ಮೈಸೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕಿ ವಿಚಾರಣೆ
ಮೈಸೂರು

ಮೈಸೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕಿ ವಿಚಾರಣೆ

June 2, 2019

ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಯ ಪಿಜಿ ಹಾಸ್ಟೆಲ್ ನಲ್ಲಿ ಪ್ರಾಧ್ಯಾಪಕಿಯೊಬ್ಬರು ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಕಾಲೇಜಿನ ವೈದ್ಯಶಾಸ್ತ್ರ (ಮೆಡಿ ಸಿನ್) ವಿಭಾಗದ ಪ್ರ್ರಾಧ್ಯಾಪಕಿ ಡಾ.ಮಂಜುಳಾ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿಬಂದಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ಡಾ. ಮಂಜುಳಾ ಅವರನ್ನು ಸಂಸ್ಥೆಯ ಸ್ನಾತಕೋತ್ತರ (ಮಹಿಳಾ ಪಿಜಿ ಹಾಸ್ಟೆಲ್) ಹಾಸ್ಟೆಲ್ ವಾರ್ಡ್‍ನ್ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಹಾಸ್ಟೆಲ್ ನಿರ್ವಹಣೆಗೆ ಬಿಡುಗಡೆಯಾದ ಅನುದಾನದಲ್ಲಿ ಅವರು ಲಕ್ಷಾಂತರ ರೂ. ದುರುಪಯೋಗಪಡಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ಡಾ.ಮಂಜುಳಾ ಅವರು ಬ್ಯಾಂಕ್ ವೈÀಯಕ್ತಿಕ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.

ಈ ಕುರಿತಂತೆ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ಡೈರೆಕ್ಟರ್ ಡಾ.ಸಿ.ಪಿ.ನಂಜ ರಾಜ್, ಪಿಜಿ ಹಾಸ್ಟೆಲ್ ವಾರ್ಡನ್ ಅವರ ವಿರುದ್ಧದ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ತಿಳಿಯಲು ವಿಚಾರಣಾ ಸಮಿತಿಯಿಂದ ಆಂತರಿಕ ವಿಚಾರಣೆ ನಡೆಸಲಾಗುತ್ತಿದೆ ಎಂದರು. ತಾವೇ ಸಮಿತಿ ಮುಖ್ಯಸ್ಥರಾಗಿದ್ದು, ಆರೋಪ ಕುರಿತು ದಾಖಲೆ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ವಿಚಾರಣೆ ಪೂರ್ಣ ಗೊಂಡ ನಂತರ ಸತ್ಯಾಂಶ ಹೊರ ಬೀಳಲಿದೆ ಎಂದೂ ಅವರು ತಿಳಿಸಿದರು.

Translate »