ದಸಂಸ ಹರಿದು ಹಂಚಿ ಹೋಗಿದ್ದಕ್ಕೆ ಮುಖಂಡರ ತೀವ್ರ ವಿಷಾದ
ಮೈಸೂರು

ದಸಂಸ ಹರಿದು ಹಂಚಿ ಹೋಗಿದ್ದಕ್ಕೆ ಮುಖಂಡರ ತೀವ್ರ ವಿಷಾದ

June 2, 2019

ಮೈಸೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ-ಅಂಬೇ ಡ್ಕರ್ ವಾದ) ಮೈಸೂರು ಜಿಲ್ಲಾ ಶಾಖೆಯ ಸರ್ವ ಸದಸ್ಯರ ಸಭೆ ಶನಿವಾರ ಮೈಸೂ ರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು.

ಸಂಘಟನೆ ಗಟ್ಟಿಗೊಳಿಸುವ ಹಿನ್ನೆಲೆ ಯಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಘಟ ನೆಯ ಹಿರಿಯ ಮುಖಂಡ ಹಾಗೂ ಲೇಖಕ ಕೆ.ಗೋವಿಂದರಾಜು ಮಾತನಾಡಿ, ದಸಂಸ ಶೋಷಿತ ಸಮುದಾಯದ ಕಣ್ಣು ತೆರೆಸುವಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಒಂದು ಕಾಲದಲ್ಲಿ ದಸಂಸ ಕಾರ್ಯ ಕರ್ತರು ಪರಸ್ಪರ ಗೌರವ, ಪ್ರೀತಿ ಹಾಗೂ ವಿಶ್ವಾಸದಿಂದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದರು. ಆದರೆ ಇಂದು ದಸಂಸ ಹರಿದು ಹಂಚಿ ಹೋಗಿದ್ದು, ಇದು ಬೇಸರ ಉಂಟು ಮಾಡಲಿದೆ ಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ದಸಂಸ ಮೈಸೂರು ವಿಭಾಗೀಯ ಪ್ರಧಾನ ಸಂಚಾಲಕ ಕೆ.ಸಿದ್ದ ರಾಜು ದೊಡ್ಡಹಿಂಡುವಾಡಿ ಮಾತನಾಡಿ, ದಸಂಸ ಆರಂಭದ ದಿನಗಳಲ್ಲಿ ಸಂಘ ಟನಾತ್ಮಕವಾಗಿ ಹೋರಾಟ ನಡೆಸಿತು. ಆ ಬಳಿಕ ಕವಲು ದಾರಿಯಲ್ಲಿ ಸಾಗಿದ ಹಿನ್ನೆಲೆಯಲ್ಲಿ ಚಳವಳಿಯ ನಿರೀಕ್ಷಿತ ಫಲ ದೊರೆಯಲಿಲ್ಲ. ಇನ್ನಾದರೂ ತಾಳ್ಮೆ ಮತ್ತು ಒಗ್ಗಟ್ಟಿನಿಂದ ಸಂಘಟನೆ ಗಟ್ಟಿಗೊಳಿಸಲು ಗಮನ ಕೇಂದ್ರೀಕರಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಹಾಗೂ ಶೋಷಿತ ಸಮುದಾ ಯಕ್ಕೆ ನೀಡಿದ ಕೊಡುಗೆ ಅಪಾರ. ಇದಕ್ಕೆಲ್ಲಾ ಕಾರಣವಾಗಿದ್ದು ಅವರಲ್ಲಿದ್ದ ತಾಳ್ಮೆ. ಅವರು ಅಂದು ತಾಳ್ಮೆ ಕಳೆದುಕೊಂಡಿದ್ದರೆ ಶೋಷಿತ ಸಮುದಾಯಗಳು ಇಂದು ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ನಾವಿಂದು ಅರ್ಥ ಮಾಡಿಕೊಳ್ಳ ಬೇಕು ಎಂದರು.

ದೇಶದ ಸಂವಿಧಾನ ವಿರೋಧಿಸಿದ ವರು ಅದೇ ಸಂವಿಧಾನವನ್ನು ಅರ್ಥೈಸಿ ಕೊಂಡು ಹಳ್ಳಿಯಿಂದ ಡೆಲ್ಲಿಯವರೆಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲರಾಗುತ್ತಿದ್ದಾರೆ. ಆದರೆ ನಾವು ಅಂಬೇಡ್ಕರ್ ಅವರು ಅಂದೇ ಬೆಂಕಿಗಾ ಹುತಿ ಮಾಡಿದ ಮನುಧರ್ಮ ಶಾಸ್ತ್ರದ ಬಗ್ಗೆ ಟೀಕೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದೇವೆ. ಇನ್ನಾದರೂ ನಾವು ಸಂವಿಧಾನದ ಬಗ್ಗೆ ಸಮಗ್ರವಾಗಿ ತಿಳುವಳಿಕೆ ಬೆಳೆಸಿಕೊಂಡು ರಾಜಕೀಯ ಅಧಿಕಾರ ಹಿಡಿ ಯಲು ಮುಂದಾಗಬೇಕಿದೆ ಎಂದು ಹೇಳಿದರು.

`ದಸಂಸ ಸವಾಲು ಮತ್ತು ಜವಾ ಬ್ದಾರಿಗಳು’ ಕುರಿತು ದಸಂಸ ಮೈಸೂರು ವಿಭಾಗೀಯ ಉಪಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ ವಿಷಯ ಮಂಡಿಸಿದರು. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಹೆಚ್.ಪಿ.ದಿವಾ ಕರ್, ನಗರ ಸಂಚಾಲಕ ಕೆ.ನಂಜಪ್ಪ ಬಸವನಗುಡಿ ಸೇರಿದಂತೆ ಕಾರ್ಯ ಕರ್ತರು ಪಾಲ್ಗೊಂಡಿದ್ದರು.

Translate »