ರನ್‍ವೇ ಬಿಟ್ಟು ಹೊರ ಬಂದ ವಿಮಾನ
ಮೈಸೂರು

ರನ್‍ವೇ ಬಿಟ್ಟು ಹೊರ ಬಂದ ವಿಮಾನ

July 1, 2019

ಮಂಗಳೂರು, ಜೂ.30-ಇಲ್ಲಿನ ಬಜ್ಜೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ರನ್ ವೇಯಿಂದ ಹೊರ ಬಂದಿದ್ದು, ಪೈಲಟ್‍ನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, 183 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್-380 ವಿಮಾನವು ಸಂಜೆ 5.40ಕ್ಕೆ ಲ್ಯಾಂಡ್ ಆಗಬೇಕಾಗಿತ್ತು. ವಿಮಾನವು ಲ್ಯಾಂಡ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿ ರನ್ ವೇಯಿಂದ ಹೊರ ಬಂದು ಟ್ಯಾಕ್ಸ್ ಮಾರ್ಗಕ್ಕೆ ನುಗ್ಗಿದೆ. ಅಪಾಯದ ಸೂಚನೆ ಅರಿತ ಪೈಲಟ್ ಹರಸಾಹಸ ಪಟ್ಟು ವಿಮಾನವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರನ್ ವೇ ಬಿಟ್ಟು ಹೊರ ಬಂದ ವಿಮಾನದ ಚಕ್ರಗಳು ಮಣ್ಣಿನಲ್ಲಿ ಉಜ್ಜಿಕೊಂಡು ಹೋಗಿದ್ದು, ನಿಂತ ನಂತರ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತ ವಾಗಿ ಹೊರ ತಂದಿದ್ದಾರೆ. ರನ್ ವೇಯಿಂದ ವಿಮಾನ ಹೊರ ಬರಲು ನಿಖರ ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ. ಬಜ್ಜೆ ವಿಮಾನ ನಿಲ್ದಾಣದಲ್ಲಿ 2010ರಲ್ಲಿ ಬೋಯಿಂಗ್ ವಿಮಾನ ರನ್ ವೇಯಿಂದ ಹೊರ ಬಂದು ಗುಡ್ಡಕ್ಕೆ ಗುದ್ದಿ ಪತನ ಗೊಂಡ ಪರಿಣಾಮ 154 ಮಂದಿ ದುರ್ಮರಣಕ್ಕೀಡಾಗಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು, ಇಂದಿನ ಈ ಘಟನೆಗೆ ಕಾರಣ ವೇನು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂಭತ್ತು ವರ್ಷದ ಹಿಂದೆ ಇದೇ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತ ಸಂಭವಿಸಿತ್ತು. ಈಗ ಯಾವುದೇ ಪ್ರಾಣ ಹಾನಿಯಾಗದಿದ್ದರೂ, ಅನಾಹುತವಂತೂ ನಡೆದಿದೆ. ಇದಕ್ಕೆ ಪೈಲಟ್ ಕಾರಣವೇ? ವಿಮಾನದಲ್ಲಿ ತಾಂತ್ರಿಕ ದೋಷವಿತ್ತೇ? ಅಥವಾ ವಿಮಾನ ನಿಲ್ದಾಣದ ರನ್ ವೇನಲ್ಲಿ ದೋಷವಿದೆಯೇ? ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಇನ್ನು ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕೆಂದು ತಾವು ಕೇಂದ್ರ ವಿಮಾನಯಾನ ಸಚಿವರನ್ನು ಕೋರಲಿ ರುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಕರಣ ದಾಖಲಾಗಿದೆ.

Translate »