ಮೈಸೂರು:ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ನಮಗೆ ಅಧಿಕಾರಿಗಳು, ಪೊಲೀಸರು ಹಾಗೂ ಗ್ರಾಮಸ್ಥರ ಕಿರುಕುಳ ಹೆಚ್ಚಾ ಗಿದ್ದು, ನಮಗೆ ರಕ್ಷಣೆ ದೊರೆಯದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಮೈಸೂರು ಡಿಸಿ ಕಚೇರಿ ಎದುರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ದ್ದೇವೆ ಎಂದು ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿ ಕೆ.ಬಸವನಹಳ್ಳಿ ಗ್ರಾಮದ ನಾಗರಾಜೇ ಗೌಡ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಘೋಷಿಸಿದರು.
ನನಗೆ ಪಿತ್ರಾರ್ಜಿತ ಆಸ್ತಿ ಸರ್ವೆ ನಂ.40/4ರಲ್ಲಿ 2 ಎಕರೆ 30 ಗುಂಟೆ ಜಮೀನು, 1/11ರಲ್ಲಿ 1 ಎಕರೆ 32 ಗುಂಟೆ ಜಮೀನಿದ್ದು, ಸರ್ವೆ ಮಾಡಿಸಿದಾಗ 8 ಗುಂಟೆ ಜಮೀನನ್ನು ಪಕ್ಕದ ಜಮೀನಿನ ಲೇಟ್ ಸಣ್ಣೇ ಗೌಡರ ಮಕ್ಕಳಾದ ಶಿವಣ್ಣೇಗೌಡ, ಕಾಂತರಾಜು, ಚಂದ್ರಶೇಖರ, ಲೇಟ್ ಪ್ರಕಾಶನ ಮಗ ಅಭಿ ಎಂಬ ವರು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲದೆ ನಮ್ಮ ಜಾಗದಲ್ಲಿ ನಾವು ಓಡಾಡದಂತೆ ಬೇಲಿ ನಿರ್ಮಿಸಿಕೊಂಡಿ ದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸಿ ಪ್ರಕರಣ ದಾಖ ಲಿಸಿ, ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ. ಪೊಲೀಸರೂ ನಮಗೆ ರಕ್ಷಣೆ ನೀಡುತ್ತಿಲ್ಲ. ಈ ಬಗ್ಗೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ನಮ್ಮ ರಕ್ಷಣೆಗೆ ಯಾರೂ ಧಾವಿಸುತ್ತಿಲ್ಲ ಎಂದು ದೂರಿ ದರು. ಇನ್ನಾದರೂ ನಮಗಾಗುತ್ತಿರುವ ಕಿರುಕುಳ ತಪ್ಪಿಸಿ, ಅತಿಕ್ರಮವಾಗಿ ಹಾಕಿರುವ ಬೇಲಿಯನ್ನು ತೆರವು ಗೊಳಿಸಬೇಕು. ಒತ್ತುವರಿ ಮಾಡಿರುವ 8 ಗುಂಟೆ ಜಮೀನು ಬಿಡಿಸಿಕೊಟ್ಟು ನೆಮ್ಮದಿಯಿಂದಿರಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಅವರು ಮನವಿ ಮಾಡಿದರು. ನಮಗೆ ಇನ್ನೂ ನ್ಯಾಯ ದೊರೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಮೂ ಹಿಕ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮಗೆ ಉಳಿದಿರುವ ಮಾರ್ಗ ಎಂದರು. ಸುದ್ದಿಗೋಷ್ಠಿಯಲ್ಲಿ ಕರುಣಾಕ್ಷಿ ಇನ್ನಿತರರು ಉಪಸ್ಥಿತರಿದ್ದರು.