ಸಾಹಿತ್ಯ ಪ್ರಜ್ಞೆಯುಳ್ಳ ಸಜ್ಜನ ರಾಜಕಾರಣಿ ಶಾಂತವೇರಿ ಗೋಪಾಲಗೌಡ
ಮೈಸೂರು

ಸಾಹಿತ್ಯ ಪ್ರಜ್ಞೆಯುಳ್ಳ ಸಜ್ಜನ ರಾಜಕಾರಣಿ ಶಾಂತವೇರಿ ಗೋಪಾಲಗೌಡ

June 6, 2019

ಮೈಸೂರು: ಸಮಾಜ ವಾದಿ ಚಿಂತನೆಗಳೊಂದಿಗೆ ಸದಾ ಸಾಹಿತ್ಯ ಪ್ರಜ್ಞೆಯನ್ನು ಹೊಂದಿದ್ದ ಸಜ್ಜನ, ಪ್ರಾಮಾ ಣಿಕ ರಾಜಕಾರಣಿ ಶಾಂತವೇರಿ ಗೋಪಾಲ ಗೌಡರು ಎಂದು ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನ ಸಹ ಯೋಗದಲ್ಲಿ ಬುಧವಾರ ಆಯೋಜಿಸ ಲಾಗಿದ್ದ `ಶಾಂತವೇರಿ ಗೋಪಾಲಗೌಡ- ಒಂದು ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಲೋಹಿಯಾ ಅವರ ವಿಚಾರಗಳಿಂದ ಪ್ರಭಾ ವಿತರಾಗಿದ್ದ ಶಾಂತವೇರಿ ಗೋಪಾಲ ಗೌಡರು ಸಮಾಜಮುಖಿ ಚಿಂತನೆಗಳಿ ಂದಲೇ ಹೆಸರು ಪಡೆದವರು. ಸದಾ ಜನಪರ ಚಳವಳಿಗಳನ್ನು ಮಾಡುತ್ತಲೇ ಬಂದ ಅವರು, ವಿಧಾನಸಭಾ ಕಲಾಪ ಗಳಲ್ಲಿ ಜನರ ಪರವಾಗಿ ಧ್ವನಿ ಎತ್ತುತ್ತಿ ದ್ದರು. ಡಿ.ದೇವರಾಜ ಅರಸು ಮುಖ್ಯ ಮಂತ್ರಿಯಾಗಿದ್ದಾಗ ವಿರೋಧ ಪಕ್ಷದ ಸ್ಥಾನದಲ್ಲಿ ಶಾಂತವೇರಿ ಗೋಪಾಲ ಗೌಡರು ಮತ್ತಷ್ಟು ಅಭಿವೃದ್ಧಿ ಕಾರ್ಯ ಗಳು ನಡೆಯಲೆಂದೇ ಪ್ರತಿಯೊಂದನ್ನು ಪ್ರಶ್ನಿಸುತ್ತಿದ್ದರು ಎಂದು ತಿಳಿಸಿದರು.

ವಿಮರ್ಶಕ ಡಾ.ನಂದೀಶ್ ಹಂಚೆ ಮಾತನಾಡಿ, ಇಂದಿನ ರಾಜಕಾರಣಿಗಳಲ್ಲಿ ಸಂವೇದನಾಶೀಲತೆ ಎಂಬುದೇ ಇಲ್ಲ. ಕೆಲವೊಮ್ಮೆ ಅವರು, ರಾಜಕಾರಣಿಗಳೋ ಅಥವಾ ಗೂಂಡಾಗಳೋ ಎಂದೆನಿ ಸುತ್ತದೆ. ವೇದಿಕೆಗಳಲ್ಲಿ ಒಬ್ಬರು ಮತ್ತೊಬ್ಬ ರನ್ನು ಮುಗಿಸುತ್ತೇವೆ ಎಂದು ಮನ ಬಂದಂತೆ ಮಾತನಾಡುತ್ತಾರೆ. ಆದರೆ, ಶಾಂತವೇರಿ ಗೋಪಾಲಗೌಡರು ಇವರಿ ಗೆಲ್ಲಾ ವಿರುದ್ಧವಾದ ಸಂವೇದನಾಶೀಲ ತೆಯ ಗುಣವಿದ್ದ ರಾಜಕಾರಣಿ. ಒಮ್ಮೆ ಅವರು ವಿಧಾನಸಭಾ ಕಲಾಪದಲ್ಲಿ ಎಸ್. ನಿಜಲಿಂಗಪ್ಪ ಅವರನ್ನು ಭ್ರಷ್ಟ ರಾಜ ಕಾರಣಿ ಎಂದು ಹೇಳಿದ್ದರು. ಆದರೆ, ಸ್ವಲ್ಪ ಸಮಯದ ನಂತರ ತನ್ನಿಂದಾದ ತಪ್ಪಿಗೆ ಮರುಕ ಪಟ್ಟಿದ್ದರು ಎಂದು ತಿಳಿಸಿದರು.

ಚಳವಳಿಗಳ ಮೂಲಕ ರಾಜಕೀಯಕ್ಕೆ ಬಂದವರು ನಿಜವಾಗಿಯೂ ಸಾರ್ವಜ ನಿಕರ ಕಷ್ಟಗಳನ್ನು ಅರ್ಥಮಾಡಿ ಕೊಂಡಿ ರುತ್ತಾರೆ. ಶಾಂತವೇರಿ ಗೋಪಾಲಗೌಡರು ಸಾಕಷ್ಟು ಜನಪರ ಚಳವಳಿಗಳನ್ನು ಮಾಡಿ ಜನತೆಯ ಕಷ್ಟಗಳನ್ನು ಅರ್ಥಮಾಡಿ ಕೊಂಡಿದ್ದರು. ಪ್ರಾಮಾಣಿಕವಾಗಿ ಬದುಕಿ ದರೇ ಗೌರವ ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಶಾಂತವೇರಿ ಗೋಪಾಲ ಗೌಡರೇ ಸಾಕ್ಷಿ ಎಂದು ಬಣ್ಣಿಸಿದರು.

ಲೋಹಿಯಾ ಅವರ ಸಮಾಜವಾದಿ ಚಿಂತನೆಗಳಿಂದ ಆಕರ್ಷಿತರಾಗಿದ್ದ ಶಾಂತ ವೇರಿ ಗೋಪಾಲಗೌಡರು ಕರ್ನಾಟಕದಲ್ಲಿ ಸಮಾಜವಾದಿ ರಾಜಕಾರಣ ರೂಪು ಗೊಳ್ಳಲು ಶ್ರಮಿಸಿದರು. ಕನ್ನಡ ನಾಡಿನ ರಾಜಕಾರಣ, ಚಳವಳಿ, ಸಾಹಿತ್ಯ ಲೋಕ ಹಾಗೂ ಸಾಂಸ್ಕೃತಿಕ ಲೋಕಗಳ ವಲಯ ಗಳಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿ ಕೊಂಡಿದ್ದ ಅವರು, ಕರ್ನಾಟಕದ ಏಕೀ ಕರಣಕ್ಕಾಗಿ ಶ್ರಮಿಸಿದರು. ಸರಳ ಬದುಕಿನ ಶೈಲಿ, ಜಾತ್ಯತೀತ ವ್ಯಕ್ತಿತ್ವ, ನಿಷ್ಠುರ ವಿಮರ್ಶಾ ನೋಟಗಳ ಮೂಲಕ ಅತ್ಯಂತ ಸರಳ ಸಜ್ಜನಿಕೆಯ ಜನಪರ ನಾಯಕರಾಗಿದ್ದರು ಎಂದು ತಿಳಿಸಿದರು.

ವೇದಿಕೆಯಲ್ಲಿ ಮೈಸೂರು ವಿವಿ ಪ್ರಸಾ ರಂಗದ ವಿಶ್ರಾಂತ ನಿರ್ದೇಶಕ ಪೆÇ್ರ.ಕೆ.ಟಿ. ವೀರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ. ಡಿ.ರಾಜಣ್ಣ, ಕೆ.ಎಸ್.ಗೌಡ ಪ್ರತಿಷ್ಠಾನ ಅಧ್ಯಕ್ಷ ಜಿ.ಪ್ರಕಾಶ್, ರಂಗಕರ್ಮಿ ರಾಜಶೇಖರ ಕದಂಬ, ಕೆ.ಎಸ್.ನಾಗರಾಜು, ಜಿ.ಬೆನಕ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Translate »