ಇವಿಎಂ ವಜಾಗೊಳಿಸಲು ಆಗ್ರಹಿಸಿ ಡಿಸಿಗೆ 5 ಸಾವಿರ ಪತ್ರ ಸಲ್ಲಿಕೆ
ಮೈಸೂರು

ಇವಿಎಂ ವಜಾಗೊಳಿಸಲು ಆಗ್ರಹಿಸಿ ಡಿಸಿಗೆ 5 ಸಾವಿರ ಪತ್ರ ಸಲ್ಲಿಕೆ

June 27, 2019

ಮೈಸೂರು, ಜೂ.26(ಪಿಎಂ)- ಇವಿಎಂ (ಮತ ಯಂತ್ರ) ನಿಷೇಧ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿರುವ `ಇವಿಎಂ ವಜಾಗೊಳಿಸಿ’ ಪತ್ರ ಚಳುವಳಿಯಲ್ಲಿ ಸಮಿತಿಯ ಮೈಸೂರು ವಿಭಾಗ ದಿಂದ ಸಂಗ್ರಹಿಸಿರುವ 5 ಸಾವಿರ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತಿರುವುದಾಗಿ ಸಮಿ ತಿಯ ಮೈಸೂರು ವಿಭಾಗ ಸಂಚಾಲಕ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಯಂತ್ರಗಳು ದೋಷಪೂರಿತ ಎಂಬ ಆರೋಪ ಪ್ರಬಲವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ `ಇವಿಎಂ ವಜಾಗೊಳಿಸಿ, ಬ್ಯಾಲೆಟ್ ಪೇಪರ್ ಜಾರಿ ಗೊಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ, ಭಾರತ ಉಳಿಸಿ’ ಎಂಬ ಪತ್ರ ಚಳುವಳಿಯನ್ನು ಸಮಿತಿ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಗಳನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರ ಪತಿಗಳು ಹಾಗೂ ಕೇಂದ್ರ ಮುಖ್ಯ ಚುನಾವಣಾ ಧಿಕಾರಿಗಳಿಗೆ ತಲುಪಿಸುತ್ತಿದ್ದು, ಮೈಸೂರು ವಿಭಾಗ ದಿಂದ ಸಂಗ್ರಹಿಸಿರುವ 5 ಸಾವಿರ ಪತ್ರಗಳನ್ನು ಇಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸ ಲಾಗುವುದು ಎಂದರು. ಸಮಿತಿ ಸಂಚಾಲಕರಾದ ತುಂಬಲ ರಾಮಣ್ಣ, ಪುಟ್ಟಸ್ವಾಮಿ, ಜೈಶಂಕರ್ ಶ್ಯಾಮ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »