ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಅವರಿಂದ ರಾಜಶೇಖರ ಕೋಟಿಯವರ ಪುತ್ಥಳಿ ಅನಾವರಣ
ಮೈಸೂರು

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಅವರಿಂದ ರಾಜಶೇಖರ ಕೋಟಿಯವರ ಪುತ್ಥಳಿ ಅನಾವರಣ

July 7, 2019

ಮೈಸೂರು, ಜು.6(ಪಿಎಂ)- ಒಡ ನಾಡಿ ಸೇವಾ ಸಂಸ್ಥೆ ವತಿಯಿಂದ ಗೆಜ್ಜ ಗಳ್ಳಿಯ ಒಡನಾಡಿ ಬಾಲಕರ ಪುನ ರ್ವಸತಿ ಕೇಂದ್ರದ ಆವರಣದಲ್ಲಿ ಪತ್ರಿ ಕೋದ್ಯಮಿ ರಾಜಶೇಖರ ಕೋಟಿ ಸ್ಮರ ಣಾರ್ಥ ನೂತನವಾಗಿ ನಿರ್ಮಿಸಿರುವ `ಜೀವ ಸಂಗಮ’ ಸಭಾಂಗಣದ ಉದ್ಘಾ ಟನೆ ಹಾಗೂ ಇದೇ ಸಭಾಂಗಣದ ಎದುರು ಪ್ರತಿಷ್ಠಾಪಿಸಿರುವ ರಾಜಶೇಖರ ಕೋಟಿ ಅವರ ಪುತ್ಥಳಿ ಅನಾವರಣವನ್ನು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಶನಿವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಜಿ.ಟಿ.ದೇವೇ ಗೌಡ, ರಾಜಶೇಖರ ಕೋಟಿ ಮಾನ ವೀಯ ಮೌಲ್ಯದೊಂದಿಗೆ ವಿಶೇಷ ವ್ಯಕ್ತಿತ್ವ ಹೊಂದಿದ್ದರು. ಸರಳ-ಸಜ್ಜನಿಕೆ ಸ್ವಭಾವದ ಅವರು ಸದಾ ಅನ್ಯಾಯದ ವಿರುದ್ಧ ಸಿಡಿ ದೇಳುತ್ತಿದ್ದರು. ಅವರ ಪರಿಶ್ರಮವನ್ನು ಚಿಕ್ಕ ವಯಸ್ಸಿನಿಂದಲೇ ನಾನು ಕಂಡಿ ದ್ದೇನೆ. ಉತ್ತರ ಕರ್ನಾಟಕದಿಂದ ಬಂದು ಮೈಸೂರಿನಲ್ಲಿ ನೆಲೆನಿಂತು ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಸ್ಮರಿಸಿದರು.

ಸರಳ ವಿವಾಹಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ `ಜೀವ ಸಂಗಮ’ ಸಭಾಂಗಣ ರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ. ಎಷ್ಟೋ ಜನ ಅದ್ಧೂರಿ ಮದುವೆ ಮಾಡಲು ಸಾಲಸೋಲ ಮಾಡಿಕೊಂಡು ಮುಂದೆ ಅನೇಕ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ರೈತ ಸಮುದಾಯದಲ್ಲಿ ಹಲವರು ಜಮೀನು ಗಳನ್ನೇ ಮಾರಿ ಅದ್ಧೂರಿ ಮದುವೆ ಮಾಡು ತ್ತಾರೆ. ಇದರಿಂದ ಏನೇನೂ ಪ್ರಯೋ ಜನವಿಲ್ಲ. ಹೀಗಾಗಿ ಸರಳ ವಿವಾಹಕ್ಕೆ ಸಮಾಜ ಆದ್ಯತೆ ನೀಡಬೇಕಿದೆ. ನಾನು ಕೂಡ ನನ್ನ ಪುತ್ರ ಹಾಗೂ ಪುತ್ರಿಯ ವಿವಾಹವನ್ನು ತಿರುಪತಿಯಲ್ಲಿ ಸರಳವಾಗಿ ನೆರವೇರಿಸಿದೆ ಎಂದು ವಿವರಿಸಿದರು.

ಮಾಜಿ ಶಾಸಕ ವಾಸು ಮಾತನಾಡಿ, ರಾಜಶೇಖರ ಕೋಟಿಯವರು ಸರಳ, ಸಂಯಮ ಹಾಗೂ ಹೃದಯಸ್ಪರ್ಶಿ ವ್ಯಕ್ತಿತ್ವದವರು. ಕಟ್ಟಕಡೆಯ ಜನ ಸಮು ದಾಯದ ಬಗ್ಗೆ ಕಾಳಜಿ ಮೆರೆದ ಅವರ ಹೃದಯ ಸದಾ ಬಡವರ ಪರ ಮಿಡಿ ಯುತ್ತಿತ್ತು ಎಂದು ಸ್ಮರಿಸಿದರು.

`ಪತ್ರಿಕಾ ಮಾಧ್ಯಮ ಹಾಗೂ ಸಾಮಾ ಜಿಕ ಜವಾಬ್ದಾರಿ’ ಕುರಿತು ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು, ಸಿ.ಜಿ.ಮಂಜುಳಾ ವಿಚಾರ ಮಂಡನೆ ಮಾಡಿದರು. ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ವಿಮರ್ಶಕ ಜಿ.ಹೆಚ್.ನಾಯಕ್, ಚಿಂತಕ ರಾದ ಪ್ರೊ. ಕೆ.ಎಸ್.ಭಗವಾನ್, ಪ್ರೊ. ಮಹೇಶ್ ಚಂದ್ರ ಗುರು, ಪ್ರೊ. ಕಾಳೇ ಗೌಡ ನಾಗವಾರ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ರಾಜಶೇಖರ ಕೋಟಿ ಯವರ ಪುತ್ರ ರವಿ ಕೋಟಿ, ಪುತ್ರಿ ರಶ್ಮಿ ಕೋಟಿ, ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಮತ್ತಿತರರು ಹಾಜರಿದ್ದರು.

Translate »