`ನಮ್ಮ ಮೈಸೂರು ಫೌಂಡೇಷನ್’ನಿಂದ ಸ್ವಚ್ಛತಾ ಅಭಿಯಾನ
ಮೈಸೂರು

`ನಮ್ಮ ಮೈಸೂರು ಫೌಂಡೇಷನ್’ನಿಂದ ಸ್ವಚ್ಛತಾ ಅಭಿಯಾನ

June 23, 2019

ಮೈಸೂರು, ಜೂ.22(ಎಂಟಿವೈ)- ಬಂಬೂಬಜಾóರ್‍ನಲ್ಲಿರುವ ಅಂಧ, ಮೂಕ ಮತ್ತು ಶ್ರವಣ ದೋಷವುಳ್ಳ ಸರ್ಕಾರಿ ಶಾಲೆ ಆವರಣದಲ್ಲಿ ಶನಿವಾರ `ನಮ್ಮ ಮೈಸೂರು ಫೌಂಡೇಷನ್’ ಸದಸ್ಯರು ಸ್ವಚ್ಛತಾ ಅಭಿಯಾನ ನಡೆಸಿ, ನಿರುಪಯುಕ್ತ ವಸ್ತು ಹಾಗೂ ದಟ್ಟವಾಗಿ ಬೆಳೆದಿದ್ದ ಗಿಡಗಂಟಿ ಗಳನ್ನು ತೆರವುಗೊಳಿಸಿದರು.

ಸರ್ಕಾರಿ ಸ್ವಾಮ್ಯದ ವಿಶೇಷ ಮಕ್ಕಳ ಏಕೈಕ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿ ರುವ ಬಂಬೂಬಜಾóರ್‍ನಲ್ಲಿರುವ ಶಾಲೆಯ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿ ದ್ದವು. ಪಾದಚಾರಿ ಮಾರ್ಗದಲ್ಲಿಯೂ ಗಿಡ ಬೆಳೆದಿದ್ದರಿಂದ ಅಂಧ ವಿದ್ಯಾರ್ಥಿ ಗಳ ಸುಗಮ ಸಂಚಾರಕ್ಕೆ ತೊಡಕಾಗು ತ್ತಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನಮ್ಮ ಮೈಸೂರು ಫೌಂಡೇಷನ್, ಡಿ.ಕೆ. ಕನ್ಸ್‍ಟ್ರಕ್ಷನ್, ಕ್ಯಾಡ್ ಸ್ಟೇಷನ್ ಟೆಕ್ನಾಲಜಿ ಪ್ರೈಲಿ, ಕ್ಯಾಟ್ ಸಲ್ಯೂಷನ್ ಪ್ರೈ.ಲಿ ಸಿಬ್ಬಂದಿ ಗಳು, ವಿಜಯ ವಿಠಲ ಶಾಲೆ, ಭಗಿನಿ ಸೇವಾ ಸಮಾಜದ ವಿದ್ಯಾರ್ಥಿಗಳು ಸ್ವಚ್ಛತಾ ಅಭಿ ಯಾನ ನಡೆಸಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹಿಸಿದರು. ಜೆಸಿಬಿ ಹಾಗೂ ರಸ್ತೆಯಲ್ಲಿ ಕಸ ಗುಡಿಸುವ ಯಂತ್ರ ತಂದು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಇದೇ ವೇಳೆ ನಮ್ಮ ಮೈಸೂರು ಫೌಂಡೇ ಷನ್ ವ್ಯವಸ್ಥಾಪಕ ಟ್ರಸ್ಟಿ ದಶರಥ್ ಮಾತ ನಾಡಿ, ಮೂರು ದಿನದ ಹಿಂದೆ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶೇಷ ಮಕ್ಕಳಿಗೆ ಸಿಹಿ ವಿತರಿಸಲು ಬಂದಿದ್ದಾಗ, ಶಾಲಾ ಆವರಣದಲ್ಲಿ ಗಿಡಗಂಟಿ ಬೆಳೆದಿ ದ್ದನ್ನು ಗಮನಿಸಿದೆವು. ದೇವರ ಮಕ್ಕಳೆಂದು ಕರೆಯುವ ವಿಶೇಷ ಮಕ್ಕಳು ಕಲಿಯುತ್ತಿ ರುವ ಶಾಲೆಯ ಪರಿಸರ ಹದಗೆಟ್ಟಿರುವು ದನ್ನು ಮನಗಂಡು ಇಂದು ಸ್ವಯಂ ಪ್ರೇರಣೆ ಯಿಂದ ಸ್ವಚ್ಛತಾ ಅಭಿಯಾನ ನಡೆಸುತ್ತಿ ದ್ದೇವೆ. ಕೇವಲ ಸ್ವಚ್ಛತೆಗೆ ಮಾತ್ರ ನಮ್ಮ ಶ್ರಮ ಸೀಮಿತಗೊಳಿಸದೆ ಕೆಟ್ಟಿರುವ ಆಟಿಕೆಗಳನ್ನು ದುರಸ್ತಿ ಮಾಡಿಸುತ್ತಿದ್ದೇವೆ. ಮಕ್ಕಳಿಗೆ ಪೂರಕ ವಾದ ವಾತಾವರಣ ನಿರ್ಮಿಸಲು ನಮ್ಮ ಮೈಸೂರು ಫೌಂಡೇಷನ್ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಮ್ಮ ಮೈಸೂರು ಫೌಂಡೇಷನ್ ಸಂಸ್ಥಾಪಕ ಟ್ರಸ್ಟಿ ಸಿ.ಆರ್. ಪವಿತ್ರ, ಟ್ರಸ್ಟಿಗಳಾದ ಎಂ.ಜೆ.ವೀರಾಶ್, ಎನ್.ಮಲ್ಲೇಶ್, ಎಂ.ವಿ.ಕಲ್ಯಾಣ್, ಕೆ. ಅನುರಾಧ, ಬಿ.ಎನ್.ಶ್ರೀರಾಜ್, ಎನ್. ಎಸ್.ರಂಗರಾಜು, ಕೆ.ಎನ್.ರಮೇಶ್, ಆರ್.ನಿಹಾರಿಕಾ, ಎ.ಎಂ.ಚಂದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »