ಮೈಸೂರು: ಪವರ್‍ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ, ರೈತರ ತೋಟಗಳ ಮೇಲೆ ಮತ್ತು ಭೂಮಿಯ ಮಧ್ಯೆ ಭಾಗದಲ್ಲಿಯೇ ವಿದ್ಯುತ್ ಲೈನ್ ತೆಗೆದುಕೊಂಡು ಹೋಗುತ್ತಿ ರುವುದರಿಂದ ರೈತರಿಗೆ ಆಗಿರುವ ನಷ್ಟ ಮತ್ತು ತೊಂದರೆಗಳಿಂದಾಗಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಶ್ರಯದಲ್ಲಿ ನೂರಾರು ರೈತರು ಜೂ.11 ರಂದು ಬೆಳಿಗ್ಗೆ 11 ಗಂಟೆಗೆ ಮೈದನಹಳ್ಳಿ ಬಳಿ ಇರುವ ಪವರ್ ಗ್ರಿಡ್ ಕಚೇರಿ ಎದುರು ಪ್ರತಿಭಟನೆ ನಡೆಸಲಿರುವುದಾಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೊಸ ಕೋಟೆ ಬಸವರಾಜು ಇಂದಿಲ್ಲಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿ ಸಿದ ಅವರು, ಪ್ರಭಾವಿ ಬಂಡವಾಳ ಶಾಹಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಣಿದು ರೈತರ ಭೂಮಿ ಯಲ್ಲಿ ಪವರ್ ಗ್ರಿಡ್ ಲೈನ್ ಎಳೆದು ರೈತರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿದರು.
ಮೈಸೂರು ತಾಲೂಕು ಇಲವಾಲ ಹೋಬಳಿ ಕಲ್ಲೂರು ನಾಗನಹಳ್ಳಿ, ಆನಂ ದೂರು, ಚಿಕ್ಕನಹಳ್ಳಿ, ಮಲ್ಲೇಗೌಡನ ಕೊಪ್ಪಲು, ಯಾಚೇಗೌಡನಹಳ್ಳಿ, ದೊಡ್ಡೇ ಗೌಡನಕೊಪ್ಪಲು, ಹೊಸಕೋಟೆ ಹಾಗೂ ಇತರೆ ಗ್ರಾಮಗಳ ರೈತರಿಗೆ ಸೇರಿದ ಜಮೀ ನಿನ ಮೇಲೆ ಹಿರಿಯೂರಿನಿಂದ-ಮೈಸೂ ರಿಗೆ ನಿರ್ಮಿಸಲಾಗುತ್ತಿರುವ 400 ಕೆವಿ ವಿದ್ಯುತ್ ಲೈನ್ ಎಳೆಯಲಾಗುತ್ತಿದೆ. ಇದ ರಿಂದ ಬಹಳ ವರ್ಷಗಳಿಂದ ರೈತರು ಬೆಳೆ ಸಿರುವ ತೆಂಗು ಮತ್ತು ಇತರೆ ತೋಟ ಗಾರಿಕೆ ಫಸಲು ನಷ್ಟವಾಗುತ್ತದೆ. ರೈತರ ಭೂಮಿ ಮಧ್ಯ ಭಾಗವೇ ಲೈನ್ ಹಾದು ಹೋಗುವುದರಿಂದ ರೈತರು ಇನ್ನಷ್ಟು ತೊಂದರೆಗೀಡಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪವರ್‍ಗ್ರಿಡ್ ಈ ಹಿಂದೆ ಹೆಚ್ಚು ತೊಂದರೆಯಾಗದ ಮಾರ್ಗವನ್ನು ಗುರು ತಿಸಿ ಸರ್ವೆ ನಡೆಸಿತ್ತು. ಆದರೆ ಕೆಲವು ರಾಜ ಕೀಯ ಹಿನ್ನೆಲೆಯ ಪ್ರಭಾವಿ ವ್ಯಕ್ತಿಗಳ ತೋಟಗಳಿರುವುದರಿಂದ ಅದನ್ನು ಬಿಟ್ಟು ಹಾಗೂ ರಿಯಲ್ ಎಸ್ಟೇಲ್ ಮತ್ತು ಡೆವಲ ಪರ್ಸ್ ಭೂಮಿಗಳ ಮೇಲೆ ಹಾದು ಹೋಗು ವುದನ್ನು ತಪ್ಪಿಸಿ ಅವರ ಹಿತ ಕಾಪಾಡುವ ದೃಷ್ಟಿಯಿಂದ ರೈತರ ತೋಟಗಳ ಮೇಲೆ ಲೈನ್ ಎಳೆಯಲಾಗುತ್ತಿದೆ ಎಂದು ಆಪಾ ದಿಸಿದರು. ಈಗಾಗಲೇ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗೆ ಸಮಸ್ಯೆ ತಪ್ಪಿಸಲು ಪ್ರತ್ಯೇಕ ಮಾರ್ಗದಲ್ಲಿ ಲೈನ್ ತೆಗೆದು ಕೊಂಡು ಹೋಗುವಂತೆ ಒತ್ತಾಯಿಸಿ ಸ್ಥಳ ತೋರಿಸಿದ್ದರೂ ಪವರ್‍ಗ್ರಿಡ್ ಅಂತಹ ಪರಿಹಾರೋಪಾಯಗಳಿಗೆ ಸ್ಪಂದಿಸದೆ ರೈತರ ತೋಟಗಳ ಮೇಲೇ ಮಾರ್ಗ ಕೊಂಡೊಯ್ಯುವ ಹಠಕ್ಕೆ ಬಿದ್ದಿದೆ. ಇದನ್ನು ಖಂಡಿಸಿ ಪ್ರತಿಭಟನೆ ಅನಿವಾರ್ಯ ವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಪದಾಧಿಕಾರಿಗಳಾದ ಪಿ.ಮರಂಕಯ್ಯ, ಪ್ರಭಾಕರ್, ಮಂಡಕಳ್ಳಿ ಮಹೇಶ್, ಆನಂದೂರು ದಿನೇಶ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.