ಕೇಂದ್ರ ಬಜೆಟ್‍ನಲ್ಲಿ ಹೊಸ ಘೋಷಣೆಗಳಿರುವ ಸಾಧ್ಯತೆ
ಮೈಸೂರು

ಕೇಂದ್ರ ಬಜೆಟ್‍ನಲ್ಲಿ ಹೊಸ ಘೋಷಣೆಗಳಿರುವ ಸಾಧ್ಯತೆ

June 24, 2019

ಮೈಸೂರು: ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಹೊಸ ದಾಗಿ ನಿರೀಕ್ಷೆ ಇಟ್ಟುಕೊಳ್ಳುವಂತದ್ದು ಏನಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಳೆದ ಫೆಬ್ರವರಿಯಲ್ಲಿಯೇ ಅತ್ಯುತ್ತಮ ಬಜೆಟ್ ನೀಡಿದ್ದಾರೆ. ಈಗ ಕೆಲವು ಹೊಸ ಘೋಷಣೆ ಗಳಿರುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ಮೈಸೂರು ತಾಲೂಕಿನ ಮರಟಿಕ್ಯಾತನ ಹಳ್ಳಿಯಲ್ಲಿ ಸಚಿವ ಜಿ.ಟಿ.ದೇವೇಗೌಡ ರೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ಸಂದರ್ಭದಲ್ಲಿ ಪಾಲ್ಗೊಂ ಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತ ನಾಡಿದರು. ನರೇಂದ್ರ ಮೋದಿಯವರು ಕಳೆದ 5ವರ್ಷದಲ್ಲಿ ಮಾಡಿದ ಅಭಿವೃದ್ಧಿ ಗಳೇ ಮುಂದಿನ 5 ವರ್ಷಗಳಲ್ಲಿಯೂ ಮುಂದುವರಿದ ಭಾಗವಾಗಿರುತ್ತದೆ ಎಂದರು.

ಕಳೆದ 5 ವರ್ಷಗಳಲ್ಲಿ ಒಬ್ಬ ಸಂಸದ ನಾಗಿ ಮೈಸೂರಿಗೆ ಏನು ಮಾಡಬೇಕೆಂ ದಿದ್ದೆನೋ ಅದನ್ನು ನಾನು ಮಾಡಿದ್ದೇನೆ. ಮೈಸೂರಿಗೆ ಪಾಸ್‍ಪೋರ್ಟ್ ಸೇವಾ ಕೇಂದ್ರ, ವಿಮಾನ ನಿಲ್ದಾಣದ ಅಭಿವೃದ್ಧಿ, ಬೆಂಗಳೂರಿಗೆ ದಶಮಾರ್ಗ ಹೆದ್ದಾರಿ, ಮಡಿಕೇರಿಗೆ ಚತುಷ್ಪಥ ಹೆದ್ದಾರಿ, ರೈಲ್ವೆ ನಿಲ್ದಾಣದ ಅಭಿವೃದ್ಧಿ, ರಿಂಗ್ ರಸ್ತೆ ಅಭಿ ವೃದ್ದಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲೂ ಹಲವು ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳುತ್ತೇನೆ ಎಂದರು.

Translate »