ಸೇರ್ಪಡೆಯಾಗಿ ಒಟ್ಟು 97 ಅಂಕ ದಕ್ಕಿದೆ. ಇದರೊಂದಿಗೆ ಒಟ್ಟು 625ಕ್ಕೆ 615 ಅಂಕ ಗಳನ್ನು ಪಡೆದಂತಾಗಿದೆ. ಮಂದಾರ, ಬಿ.ಜಗದೀಶ್ ಹಾಗೂ ಮಮತಾ ದಂಪತಿ ಪುತ್ರಿ.

Translate »