ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ
ಮೈಸೂರು

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ

June 6, 2019

ಮೈಸೂರು: ನಗರದ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಕುವೆಂಪುನಗರದಲ್ಲಿರುವ ವಿಶ್ವನಂದನ ಉದ್ಯಾನವನದಲ್ಲಿ ಇಂದು ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯ ಕ್ರಮದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ ಕುವೆಂಪು ವಿ.ವಿ. ವಿಶ್ರಾಂತ ಕುಲಪತಿಗಳಾದ ಡಾ.ಪಿ.ವೆಂಕಟರಾಮಯ್ಯನವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪ್ರಕೃತಿ ಇರುವುದೇ ಮನುಷ್ಯನ ಆಸೆಯನ್ನು ಪೂರೈಸು ವುದಕ್ಕೆ ಹೊರತು ದುರಾಸೆಗಳನ್ನಲ್ಲ. ಪರಿಸರದ ದಿನಾಚರಣೆ ಸಾಂಕೇತಿಕ ಅಷ್ಟೇ. ವರ್ಷವಿಡೀ ಪರಿಸರದ ದಿನಾಚರಣೆಯಾಗಿ, ಜನರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಪರಿಸರವನ್ನು ಸಂರಕ್ಷಿಸುವಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಯುವ ವಕೀಲರಾದ ಎಸ್.ಪಿ.ಮಂಜುನಾಥ್ ಮಾತನಾಡಿ, ಪರಿಸರದ ಬಗ್ಗೆ ಕಾಳಜಿಯನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು. ಶಾಲಾ, ಕಾಲೇಜಿನಲ್ಲಿ ಅಧ್ಯಾ ಪಕರು ಪರಿಸರದ ಮಹತ್ವವನ್ನು ತಿಳಿಸುವುದರ ಮೂಲಕ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿ, ಮನುಷ್ಯನಿಗೆ ಬೇಕಾದ ಅತ್ಯವಶ್ಯಕ ಹಾಗೂ ಅತ್ಯಮೂಲ್ಯ ವಸ್ತು ಎಂದರೆ ನೀರು.
ಭೂಮಿಯ ಒಳಗೆ ಅಂತರ್ಜಲ ಬತ್ತಿಹೋಗಿದೆ. ಇದಕ್ಕೆ ಪ್ರಮುಖ ಕಾರಣ ಮನುಷ್ಯ. ಕೆರೆ, ಬಾವಿ, ಸರೋವರಗಳನ್ನು, ಮಳೆ ನೀರನ್ನು ಸಂರಕ್ಷಿಸಿ, ಕಾಡುಗಳನ್ನು ಉಳಿಸಿ, ಬೆಳೆಸುವುದರ ಮೂಲಕ ನಾಡಿನ ಪ್ರಕೃತಿಯನ್ನು ಕಾಪಾಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಕೆಎಸ್‍ಆರ್‍ಟಿಸಿ ಇಂಜಿನಿಯರ್ ಶ್ರೀರಾಮರಾಜೇ ಅರಸ್, ಶಾಲಾ, ಕಾಲೇಜಿನ ಹಂತದಲ್ಲಿಯೇ ಪರಿಸರದ ಬಗ್ಗೆ ಪ್ರತ್ಯೇಕವಾದ ಪಠ್ಯ ಪುಸ್ತಕಗಳನ್ನು ಅಳವಡಿಸುವುದರ ಮೂಲಕ ಸರ್ಕಾರ ವಿದ್ಯಾರ್ಥಿ ಸಮೂಹಕ್ಕೆ ಜಾಗೃತಿ ಮೂಡಿಸಬೇಕೆಂದು ಅಭಿಪ್ರಾಯಿಸಿದರು. ಸಮಾರಂಭದಲ್ಲಿ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಎಸ್. ಬಾಲಸುಬ್ರಹ್ಮಣ್ಯಂ, ಶಾರದಾವಿಲಾಸ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಸಂಸ್ಥೆಯ ಖಜಾಂಚಿ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಸಮಾಜ ಸೇವಕ ಜಿ.ಪಿ.ಹರೀಶ್, ಶ್ರೀಮತಿ ನಾಗವೇಣಿರಾಮಮೂರ್ತಿ ಬಾಗಲೂರು, ಶ್ರೀಮತಿ ಲಲಿತಮ್ಮ ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. ಸಮಾರಂಭದ ನಂತರ ವೇದಿಕೆ ಮೇಲಿದ್ದ ಎಲ್ಲ ಗಣ್ಯರು ಸಸಿ ನೆಟ್ಟು ನೀರೆರೆದು ಪರಿಸರದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

Translate »