ಮೈಸೂರು: ಸ್ಟಾರ್ ಹುಂಡೈ ಅವರ ಕಾರು ಎಕ್ಸ್ಚೇಂಜ್ ಮತ್ತು ಸಾಲ ಮೇಳವು ಇಂದಿನಿಂದ ಮೈಸೂರಿನ ಅರಸು ಬೋರ್ಡಿಂಗ್ ಶಾಲಾ ಆವರಣದಲ್ಲಿ ಆರಂಭವಾಯಿತು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಎರಡು ದಿನಗಳ ಮೇಳವನ್ನು ಉದ್ಘಾಟಿಸಿದರು. ಇದೇ ವೇಳೆ ಹುಂಡೈ ಕಂಪನಿಯ ಹೊಸ ಹುಂಡೈ ವೆನ್ಯೂ ಕಾರನ್ನೂ ಶಾಸಕರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಮೇಳದಲ್ಲಿ ಹುಂಡೈ ಮೋಟಾರ್ಸ್ ವಲಯ ವ್ಯವಸ್ಥಾಪಕ (ದಕ್ಷಿಣ) ನೀರಜ್ ಚೌಧುರಿ, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ (ಮಾರ್ಕೆಂ ಟಿಂಗ್) ಪವನ್, ಸೇಲ್ಸ್ ಮುಖ್ಯಸ್ಥ ನಾಗೇಶ್, ಅಸಿಸ್ಟಂಟ್ಸ್ ಸೇಲ್ಸ್ ಮ್ಯಾನೇಜರ್ ಶಬರಿ ಹಾಗೂ ಇತರರು ಹಾಜರಿದ್ದರು. ಎರಡು ದಿನಗಳ ಮೇಳದಲ್ಲಿ ಗ್ರಾಹಕರಿಂದ ಯಾವುದೇ ಕೆಂಪನಿಯ ಹಳೆಯ ಕಾರುಗಳನ್ನು ಪಡೆದು ಹುಂಡೈ ಕಂಪನಿಯ ಕಾರುಗಳನ್ನು ಎಕ್ಸ್ಚೇಂಜ್ ಮಾಡಿಕೊಡಲಾಗುವುದು. ಹೊಸ ಕಾರಿನ ಮೇಲೆ ಸಾಲ ಸೌಲಭ್ಯ ನೀಡಲು ಹುಂಡೈ ಫೈನಾನ್ಸ್ ಮೂಲಕ ವಿವಿಧ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಸೇಲ್ಸ್ ಮುಖ್ಯಸ್ಥ ನಾಗೇಶ ಸುದ್ದಿಗಾರರಿಗೆ ತಿಳಿಸಿದ್ದಾರೆ.