ಭೂ ವಂಚನೆ ಖಂಡಿಸಿ ಪ್ರತಿಭಟನೆ
ಮೈಸೂರು

ಭೂ ವಂಚನೆ ಖಂಡಿಸಿ ಪ್ರತಿಭಟನೆ

June 7, 2019

ಮೈಸೂರು: ದಲಿತರಿಗೆ ಸೇರಿದ ಭೂಮಿಯನ್ನು ಸ್ಕಿಲ್‍ಟೆಕ್ ಸಂಸ್ಥೆ ಹಾಗೂ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಜಂಟಿಯಾಗಿ ವಶಪಡಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರೊಡಗೂಡಿ ಪುಟ್ಟಯ್ಯ ಗುರುವಾರ ಬನ್ನೂರು ರಿಂಗ್ ರಸ್ತೆಯ ಮಾನಸಿನಗರದ ಮಾದೇಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸರ್ವೆ ನಂ.174, 176/1ಬಿ, 176/2ಬಿ ಹಂಚ್ಯಾ ಗ್ರಾಮ ಪಂಚಾಯಿತಿಯ ಭೂಮಿಯನ್ನು ಸ್ಕಿಲ್‍ಟೆಕ್ ಸಂಸ್ಥೆಯವರು ಮತ್ತು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ಜಂಟಿಯಾಗಿ ಸುಳ್ಳು ದಾಖಲೆ ಸೃಷ್ಟಿಸಿ ದಲಿತನಾದ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಪ್ರತಿ ಭಟನೆಯಲ್ಲಿ ಆಲನಹಳ್ಳಿ ಗ್ರಾಪಂ ಸದಸ್ಯ ಚಿಕ್ಕಮಹದೇವ, ಪ್ರಸಾದ್, ಪಾಲಿಕೆ ಸದಸ್ಯ ಶ್ರೀಧರ್, ಕೆಸರೆ ನಾಗರಾಜು, ಆನಂದ್, ಬಾಬು, ನಂಜಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »