ಜೂ.16ರಂದು ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷ ಯೋಗ ಪಟುಗಳಿಂದ ಮೆಗಾ ತಾಲೀಮು
ಮೈಸೂರು

ಜೂ.16ರಂದು ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷ ಯೋಗ ಪಟುಗಳಿಂದ ಮೆಗಾ ತಾಲೀಮು

June 10, 2019

ಮೈಸೂರು: ಅಂತಾ ರಾಷ್ಟ್ರೀಯ ಯೋಗ ದಿನೋತ್ಸವ ಸಮೀಪಿ ಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಯೋಗ ಪಟುಗಳ ಉತ್ಸಾಹವೂ ಹೆಚ್ಚುತ್ತಿದ್ದು, ಜೂ.21ರಂದು ರೇಸ್‍ಕೋರ್ಸ್ ಮೈದಾನ ದಲ್ಲಿ ಲಕ್ಷ ಯೋಗ ಪಟುಗಳು ಸಾಮೂ ಹಿಕ ಯೋಗ ದಾಖಲೆ ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಪೂರ್ವಭಾವಿ ಯಾಗಿ ಭಾನುವಾರ ಮೈಸೂರು ಅರಮನೆ ಒಳಾಂಗಣದಲ್ಲಿ ನಡೆದ ಮೆಗಾ ಯೋಗ ತಾಲೀಮಿನಲ್ಲಿ 1500ಕ್ಕೂ ಹೆಚ್ಚು ಯೋಗ ಪಟುಗಳು ಪಾಲ್ಗೊಂಡು ಸಾಮೂಹಿಕ ಯೋಗ ತಾಲೀಮು ನಡೆಸಿದರು. ಜಿಲ್ಲಾಡ ಳಿತ ಮತ್ತು ಯೋಗ ಫೆಡರೇಷನ್ ಆಫ್ ಮೈಸೂರ್ ಆಶ್ರಯದಲ್ಲಿ ವಿವಿಧ ಯೋಗ ಸಂಘಟನೆಗಳು ಒಗ್ಗೂಡಿ ಯೋಗ ದಿನೋತ್ಸವದ ಯಶಸ್ಸಿಗೆ ಶ್ರಮಿಸುತ್ತಿವೆ.

ಅರಮನೆ ಒಳಾಂಗಣದಲ್ಲಿ ನಿಯಮಾ ವಳಿ ಪ್ರಕಾರ ಯೋಗ ತಾಲೀಮು ನಡೆಸ ಲಾಯಿತು. ಮೊದಲಿಗೆ ಶಂಖನಾದ, ಬಳಿಕ ತಾಡಾಸನದಿಂದ ಶವಾಸನದವರೆಗಿನ ವಿವಿಧ ಆಸನಗಳು, ಪ್ರಾಣಾಯಾಮ, ಧ್ಯಾನ, ಸಂಕಲ್ಪ, ಶಾಂತಿ ಮಂತ್ರದೊಂದಿಗೆ ತಾಲೀಮು ಮುಕ್ತಾಗೊಂಡಿತು.

ಮುಂಜಾನೆ 6.15ರ ವೇಳೆಗೆ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ವಾರ್ತಾ ಇಲಾಖೆಯ ಸಹಾ ಯಕ ನಿರ್ದೇಶಕ ಆರ್.ರಾಜು, ನೆಹರು ಯುವ ಕೇಂದ್ರದ ನಿರ್ದೇಶಕ ಎಂ.ಎನ್. ನಟರಾಜ್, ಆಯುಷ್ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಸೀತಾಲಕ್ಷಿ ಇನ್ನಿತರರು ಯೋಗ ತಾಲೀಮು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.

2017ರಲ್ಲಿ 56,506 ಮಂದಿ ಸಾಮೂ ಹಿಕ ಯೋಗ ಪ್ರದರ್ಶಿಸಿ ಗಿನ್ನಿಸ್ ದಾಖಲೆ ಮಾಡಿದ್ದರು. ಕಳೆದ ವರ್ಷ ಗಿನ್ನಿಸ್ ದಾಖಲೆ ಯಿಂದ ಕೈತಪ್ಪಿ ಹೋಗಿತ್ತು. ಆದರೆ ಈ ಬಾರಿ ಗಿನ್ನಿಸ್ ದಾಖಲೆಗೆ ನೋಂದಾವಣೆ ಮಾಡಿಲ್ಲ. ಹೀಗಿದ್ದೂ ಉತ್ಸಾಹ ಚಿಮ್ಮಿದ ಯೋಗಪಟುಗಳು ತಾಲೀಮಿನಲ್ಲಿ ಪಾಲ್ಗೊಂ ಡಿದ್ದಾರೆ. ಕಳೆದ 4 ಭಾನುವಾರಗಳಂದೂ ಮೈಸೂರಿನ ವಿವಿಧ ಉದ್ಯಾನವನಗಳು, ಶಾಲೆಗಳಲ್ಲಿ ಯೋಗ ತರಬೇತಿ ನೀಡಲಾಗು ತ್ತಿದ್ದು, ಮಕ್ಕಳು, ಶಿಕ್ಷಕರು, ಸಾರ್ವಜನಿ ಕರು ತೀವ್ರ ಯೋಗಾಭ್ಯಾಸದಲ್ಲಿ ನಿರತರಾಗಿ ದ್ದಾರೆ. ಇದುವರೆಗೆ ಐದು ಮೆಗಾ ಯೋಗ ತಾಲೀಮು ನಡೆದಿದೆ. ಮುಂದಿನ ಭಾನು ವಾರ (ಜೂ.16) ಮೈಸೂರು ರೇಸ್ ಕೋರ್ಸ್ ಮೈದಾನದಲ್ಲಿಯೇ ಮೆಗಾ ಯೋಗ ತಾಲೀಮು ನಡೆಯಲಿದ್ದು, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನೋತ್ಸ ವದಂದು ರೇಸ್‍ಕೋರ್ಸ್ ಮೈದಾನದಲ್ಲಿ 1.5 ಲಕ್ಷ ಯೋಗ ಪಟುಗಳನ್ನು ಸೇರಿ ಸುವ ಎಲ್ಲಾ ಪ್ರಯತ್ನಗಳು ನಡೆದಿವೆ. ಅದಕ್ಕಾಗಿ ಯೋಗ ಸಂಘಟನೆಗಳು ತೀವ್ರ ಪ್ರಯತ್ನದಲ್ಲಿವೆ. ಪ್ರತಿಯೊಬ್ಬ ಯೋಗ ಪಟುಗಳು ತಮ್ಮ ಅಕ್ಕ-ಪಕ್ಕದವ ರನ್ನು ಹಾಗೂ ಸ್ನೇಹಿತರನ್ನು ಕರೆ ತರು ವಂತೆ ಮನವಿ ಮಾಡಲಾಗಿದೆ. ಇಂದಿನ ಯೋಗ ತಾಲೀಮಿನಲ್ಲಿ ಮುಖ್ಯಸ್ಥ ಜಿಎಸ್‍ಎಸ್‍ನ ಶ್ರೀಹರಿ, ವಿವಿಧ ಯೋಗ ಸಂಘಟನೆಗಳ ಮುಖ್ಯಸ್ಥರಾದ ಶಶಿಕುಮಾರ್, ಡಾ. ಗಣೇಶ್ ಕುಮಾರ್, ಡಾ.ಬಿ.ಪಿ.ಮೂರ್ತಿ, ನಾಗ ಭೂಷಣ್, ರಾಘವೇಂದ್ರ ಪೈ, ಪ್ರಕಾಶ್, ಮಾರುತಿ, ಕಾಳಾಜಿ, ವೆಂಕ ಟೇಶ್, ರವಿ, ರೂಪಶ್ರೀ, ಗೀತಾ, ಕಲಾ ವತಿ, ರೇಖಾ ರೋಹಿತ್, ದೇವ ರಾಜ್, ದೇವಿಕಾ, ಕಾಂಚನಗಂಗಾ, ಜಾಹ್ನವಿ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »