ಮೈಸೂರು: ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಒಡವಿನಕಟ್ಟೆ, ಕಬ್ಬಗೆರೆ, ಕಲ್ಲಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್‍ಕೆಎಸ್) ಹಾಗೂ ಒಡವಿನಕಟ್ಟೆ ಕೆರೆಯ ನೀರಿಗಾಗಿ ಹೋರಾಟ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ನಂಜುಮಳಿಗೆ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿ, ಸಾಯಲು ಸಾರಾಯಿ ಬೇಡ ಬದುಕಲು ನೀರು ಕೊಡಿ, ವರುಣಾ ನಾಲೆಯನ್ನು ಸರಿಪಡಿಸಿ, ಕಬಿನಿಯಿಂದ ಏತ ನೀರಾ ವರಿ ಯೋಜನೆ ಜಾರಿಗೊಳಿಸಿ ಎಂಬಿ ತ್ಯಾದಿ ಘೋಷಣೆಗಳನ್ನು ಕೂಗಿ ಒಡವಿನ ಕಟ್ಟೆ, ಕಬ್ಬಗೆರೆ, ಕಲ್ಲಹಳ್ಳಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿದರು.
ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದೂರು ಗ್ರಾಮದ ಒಡವಿನ ಕಟ್ಟೆ ಕೆರೆಯು 147.2 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ತಾಲೂಕಿನ ಅತೀ ದೊಡ್ಡ ಕೆರೆ. ಇದು 8ಕ್ಕೂ ಹೆಚ್ಚು ಗ್ರಾಮಸ್ಥರ ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅಂದಾಜು 600 ಎಕರೆ ಕೃಷಿ ಭೂಮಿಗೆ ನೀರಾ ವರಿಯ ಮೂಲವಾಗಿದೆ. ಅಲ್ಲದೆ, ಪ್ರಾಣಿ -ಪಕ್ಷಿಗಳ ದಾಹ ನೀಗಿಸುತ್ತಿದ್ದ ಈ ಕೆರೆ ಆಡಳಿತ ವರ್ಗದ ನಿರ್ಲಕ್ಷ್ಯತನದಿಂದ ಇಂದು ಬತ್ತಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಡವಿನಕಟ್ಟೆಗೆ ನೀರು ತುಂಬಿಸಿದಲ್ಲಿ ಕಬ್ಬಗೆರೆ, ಕಲ್ಲಹಳ್ಳಿ ಕೆರೆಗಳಿಗೆ ನೀರು ಹರಿದು ಬರಲಿದೆ. ಒಡವಿನಕಟ್ಟೆಗೆ ರಾಜ ಕಾಲುವೆ, ಕಾಡು, ಬೆಟ್ಟ ಹಾಗೂ ಜಮೀನು ಗಳಿಂದ ಮಳೆ ನೀರು ಹರಿದು ಬರುತ್ತಿತ್ತು. ಆದರೆ ಕಂದಕ, ತಡೆ ಒಡ್ಡುಗಳು, ಮಳೆ ಕೊರತೆ ಸೇರಿದಂತೆ ಅನೇಕ ಕಾರಣ ಗಳಿಂದ ಕೆರೆಯಲ್ಲಿ ನೀರು ಇಲ್ಲದಂತಾ ಗಿದೆ. ಕೆರೆಗೆ ನೀರು ತುಂಬಿಸಲು ದೇವ ರಾಜ ಅರಸು ನಾಲೆಯಿಂದ ನೀರು ಪೂರೈಕೆಗೆ ಕಾಲುವೆ ನಿರ್ಮಿಸಿದ್ದರೂ ಪ್ರಯೋಜನ ಇಲ್ಲವಾಗಿದೆ. ಅಲ್ಲದೆ, ಒಡ ವಿನಕಟ್ಟೆಯಿಂದ 7 ಕಿ.ಮೀ. ದೂರದಲ್ಲಿ ಕಬಿನಿ ಹರಿಯುತ್ತಿದ್ದು, ಏತ ನೀರಾವರಿ ಮೂಲಕ ಕೆರೆಗೆ ನೀರು ತುಂಬಿಸುವ ಯೋಜನೆಯೂ ಹಳ್ಳ ಹಿಡಿದಿದೆ ಎಂದು ಕಿಡಿಕಾರಿದರು.
ಮೈಸೂರು ಜಿಲ್ಲೆಯಲ್ಲಿ ಎರಡು ನದಿ ಗಳು ಮಳೆಗಾಲದಲ್ಲಿ ತುಂಬಿ ಹರಿಯು ತ್ತಿದ್ದರೂ ಈ ನದಿಗಳ ನಡುವೆ ಇರುವ ಜನತೆ ಮಾತ್ರ ನೀರು ಕಾಣದೇ ಕಂಗಾ ಲಾಗಿದ್ದಾರೆ. ಒಡವಿನಕಟ್ಟೆ ವ್ಯಾಪ್ತಿಯ ಮದ್ದೂರು, ಮದ್ದೂರುಹುಂಡಿ, ಚುಂಚ ರಾಯನಹುಂಡಿ, ಕಲ್ಲಹಳ್ಳಿ, ಸೋಲಿಗರ ಕಾಲೋನಿ, ಕಾಡಸೂರು, ಹಂಪಾಪುರ ಸೇರಿದಂತೆ ಇನ್ನಿತರ ಗ್ರಾಮಗಳು ತೀವ್ರ ವಾದ ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಭಾಗದ ಕೃಷಿ ಹಾಗೂ ಜನ ಸಮು ದಾಯ ಉಳಿಯಬೇಕಾದರೆ, ಈ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಅವುಗಳನ್ನು ಪುನಶ್ಚೇತನಗೊಳಿಸಲು ಯೋಜನೆಗಳನ್ನು ಕೂಡಲೇ ರೂಪಿಸ ಬೇಕೆಂದು ಒತ್ತಾಯಿಸಿದರು.
ನಂಜು ಮಳಿಗೆ ವೃತ್ತದಿಂದ ಸಾಗಿದ ಪ್ರತಿಭಟನಾ ಮೆರವಣಿಗೆ ಸಿದ್ದಪ್ಪ ವೃತ್ತ, ಶಾಂತಲಾ ಟಾಕೀಸ್ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ ಮಾರ್ಗವಾಗಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣ ತಲುಪಿತು. ಆರ್‍ಕೆಎಸ್ ರಾಜ್ಯ ಉಪಾಧ್ಯಕ್ಷ ಶಶಿಧರ್, ಸಂಘಟನೆ ಮುಖಂಡರಾದ ಚಂದ್ರಶೇಖರ್, ಬಸವ ರಾಜು, ಎಸ್‍ಯುಸಿಐ ಸಂಘಟನೆಯ ರವಿ, ಉಮಾದೇವಿ ಸೇರಿದಂತೆ ಈ ಕೆರೆಗಳ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.