ಅಪಘಾತದಲ್ಲಿ ಗಾಯಗೊಂಡಿದ್ದ ಪೈಲ್ವಾನ್ ಪ್ರದೀಪ್ ಸಾವು
ಮೈಸೂರು

ಅಪಘಾತದಲ್ಲಿ ಗಾಯಗೊಂಡಿದ್ದ ಪೈಲ್ವಾನ್ ಪ್ರದೀಪ್ ಸಾವು

May 28, 2019

ಮೈಸೂರು: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಆದರ್ಶ ಬಡಾವಣೆ ನಿವಾಸಿ ಪೈಲ್ವಾನ್ ಪ್ರದೀಪ್ ಅಲಿಯಾಸ್ ಪಲ್ಲಿ(36) ಮೃತಪಟ್ಟವ ರಾಗಿದ್ದು, ಕಳೆದ ಶನಿವಾರ ರಾತ್ರಿ ಶ್ರೀರಂಗಪಟ್ಟಣದಲ್ಲಿ ಮದುವೆ ಮುಗಿಸಿಕೊಂಡು ಬೈಕ್‍ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ರಿಂಗ್ ರೋಡ್ ಭಾರತ್ ಕ್ಯಾನ್ಸರ್ ಆಸ್ಪತ್ರೆ ಬಳಿ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು, ಪತ್ನಿ ದ್ರಾಕ್ಷಾ ಯಿಣಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಸ್ನೇಹಿತರು, ಬಂಧು-ಬಳಗವನ್ನು ಅಗಲಿದ್ದು, ಮಂಗಳವಾರ ಮಧ್ಯಾಹ್ನ 12.30ಕ್ಕೆ ವಿಜಯನಗರ ಹೈಟೆಕ್ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲ ಗಳಿಂದ ತಿಳಿದುಬಂದಿದೆ. ಸ್ನೇಹ ಗ್ರೂಪ್ ಸ್ನೇಹಿತರು ಹಾಗೂ ಪಡುವಾರಹಳ್ಳಿ ಗ್ರಾಮಸ್ಥರು ಪ್ರದೀಪ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Translate »