ಮೈಸೂರು: ಸಾಮೂ ಹಿಕ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ಸ್ಥಾಪಿಸಲು ಹವಣಿಸುತ್ತಿರುವ ಮೈಸೂರು ಜಿಲ್ಲಾಡಳಿತವು, ನಾಳೆ (ಜೂ.2) ಮೈಸೂರು ನಗರದಲ್ಲಿ ಪ್ರಥಮ ಯೋಗ ತಾಲೀಮು ನಡೆಸಲಿದೆ. ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಯೋಗ ತರ ಬೇತಿ ಸಂಸ್ಥೆಗಳ ಸಹಯೋಗದಲ್ಲಿ ಭಾರೀ ಪ್ರಮಾಣದ ಸಾಮೂಹಿಕ ಯೋಗ ಪ್ರದ ರ್ಶನ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆ ಸುತ್ತಿದೆ. ಭಾನುವಾರ (ಜೂ.2) ಬೆಳಿಗ್ಗೆ 6ರಿಂದ 7.30ಗಂಟೆವರೆಗೆ ಮೈಸೂರಿನ ಅರಮನೆ ಉತ್ತರದ್ವಾರದ ಸಮೀಪ ಜಯ ಚಾಮರಾಜೇಂದ್ರ ಒಡೆಯರ್ ಸರ್ಕಲ್ ಮತ್ತು ಚಾಮರಾಜೇಂದ್ರ ಒಡೆಯರ್ ಸರ್ಕಲ್ ನಡುವೆ ರಾಜಮಾರ್ಗದಲ್ಲಿ ಯೋಗ ತಾಲೀಮು ನಡೆಯಲಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಜೂ.21ರಂದು ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ನಡೆಯಲಿರುವ ಸಾಮೂ ಹಿಕ ಯೋಗ ಪ್ರದರ್ಶನದಲ್ಲಿ 1.25 ಲಕ್ಷ ಯೋಗ ಪಟುಗಳನ್ನು ಸೇರಿಸಲು ಉದ್ದೇ ಶಿಸಲಾಗಿದ್ದು, ಮೂಲ ಸೌಕರ್ಯ ಒದಗಿ ಸಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ.
ಯೋಗ ದಿನಾಚರಣೆ ಪೂರ್ವಾಭ್ಯಾಸ: ವಾಹನಗಳಿಗೆ ಬದಲಿ ಮಾರ್ಗ
ಮೈಸೂರು: ಯೋಗ ಫೆಡರೇಷನ್ ಆಫ್ ಮೈಸೂರು ಟ್ರಸ್ಟ್ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಾಭ್ಯಾಸವನ್ನು ಜೂ.2ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಮೈಸೂರು ನಗರದ ಚಾಮರಾಜ ಒಡೆಯರ್ ವೃತ್ತದಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗಿನ ರಸ್ತೆಯಲ್ಲಿ ನಡೆಸಲಾಗು ವುದು. ಈ ಸಂಬಂಧ ಜೂ.2ರಂದು ಬೆಳಿಗ್ಗೆ 5 ಗಂಟೆಯಿಂದ 9-30 ಗಂಟೆವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು, ಬದಲಿ ಮಾರ್ಗದಲ್ಲಿ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸಬೇಕಿದೆ. ಕೆ.ಆರ್ ವೃತ್ತದಿಂದ ಎ.ವಿ ರಸ್ತೆ ಮೂಲಕ ಚಾಮರಾಜ ಒಡೆಯರ್ ವೃತ್ತದ ಕಡೆಗೆ(ಓಲ್ಡ್ ಸ್ಟ್ಯಾಚ್ಯೂ ಕಡೆಗೆ) ಸಾಗುವ ಎಲ್ಲಾ ವಾಹನಗಳು ಕೆ.ಆರ್ ವೃತ್ತದಲ್ಲಿ ಎಸ್.ಆರ್ ರಸ್ತೆ ಮೂಲಕ ಸಾಗಬೇಕು. ಅಶೋಕ ರಸ್ತೆಯಿಂದ ಓಲ್ಡ್ ಸ್ಟ್ಯಾಚ್ಯೂ ಕಡೆಗೆ ಸಾಗುವ ಎಲ್ಲಾ ಮಾದರಿಯ ವಾಹನಗಳು ಮಹಾವೀರ ವೃತ್ತದಿಂದ ಗಾಂಧಿ ವೃತ್ತದ ಮೂಲಕ ಎಸ್.ಆರ್ ರಸ್ತೆ ತಲುಪಿ ಮುಂದೆ ಸಾಗಬೇಕು ಹಾಗೂ ಜಯಚಾಮರಾಜೇಂದ್ರ ವೃತ್ತ (ಹಾರ್ಡಿಂಜ್ ವೃತ್ತ)ದಿಂದ ಎ.ವಿ ರಸ್ತೆಗೆ ಹೊರಡುವ ವಾಹನಗಳು ಬಿ.ಎಂ ರಸ್ತೆ ಮೂಲಕ ಸಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.