ಕನಗನಮರಡಿ ಬಸ್ ದುರಂತ, ಸುಳವಾಡಿ ವಿಷ ಪ್ರಸಾದ ಕುರಿತ ಪುಸ್ತಕ ಬಿಡುಗಡೆ
ಮೈಸೂರು

ಕನಗನಮರಡಿ ಬಸ್ ದುರಂತ, ಸುಳವಾಡಿ ವಿಷ ಪ್ರಸಾದ ಕುರಿತ ಪುಸ್ತಕ ಬಿಡುಗಡೆ

June 27, 2019

ಮೈಸೂರು, ಜೂ.26(ಎಂಕೆ)- ಭಾರತ ನಂಬಿಕೆ ಎಂಬ ತತ್ವ ಸಿದ್ಧಾಂತದ ಮೇಲೆ ನಿಂತಿದೆ. ಇಲ್ಲಿ ನಂಬಿಕೆಯೇ ದೇವರು, ನಂಬದಿರುವುದು ದೆವ್ವ. ದೇವರ ಹೆಸರಿನಲ್ಲಿ ನಡೆದ ಸುಳವಾಡಿ ವಿಷ ಪ್ರಸಾದ ಘಟನೆ ಒಂದು ದುರಂತ ಇತಿಹಾಸವಾಗಿದೆ ಎಂದು ಶಾಸಕ ಅಡಗೂರು ಹೆಚ್.ವಿಶ್ವನಾಥ್ ಹೇಳಿದರು.

ಮಾನಸ ಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಸಂವಹನ ಪ್ರಕಾಶನ ಆಯೋಜಿಸಿದ್ದ ಪತ್ರಕರ್ತ ರವಿ ಪಾಂಡವ ಪುರ ಅವರ ‘ರೈಟ್‍ರೈಟ್, ಅಯ್ಯೋದ್ಯಾವ್ರೇ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮಲ್ಲಿ ಎಲ್ಲರಿಗೂ ದೇವರೆಂದರೆ ಭಯ-ಭಕ್ತಿ. ಎಲ್ಲವನ್ನು ಮೀರಿದ ಅಗೋಚರ ಶಕ್ತಿ ನಮ್ಮ ನಡುವೆ ಇದೆ ಎಂಬ ನಂಬಿಕೆ ಯಿಂದ ರಸ್ತೆ ಬದಿ ಯಲ್ಲಿ ಕಲ್ಲುಗಳನ್ನು ಕಂಡರೂ ಕೈ ಮುಗಿಯುತ್ತೇವೆ ಎಂದರು.

ಪತ್ರಕರ್ತ ರವಿ ಪಾಂಡವಪುರ ಅವರು, ಕನಗನಮರಡಿ ಬಸ್ ದುರಂತ ಕುರಿತಂತೆ ‘ರೈಟ್‍ರೈಟ್’ ಹಾಗೂ ಸುಳ ವಾಡಿ ಕಿಚ್‍ಗುತ್ ಮಾರಮ್ಮನ ದೇವಾ ಲಯದ ವಿಷ ಪ್ರಸಾದ ಘಟನೆ ಕುರಿತು ‘ಅಯ್ಯೋದ್ಯಾವ್ರೇ’ ಕೃತಿಗಳನ್ನು ಬರೆದಿದ್ದಾರೆ. ದೇಶದ ಜನತೆಯನ್ನು ತಲ್ಲಣಗೊಳಿಸಿದ ಈ ಎರಡೂ ದುರಂತ ಘಟನಾವಳಿ ಗಳನ್ನು ಮನಮುಟ್ಟುವಂತೆ ಬರೆದಿರುವ ಅವರು, ದುರಂತ ಘಟನೆ ಬಳಿಕ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಬರೆದಿದ್ದರೆ ಕೃತಿಗಳಿಗೆ ಮತ್ತಷ್ಟು ಮೆರಗು ಸಿಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು, ಎರಡೂ ದುರಂತಗಳನ್ನು ಅದ್ಭುತವಾಗಿ ನಿಭಾಯಿಸಿದರು. ಘಟನಾ ಸ್ಥಳಕ್ಕೆ ಸ್ವತಃ ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ತ್ವರಿತವಾಗಿ ಆದೇಶಿಸಿದರು. ಘಟನೆ ನಡೆದ ಸ್ಥಳಗಳಲ್ಲಿ ಮತ್ತೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡರು. ಸುಳ್ವಾಡಿ ಘಟನೆಯ ಸಂದರ್ಭ ದಲ್ಲೂ ಅತ್ಯಂತ ಮಾನವೀಯತೆಯಿಂದ ಸ್ಪಂದಿಸಿ, ನೊಂದ ಕುಟುಂಬಗಳಿಗೆ ಪರಿಹಾರ, ಘಟನೆಯಲ್ಲಿ ವಿಷಾಹಾರದಿಂದ ಬಳಲಿದವರಿಗೆ ಸರ್ಕಾರಿ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆಯನ್ನೂ ಕೊಡಿಸುವ ಮೂಲಕ ಮಾನವೀಯತೆ ಮೆರೆದರು ಎಂದು ತಿಳಿಸಿದರು.

ಲಾಯರ್‍ಗಳು ಮಾನವೀಯತೆ ಮೆರೆದಿ ದ್ದಾರೆ: ಸುಳವಾಡಿ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳ ಪರವಾಗಿ ಯಾವ ವಕೀಲರೂ ವಾದ ಮಾಡಲು ಮುಂದೆ ಬರಲಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವ ಎಲ್ಲರ ಕೂಗಿಗೆ ಸ್ಪಂದಿಸಿರುವ ಲಾಯರ್ ಗಳು ಮಾನವೀಯತೆ ಮೆರೆದರು ಎಂದರು.

ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ನೀಚರು ಸ್ವಾಮೀಜಿಗಳ ವೇಷದಲ್ಲಿ, ಅಯೋಗ್ಯರು ಸಜ್ಜನರ ವೇಷದಲ್ಲಿ ಇರಬಾರದು. ಈ ಎರಡೂ ಘಟನೆಗಳು ನನ್ನ ಮನಸ್ಸನ್ನು ತಲ್ಲಣಗೊಳಿ ಸಿದವು. ಒಂದು ಆಕಸ್ಮಿಕವಾದರೆ, ಮತ್ತೊಂದು ಮಾನವ ಪ್ರೇರಿತ ಘಟನೆ ಯಾಗಿದೆ. ಸುಳವಾಡಿ ಘಟನೆಯಿಂದ ನಮ್ಮ ಶ್ರದ್ಧಾಕೇಂದ್ರಗಳ ಮೇಲೆ ಅಪನಂ ಬಿಕೆ ಬರುತ್ತಿದೆ. ಪ್ರಸಾದವನ್ನು ಪರೀಕ್ಷಿ ಸಲೂ ಸರ್ಕಾರ ಮುಂದಾಗಿರುವುದು ಅಪಾಯಕಾರಿ. ಇನ್ನು ಮುಂದೆ ದೇವಸ್ಥಾ ನದಲ್ಲಿ ಅಧಿಕಾರಿಗಳಿಗೆ ಲಂಚ ಕೊಟ್ಟರೇ ಯಾವ ಪ್ರಸಾದವನ್ನಾದರೂ ಹಂಚ ಬಹುದಾದ ಸನ್ನಿವೇಶ ಸೃಷ್ಟಿಯಾಗಬ ಹುದು ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕು ಮಾರ್ ಮಾತನಾಡಿ, ರವಿ ಪಾಂಡವ ಪುರ ಅವರ ಎರಡೂ ಕೃತಿಗಳಲ್ಲಿ ಸಂಶೋ ಧನೆ, ವಿಶ್ಲೇಷಣೆ ಮತ್ತು ಸಂವೇದನೆಗಳಿವೆ. ನಾಡಿನ ಅಪರೂಪದ ದುರಂತಗಳನ್ನು ಕುರಿತು ಮನಮುಟ್ಟುವಂತೆ ಬರೆದಿದ್ದಾರೆ. ದುರಂತಗಳನ್ನೇ ಬರೆಯಬೇಕಲ್ಲ ಎಂಬ ಹಿಂಜರಿಕೆ ಬೇಡ. ಲೇಖಕರಿಗೆ ತುಡಿತ ಮುಖ್ಯ. ಸಮಾಜದ ಅನಿಷ್ಟಗಳಿಗೆ ಮುಕ್ತಿ ಸಿಗುವ ತನಕ ಬರವಣಿಗೆ ಕ್ರಿಯಾಶೀಲ ವಾಗಿರಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ, ಸಂವಹನ ಪ್ರಕಾಶನದ ಲೋಕಪ್ಪ, ಲೇಖಕ ರವಿ ಪಾಂಡವಪುರ ಮತ್ತಿತರರು ಉಪಸ್ಥಿತರಿದ್ದರು.

Translate »