ಮಾತೃಶ್ರೀ ಯೋಜನೆ: ನೋಂದಣಿ ಕಾರ್ಯ ಆರಂಭ
ಮೈಸೂರು

ಮಾತೃಶ್ರೀ ಯೋಜನೆ: ನೋಂದಣಿ ಕಾರ್ಯ ಆರಂಭ

June 2, 2019

ಮೈಸೂರು: ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ರಾಜ್ಯದಲ್ಲಿ 2018ನೇ ನವೆಂಬರ್‍ರಿಂದ ಅನುಷ್ಠಾನಗೊಳಿಸಲಾ ಗಿದ್ದು, ಈ ಯೋಜನೆಯಡಿ ಜಿಲ್ಲೆಯ ಅರ್ಹ ಗರ್ಭಿಣಿ ಮತ್ತು ಬಾಣಂತಿಯರಿಗೆ ನೋಂದಣಿ ಕಾರ್ಯ ಆರಂಭವಾಗಿದೆ. ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯು ಬಿ.ಪಿ.ಎಲ್ ಕುಟುಂಬದ ಗರ್ಭಿಣಿ ಮಹಿಳೆಯರಿಗೆ (7 ತಿಂಗಳು ತುಂಬಿದ ಗರ್ಭಿಣಿ ಮತ್ತು ಬಾಣಂತಿಯರು ) ಮೊದಲ 2 ಜೀವಂತ ಹೆರಿಗೆಗೆ ನೀಡುವ ಸೌಲಭ್ಯವಾಗಿದ್ದು ರೂ.6,000/- ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್‍ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ನೋಂದಣಿಗೆ ಫಲಾನು ಭವಿ ಹಾಗೂ ಪತಿಯ ಆಧಾರ್ ಕಾರ್ಡ್, ಪ್ರತಿ ತಾಯಿ ಕಾರ್ಡ್, ಫಲಾನುಭವಿಯ ಬ್ಯಾಂಕ್ ಖಾತೆಯ ವಿವರ (ಆಧಾರ್ ಲಿಂಕ್ಡ್), ಬಿ.ಪಿ.ಎಲ್ ಕಾರ್ಡ್ ಪ್ರತಿ (ತಾಯಿ ಅಥವಾ ಪತಿ ಮನೆಯ ಬಿಪಿಎಲ್ ಕಾರ್ಡ್ ಪ್ರತಿ) ದಾಖಲೆಗಳು ಬೇಕಾಗಿರುತ್ತವೆ.

ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಕೆಲಸದ ವೇಳೆಯಲ್ಲಿ ಚೆಲು ವಾಂಬ ಆಸ್ಪತ್ರೆ ಮೈಸೂರು.(ಒ.ಪಿ.ಡಿ ವಿಭಾಗ) ಪ್ರತಿ ಗುರುವಾರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ. ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ಮಾಡಲಾಗುವುದು. ಮಾಹಿತಿಗೆ ದೂರವಾಣಿ ಸಂಖ್ಯೆ: 0821-2495432/ 2498031 ಸಂಪರ್ಕಿಸಿ ಎಂದು ಉಪ ನಿರ್ದೇಶಕರು, ಮಹಿಳೆ ಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Translate »