ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆ ಧ್ವನಿ, ಬೆಳಕು ಕಾರ್ಯಕ್ರಮ
ಮೈಸೂರು

ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆ ಧ್ವನಿ, ಬೆಳಕು ಕಾರ್ಯಕ್ರಮ

June 7, 2019

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಇಂದಿನಿಂದ ಇಂಗ್ಲೀಷ್ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ಪ್ರತಿ ಸೋಮವಾರದಿಂದ ಬುಧವಾರದವರೆಗೆ ರಾತ್ರಿ 7ರಿಂದ 8ರವರೆಗೆ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಪ್ರತಿ ಗುರುವಾರ ಮತ್ತು ಶುಕ್ರ ವಾರ ರಾತ್ರಿ 7ರಿಂದ 8 ರವರೆಗೆ ಇಂಗ್ಲೀಷ್ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಪ್ರತಿ ಶನಿವಾರ ರಾತ್ರಿ 7 ರಿಂದ 8 ರವರೆಗೆ ಇಂಗ್ಲೀಷ್ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಾಗೂ ರಾತ್ರಿ 8-15 ರಿಂದ 9-15 ರವರೆಗೆ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುವುದು.

ಕನ್ನಡ ಅವತರಣಿಕೆಯ ಕಾರ್ಯಕ್ರಮಕ್ಕೆ ವಯಸ್ಕರಿಗೆ ರೂ.70/-, ಮಕ್ಕಳಿಗೆ ರೂ.30/-(10 ವರ್ಷ ಮೇಲ್ಪಟ್ಟ 18 ವರ್ಷದೊಳಗಿನ) ಹಾಗೂ ಇಂಗ್ಲೀಷ್ ಅವತರಣಿಕೆಯ ಕಾರ್ಯಕ್ರಮಕ್ಕೆ ವಯಸ್ಕರಿಗೆ ರೂ.90/-ಮಕ್ಕಳಿಗೆ ರೂ.40/-(10 ವರ್ಷ ಮೇಲ್ಪಟ್ಟ 18 ವರ್ಷದೊಳಗಿನ) ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »