ಮೈಸೂರು: ಕಳೆದ 30 ವರ್ಷಗಳಲ್ಲಿ ಹವಾಮಾನ ಬದ ಲಾವಣೆ ತೀವ್ರಗತಿಯಲ್ಲಿ ಸಾಗುತ್ತಿದೆ. ಇದ ರಿಂದ ವಾತಾವರಣದ ಉಷ್ಣಾಂಶದಲ್ಲಿ ಏರಿಕೆ, ಮಳೆ ಪ್ರಮಾಣದಲ್ಲಿ ಬದಲಾವಣೆ ಯಾಗುತ್ತಿದೆ ಎಂದು ಬೆಂಗಳೂರು ಮುಂದು ವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆಯ ಪ್ರಾಧ್ಯಾಪಕಿ ಪ್ರೊ.ಸಿಂಧು ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.
ಮೈಸೂರು ವಿದ್ಯಾರಣ್ಯಪುರಂನಲ್ಲಿರುವ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗ ದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗ ವಾಗಿ ಆಯೋಜಿಸಿದ್ದ `ವಾತಾವರಣದಲ್ಲಾ ಗುತ್ತಿರುವ ಬದಲಾವಣೆ’ ಕುರಿತು ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದರಿಂದ ನಮ್ಮ ಕೃಷಿ ಹಾಗೂ ವಾತಾವರಣದಲ್ಲೂ ಸಾಕಷ್ಟು ಏರಿಳಿತ ಗೋಚರಿಸುತ್ತಿದೆ ಎಂದರು.
ಜಗತ್ತಿನ ವಿಪರೀತ ಹವಾಮಾನ ಬದ ಲಾವಣೆಯಿಂದ ಕೃಷಿ ಅವಲಂಬಿತ ಕ್ಷೇತ್ರದ ಮೇಲೆ ಕರಾಳ ಛಾಯೆ ಆವರಿಸುತ್ತಿದೆ. ವಾತಾ ವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಅನಿಲ ಪ್ರಮಾಣ ಹೆಚ್ಚಾದಂತೆ ಇದರ ನೇರ ಪರಿ ಣಾಮ ಕೃಷಿ ಮೇಲಾಗುತ್ತಿದೆ. ಬೀಜ ಉತ್ಪತ್ತಿ ಹಾಗೂ ಗುಣಮಟ್ಟದ ಆಹಾರ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗು ತ್ತಿದೆ. ಜಾಗತಿಕ ತಾಪಮಾನ ಹೆಚ್ಚಳಕ್ಕೆ ವಾತಾ ವರಣದಲ್ಲಿರುವ ಹಸಿರು ಮನೆ ಅನಿಲ. ಅದರಲ್ಲಿ ಕಾರ್ಖಾನೆ ಹಾಗೂ ವಾಹನ ಗಳಿಂದ ಹೊರಹಾಕುವ ಇಂಗಾಲದ ಡೈ ಆಕ್ಸೈಡ್ ಮತ್ತು ಕೃಷಿ ಹಾಗೂ ಇತರೆ ಕ್ಷೇತ್ರ ಗಳಿಂದ ಬಿಡುಗಡೆಯಾಗುವ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಸಲ್ಫರ್ ಹೈಕ್ಸಾ ಫ್ಲೋರೈಡ್ ಅನಿಲಗಳು ಬಿಡುಗಡೆಯಿಂ ದಾಗಿ ವಾತಾವರಣ ಕಲುಷಿತವಾಗುತ್ತಿದೆ. ತಜ್ಞರ ಅಂದಾಜಿನಂತೆ ಈ ಶತಮಾನದ ಅಂತ್ಯಕ್ಕೆ ಜಾಗತಿಕ ತಾಪಮಾನ 3-5 ಡಿಗ್ರಿ ಸೆ.ನಷ್ಟು ಹೆಚ್ಚಳವಾಗಬಹುದು. ಇದು ಸಕಲ ಜೀವರಾಶಿಗಳ ಬದುಕಿನ ಮೇಲೂ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಅತೀ ಹೆಚ್ಚು ತಾಪಮಾನದಿಂದಾಗಿ ಸಸ್ಯ ಗಳು ಭೂಮಿಯಿಂದ ತೇವಾಂಶವನ್ನು ಬಳಸಿಕೊಳ್ಳುವ ಸಾಮಥ್ರ್ಯಕ್ಕೆ ತೊಂದರೆ ಯಾಗುತ್ತಿದೆ. ಈ ಪರಿಣಾಮ ಕೃಷಿ ಕ್ಷೇತ್ರ ದಲ್ಲಿ ಸಾಕಷ್ಟು ಬದಲಾಗುತ್ತಿದ್ದು, ಇದು ದೇಶದ ಅರ್ಥ ವ್ಯವಸ್ಥೆ ಮೇಲೂ ದುಷ್ಪÀರಿ ಣಾಮ ಬೀರುತ್ತದೆ. ತಜ್ಞರ ಪ್ರಕಾರ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಇರುವ ಪರಿಸರ ದಲ್ಲಿ ಬೆಳೆದ ಆಹಾರ ಪದಾರ್ಥಗಳ ಮೇಲೂ ಪರಿಣಾಮ ಬೀರುತ್ತಿರುವ ಬಗ್ಗೆ ಪ್ರಯೋಗ ಗಳು ನಡೆಯುತ್ತಿವೆ ಎಂದರು.
ತಾಪಮಾನ ಏರಿಕೆಯಿಂದ ಗಿಡ-ಮರ ಗಳು ಮಣ್ಣಿನಿಂದ ಕಡಿಮೆ ಪ್ರಮಾಣದ ನೈಟ್ರೋಜನ್ ಹೀರಿಕೊಳ್ಳುತ್ತದೆ. ಇಂತಹ ಸಸಿಗಳನ್ನು ಸೇವಿಸುವ ಜನ-ಜಾನುವಾರು ಗಳ ಸಂತಾನೋತ್ಪತ್ತಿ ಮೇಲೂ ನೇರ ಪರಿ ಣಾಮ ಬೀರುತ್ತವೆ. ಮಣ್ಣಿನ ಸಾವಯವ ಪ್ರಮಾಣ ಹಾಗೂ ಅದರ ಫಲವತ್ತತೆಯ ಪ್ರಮಾಣ ಕುಸಿಯುತ್ತದೆ. ನಮ್ಮ ದೇಶದಲ್ಲಿ ಶೇ.85ರಷ್ಟು ರೈತರು ಸಣ್ಣ ಹಿಡುವಳಿದಾರರು ಮಳೆಯನ್ನೇ ಅವಲಂಬಿಸಿದ್ದು, ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.23ರಷ್ಟನ್ನು ಕೃಷಿಕ್ಷೇತ್ರವೊಂದೇ ಪ್ರತಿನಿಧಿಸುತ್ತಿದ್ದು, ಶೇ.70ರಷ್ಟು ಜನರ ಸ್ವಯಂ ಉದ್ಯೋಗದ ಮೇಲೂ ಪರಿಣಾಮ ಎಂದರು.
1880ರ ನಂತರ ಭೂಮಿಯ ಮೇಲ್ಮೈ ತಾಪ ಮಾನ ಪ್ರತಿ 10 ವರ್ಷಗಳಿಗೆ ಸರಾಸರಿ 0.07 ಡಿಗ್ರಿ ಸೆಲ್ಸಿಯಸ್‍ನಂತೆ ಏರಿಕೆ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಆಗಿರುವ ತಾಪಮಾನದ ಹೆಚ್ಚಳ 0.95 ಡಿಗ್ರಿ ಸೆಲ್ಸಿಯಸ್. ಸಮುದ್ರದ ತಾಪಮಾನ ಹೆಚ್ಚಿದರೆ, ಇಲ್ಲಿನ ಹಲವು ದೇಶಗಳು ಭಾರಿ ತೊಂದರೆಗೆ ಸಿಲುಕಲಿವೆ. ಅದರಲ್ಲೂ ನಾರ್ತ್-ಈಸ್ಟ್ ಏಷ್ಯಾ ಭೂ ಪ್ರದೇಶಗಳು ಸಾಕಷ್ಟು ತೊಂದರೆಗೆ ಸಿಲುಕ ಲಿದೆ. ಇದರಿಂದ ಮೊದಲಿಗೆ ಬಾಧಿತವಾಗುವ ವಿಶ್ವದ ಪ್ರದೇಶಗಳೆಂದರೆ ದಕ್ಷಿಣ ಫೆಸಿಫಿಕ್ ದ್ವೀಪಗಳು ಎನ್ನಲಾಗುತ್ತಿದೆ ಎಂದರು. ವೇದಿಕೆ ಯಲ್ಲಿ ಪರಿಸರ ತಜ್ಞ ಆನಂದ್ ಮಲ್ಲಿ ಗಾವದ್, ಬಿಎಐ ಮೈಸೂರು ಘಟಕದ ಛೇರ್ಮನ್ ನೈಧ್ರುವ, ಎಂಬಿ ಸಿಟಿಯ ಎಸ್.ಆರ್.ಸ್ವಾಮಿ, ಬಿ.ಎಸ್.ದಿನೇಶ್, ಆರ್.ರಂಗನಾಥ, ಟಿ.ಎನ್. ಹೇಮಂತ್, ಸಿ.ಡಿ.ಕೃಷ್ಣ, ಬಿಎಐ ಉಪಾ ಧ್ಯಕ್ಷ ಕೆ.ಶಿವರಾಂ ಸೇರಿದಂತೆ ಇತರರಿದ್ದರು.