ಮೈಸೂರು,ಜು.7(ಎಂಟಿವೈ)- ಕಾಂಗ್ರೆಸ್ ಪಕ್ಷದ ಬೆನ್ನೆಲುಬಿನಂತಿರುವ ಸೇವಾದಳದ ಕಾರ್ಯಕರ್ತ ರನ್ನು ಕಡೆಗಣಿಸಿದರೆ, ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗು ತ್ತದೆ ಎಂದು ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷೆ ಎಸ್.ಪ್ಯಾರಿ ಜಾನ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸೇವಾ ದಳದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿಯೂ ಸೇವಾದಳ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸೇವಾದಳ ಈ ಹಿಂದೆ ಸುಭದ್ರವಾಗಿ ನೆಲೆಯೂರಿತ್ತು. ಹಿಂದೂಸ್ತಾನ ಸೇವಾದಳ ಹೆಸರಿನಿಂದಾಗಿ ಪ್ರಸಿದ್ಧಿ ಯಾಗಿತ್ತು. ಸ್ವಾತಂತ್ರ್ಯ ಹೋರಾಟಗಳಲ್ಲಿ ಸೇವಾದಳದ ಕಾರ್ಯ ವೈಖರಿ ಗಮನಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ, ಜವಹರಲಾಲ್ ನೆಹರು ಸೇರಿದಂತೆ ಇನ್ನಿತರ ಮುಖಂ ಡರು ಸೇವಾದಳವನ್ನು ಕಾಂಗ್ರೆಸ್ನೊಂದಿಗೆ ವಿಲೀನ ಗೊಳಿಸಲು ಪ್ರಸ್ತಾಪಿಸಿದ್ದರು. ಇದರಿಂದ ಸೇವಾದಳ ಮಹತ್ವವನ್ನು ಅರಿಯಬಹುದಾಗಿದೆ ಎಂದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಆದ ಹಿನ್ನಡೆಯಿಂದ ಪಕ್ಷದ ಕಾರ್ಯ ಕರ್ತರು ಧೃತಿಗೆಡದಂತೆ ಹಿರಿಯ ನಾಯಕರು ಸೂಚಿಸಿ ದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಆತ್ಮಾವಲೋಕನ ಹಾಗೂ ಕಾರ್ಯಕಾರಿಣಿ ಸಭೆಯನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ. ಯುವ ಜನರನ್ನು ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಕಳೆದ ವರ್ಷ ರಾಹುಲ್ ಗಾಂಧಿ ಯಂಗ್ ಬ್ರಿಗೇಡ್ ಅನ್ನು ಸ್ಥಾಪಿಸಿದ್ದರು. ಇದಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶಾ ದ್ಯಂತ ಯಂಗ್ ಬ್ರಿಗೇಡ್ ಮೂಲಕ ಹಲವು ಮಂದಿ ಯುವ ಜನರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸೇವಾ ದಳದ ವತಿಯಿಂದ ಸದಸ್ಯ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲಾ, ತಾಲೂಕು ಹಾಗೂ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿರುವ ನ್ಯೂನತೆಯನ್ನು ಸರಿಪಡಿಸಿ ಕೊಂಡು ಪಕ್ಷ ಸಂಘಟನೆಗೆ ವಿವಿಧ ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂ ಡರು ಸೇವಾದಳದ ಪದಾಧಿಕಾರಿಗಳನ್ನು ಗುರುತಿಸುವ ಕೆಲಸ ಮಾಡುತ್ತಿಲ್ಲ. ನಿರ್ಲಕ್ಷ್ಯ ಮನೋಭಾವ ಎದ್ದು ಕಾಣುತ್ತಿದೆ. ಇಂತಹ ಬೆಳವಣಿಗೆ ನಿಲ್ಲಬೇಕು. ಸೇವಾ ದಳದ ಮೂಲಕ ಪಕ್ಷ ಸಂಘಟನೆಗೆ ಶ್ರಮಿಸುತ್ತಿರುವ ಮುಖಂಡರು, ಕಾರ್ಯಕರ್ತರಿಗೆ ಮನ್ನಣೆ ನೀಡಬೇಕು. ನಿರ್ಲಕ್ಷ್ಯ ಮುಂದುವರೆದರೆ ಪಕ್ಷದ ಸಂಘಟನೆಗೆ ಮತ್ತೆ ಹಿನ್ನಡೆಯಾಗುತ್ತದೆ. ಸೇವಾದಳದ ಕಾರ್ಯಕರ್ತರು ಪಕ್ಷದ ಸಂಘಟನೆಯನ್ನು ತೊಡಗಿಸಿಕೊಳ್ಳಲಿದ್ದಾರೆ. ಪ್ರತಿ ತಿಂಗಳು ಕಡೇ ಭಾನುವಾರ ಪಕ್ಷದ ಕಚೇರಿಯಲ್ಲಿ ಧ್ವಜಾ ರೋಹಣ ಮಾಡಲು ನಿರ್ಧರಿಸಲಾಗಿದೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಸೇವಾದಳ ತನ್ನದೇ ಕೊಡುಗೆ ನೀಡಿದೆ. ಸಂಘಟನೆಯ ಸಾಕಷ್ಟು ಮಂದಿ ತ್ಯಾಗ, ಬಲಿದಾನ ಮಾಡಿದ್ದಾರೆ. ಸೇವಾದಳಕ್ಕೆ ಲಕ್ಕೇಗೌಡ, ಬಿ.ಕೆ.ಹರಿಪ್ರಸಾದ್ರಂತ ಸಾಕಷ್ಟು ಮಂದಿ ಮುಖಂಡರು ಕೆಲಸ ಮಾಡಿದ್ದಾರೆ. ಬಿಜೆಪಿ ಸುಳ್ಳು ಹೇಳುವ ಮೂಲಕ ಯುವ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದೆ. ಇನ್ನಾದರೂ ನಿಷ್ಠಾವಂತರು ಹಾಗೂ ಪಕ್ಷ ಸಂಘಟನೆಯಲ್ಲಿ ಶ್ರಮಿಸುತ್ತಿರುವವರನ್ನು ಗುರುತಿಸಿ ಸ್ಥಾನಮಾನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತ ನಾಡಿ, ಸೇವಾದಳದ ಸಂಸ್ಥಾಪಕರಾದ ಹರ್ಡಿಕರ್ ಅವರು ದೇಶದ ಗಡಿ ಕಾಯಲು ಸೇವಾದಳದ ಕಾರ್ಯ ಕರ್ತರು ಸಮರ್ಥರಿದ್ದಾರೆ ಎಂದು ಹೇಳಿದ್ದರು. ಬಿಜೆಪಿಗೆ ಆರ್ಎಸ್ಎಸ್, ಎಬಿವಿಪಿ, ಭಜರಂಗದಳ ಸೇರಿದಂತೆ ಇನ್ನಿತರ ಸಂಘಟನೆಗಳು ನೆರವು ನೀಡು ತ್ತಿವೆ. ಕಾಂಗ್ರೆಸ್ನಲ್ಲಿ ಸೇವಾದಳ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸುತ್ತಿದೆ ಎಂದರು.
ಇದಕ್ಕೂ ಮುನ್ನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಧ್ವಜಾರೋಹಣ ನೆರವೇರಿಸಿ ಪಕ್ಷ ಸಂಘ ಟನೆಗೆ ಮುಂದಾಗಿರುವ ಸೇವಾದಳಕ್ಕೆ ಶುಭ ಕೋರಿ ದರು. ಸಭೆಯಲ್ಲಿ ಸೇವಾದಳದ ಮುಖಂಡರಾದ ಆರ್. ಪ್ರಕಾಶ್ ಕುಮಾರ್, ಉಪೇಂದ್ರ ಧೂಳೆ, ಗೋಪಾಲೇ ಗೌಡ, ಸುಜಾತ ಉಳ್ಳಾಲ, ವಿಶ್ವನಾಥ್, ಲಲಿತ, ಶಂಕರ್ ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕಾರಿಣಿ ಸಭೆಗೆ ವಿವಿಧ ಜಿಲ್ಲೆಗಳಿಂದ ಸೇವಾ ದಳದ ಪದಾಧಿಕಾರಿಗಳು ಆಗಮಿಸಿದ್ದರು.