ಮೈಸೂರು: ಮೈಸೂ ರಿನ ವಿಜಯನಗರ 1ನೇ ಹಂತದಲ್ಲಿ ಮುಡಾ ಕ್ರೀಡಾ ಸಂಕೀರ್ಣದಲ್ಲಿ ಭಾನು ವಾರ ಮಿತ್ರ ಫೌಂಡೇಷನ್ ವತಿಯಿಂದ ಆರಂಭಿಸಲಾಗಿರುವ ಟೆನ್ಸೈಲ್ ಅರೆನಾ ಫಿಟ್‍ನೆಟ್ ಸ್ಟುಡಿಯೋ ಮತ್ತು ಬ್ಯಾಡ್ಮಿಂ ಟನ್ ಅಕಾಡೆಮಿಗೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಲ್.ನಾಗೇಂದ್ರ ಉದ್ಘಾಟನೆ ನೆರವೇರಿಸಿದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಅನಿಲ್ ಚಿಕ್ಕಮಾದು, ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ಡಾ.ಶೆಲ್ವ ಪಿಳ್ಳೈ ಅಯ್ಯಂಗಾರ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದು, ಅರಣ್ಯ ಇಲಾಖೆ ಸಹಯೊಗದಲ್ಲಿ ಕ್ರೀಡಾ ಮೈದಾನದಲ್ಲಿ 40ಕ್ಕೂ ಸಸಿಗಳನ್ನು ನೆಟ್ಟರು.
ಹಾಲಿ ಶಾಸಕ ಎಲ್.ನಾಗೇಂದ್ರ ಅವರು ಮುಡಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಯುವಜನರ ಕ್ರೀಡಾ ಚಟುವಟಿಕೆಗಳಿಗೆಂದು ನಿರ್ಮಾಣವಾಗಿದ್ದ ಕ್ರೀಡಾ ಸಂಕೀರ್ಣ ಅಂದಿನಿಂದಲೂ ಯಾವುದೇ ಕ್ರೀಡಾ ಚಟು ವಟಿಕೆಗಳಿಲ್ಲದೆ ಅದನ್ನು ನಿರ್ಮಿಸಿದ ಉದ್ದೇಶ ಸಫಲವಾಗದೆ ನಿಷ್ಪ್ರಯೋಜಕ ವಾಗಿ ಉಳಿದಿತ್ತು. ಹೀಗಾಗಿ ಅಲ್ಲಿ ಮೈತ್ರಿ ಫೌಂಡೇಷನ್ ಸಂಸ್ಥೆ ಕ್ರೀಡಾ ಚಟುವಟಿಕೆ ಗಳನ್ನು ಕೈಗೊಳ್ಳಲು ಮುಂದೆ ಬಂದ ಹಿನ್ನೆಲೆ ಯಲ್ಲಿ ಐದು ವರ್ಷದ ಅವಧಿಗೆ ಅವರಿಗೆ ಸ್ಥಳವನ್ನು ಗುತ್ತಿಗೆ ನೀಡಲಾಗಿದೆ.
ಸಂಸ್ಥೆಯು 60 ಲಕ್ಷ ರೂ. ವಿನಿ ಯೋಗಿಸಿ ಯುವ ಜನರಿಗಾಗಿ ಜಿಮ್ ಮತ್ತು ಬ್ಯಾಡ್ಮಿಂಟನ್ ಪರಿಕರಗಳನ್ನು ಅಳವಡಿಸಿದೆ. ಅಲ್ಲದೆ ಯೋಗ ತರಬೇತಿ ಯನ್ನು ನೀಡಲು ಸಿದ್ಧಗೊಂಡಿದೆ. ಇದರ ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಎಲ್.ನಾಗೇಂದ್ರ, ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಕಟ್ಟಡ ಇದೀಗ ಉಪಯೋಗಕ್ಕೆ ಬರುತ್ತಿದ್ದು, ಯುವ ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲಿ ತರಬೇತಿ ಪಡೆದು ತಮ್ಮ ಕ್ರೀಡಾ ಪ್ರತಿಭೆ ಮೆರೆಯುವ ಜೊತೆಗೆ ದೈಹಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದರು.
ಸಂಸದ ಪ್ರತಾಪಸಿಂಹ ಮಾತನಾಡಿ, ಇದರ ಸದ್ಬಳಕೆ ಆದರೆ ಇದು ಆರಂಭ ವಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮೈತ್ರಿ ಫೌಂಡೇಷನ್ ಅಧ್ಯಕ್ಷ ಆರ್.ವಿಜಯ್, ಅನಸೂಯಾ ವಿಜಯ್, ಕಾರ್ಯದರ್ಶಿ ಪರಶುರಾಮ್ ಕಾಂಬಳೆ, ಸದಸ್ಯ ಎನ್.ರಾಜ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.