ಕಳೆಯಿತು ಬೇಸಿಗೆ ಮರಳಿದವು ಮಕ್ಕಳು ಶಾಲೆಗೆ
ಮೈಸೂರು

ಕಳೆಯಿತು ಬೇಸಿಗೆ ಮರಳಿದವು ಮಕ್ಕಳು ಶಾಲೆಗೆ

May 30, 2019

ಮೈಸೂರು: ಇಂದಿನಿಂದ ಪ್ರಾಥ ಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು, ಬೇಸಿಗೆ ರಜೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಳುಗಿದ್ದ ಮಕ್ಕ ಳೀಗ ತಮ್ಮ ಶಾಲೆಗಳತ್ತ ಮರಳಿದ್ದಾರೆ. ಎರಡು ತಿಂಗಳಿಂದ ರಜೆಯ ಸಂಭ್ರಮದಲ್ಲಿ ಕಾಲ ಕಳೆದಿದ್ದ ಮಕ್ಕಳೀಗ ಮಣ ಭಾರದ ಬ್ಯಾಗ್‍ಗಳನ್ನು ಹೊತ್ತು ಶಾಲೆಗಳತ್ತ ಮುಖ ಮಾಡಿದರು. ಸರ್ಕಾರಿ, ಅನುದಾನಿತ, ಖಾಸಗಿ, ಸಮಾಜ ಕಲ್ಯಾಣ ಹಾಗೂ ಕೇಂದ್ರೀಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 3,457 (ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿಯಂತೆ) ಶಾಲೆಗಳಿದ್ದು, ಬುಧವಾರದಿಂದ ಈ ಶಾಲೆಗಳಲ್ಲಿ 2019- 20ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿತು.

ಬೇಸಿಗೆ ರಜೆಯಲ್ಲಿ ಅಜ್ಜ-ಅಜ್ಜಿ ಹಾಗೂ ನೆÀಂಟರಿಷ್ಟರ ಊರುಗಳಿಗೆ ತೆರಳಿದ್ದ ಮಕ್ಕಳು ಇಂದಿನಿಂದ ಶಾಲಾ ವಾತಾವರಣದತ್ತ ಉತ್ಸಾಹದಿಂದ ಹೆಜ್ಜೆ ಇಟ್ಟಿದ್ದಾರೆ. ಈಗಾ ಗಲೇ ಪೋಷಕರು ಪಠ್ಯಪುಸ್ತಕ, ಲೇಖನ ಸಾಮಗ್ರಿ ಸೇರಿದಂತೆ ಸಮವಸ್ತ್ರ ಸಿದ್ಧತೆಯಲ್ಲಿ ತೊಡಗಿದ್ದು, ಶಾಲಾ ಶುಲ್ಕ ಪಾವತಿಗೂ ವ್ಯವಸ್ಥೆ ಮಾಡಿಕೊಳ್ಳುವತ್ತಲೂ ಗಮನ ಕೇಂದ್ರೀಕರಿಸಿದ್ದಾರೆ. 1,915 ಪ್ರಾಥಮಿಕ ಶಾಲೆ (1ರಿಂದ 8ನೇ ತರಗತಿ) ಹಾಗೂ 232 ಪ್ರೌಢಶಾಲೆ ಸೇರಿದಂತೆ ಒಟ್ಟು 2,147 ಸರ್ಕಾರಿ ಶಾಲೆಗಳು ಜಿಲ್ಲೆಯಲ್ಲಿದ್ದು, ಈ ಶಾಲೆಗಳಿಗೆ ಮರಳಿದ ಮಕ್ಕಳಿಗೆ ಪಾಠ-ಪ್ರವಚನ ಆರಂಭಿ ಸಲು ಶಿಕ್ಷಕರು ಸಿದ್ಧತೆ ನಡೆಸಿದ್ದಾರೆ. 139 ಪ್ರಾಥಮಿಕ ಶಾಲೆ ಹಾಗೂ 136 ಪ್ರೌಢಶಾಲೆ ಸೇರಿದಂತೆ ಒಟ್ಟು 275 ಅನುದಾನಿತ ಶಾಲೆಗಳಿದ್ದರೆ, 581 ಪ್ರಾಥಮಿಕ ಹಾಗೂ 329 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 910 ಖಾಸಗಿ ಶಾಲೆಗಳು ಜಿಲ್ಲೆಯಲ್ಲಿವೆ.

ಅದೇ ರೀತಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 68 ಪ್ರಾಥಮಿಕ ಹಾಗೂ 45 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 113 ಶಾಲೆಗಳಿದ್ದರೆ, 6 ಪ್ರಾಥಮಿಕ ಹಾಗೂ 6 ಪ್ರೌಢಶಾಲೆಗಳು ಸೇರಿದಂತೆ 12 ಕೇಂದ್ರೀಯ ಶಾಲೆಗಳಾ ಗಿವೆ. ಜಿಲ್ಲೆಯ ಈ ಎಲ್ಲಾ ಶಾಲೆಗಳಲ್ಲೂ ಇಂದಿನಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗಿದೆ. ಏ.10ರಿಂದ ಮೇ 28ರವರೆಗೆ ರಜೆಯ ಮಜಾ ಅನು ಭವಿಸಿದ್ದ ಮಕ್ಕಳು ಶೈಕ್ಷಣಿಕ ವಾತಾವರಣಕ್ಕೆ ಇಂದಿನಿಂದ ತೆರೆದುಕೊಂಡಿದ್ದಾರೆ.

Translate »