ಮೈಸೂರು, ಜು.8(ಎಸ್ಬಿಡಿ)- ಫುಟ್ಪಾತ್ಗಳನ್ನು ಪಾದಚಾರಿಗಳಿಗೆ ಮುಕ್ತಗೊಳಿಸಿ, ಇಲ್ಲವೇ ನಗರ ಪಾಲಿಕೆ ಮುಂಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ ಎಂದು ಕಾರ್ಪೊರೇಟರ್ಗಳು ಆಗ್ರಹಿಸಿದ್ದಾರೆ.
ಪಾಲಿಕೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಫುಟ್ಪಾತ್ ಅವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ ಕಾರ್ಪೊರೇಟರ್ ಕೆ.ವಿ. ಶ್ರೀಧರ್, ಫುಟ್ಪಾತ್ಗಳು ಪಾದಚಾರಿಗಳಿಗೆ ಮುಕ್ತವಾಗಿ ರಬೇಕು ಹಾಗೂ ಸ್ವಚ್ಛವಾಗಿರಬೇಕೆಂದು ನ್ಯಾಯಾಲಯದ ಆದೇಶವಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆಕ್ಟ್ನಲ್ಲೂ ಇದನ್ನೇ ಹೇಳಲಾಗಿದೆ. ಅಲ್ಲದೆ ಈ ಹಿಂದೆಯೇ ಕೌನ್ಸಿಲ್ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಫುಟ್ಪಾತ್ ಗಳನ್ನು ಒಂದೆಡೆ ಮಳಿಗೆದಾರರು ಅತಿಕ್ರಮಿಸಿಕೊಂಡರೆ ಮತ್ತೊಂದೆಡೆ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಪಾರಂ ಪರಿಕ ಸಯ್ಯಾಜಿರಾವ್ ರಸ್ತೆ ಸೇರಿದಂತೆ ನಗರದ ಎಲ್ಲಾ ರಸ್ತೆಗಳಲ್ಲೂ ಇದೇ ಪರಿಸ್ಥಿತಿಯಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ಪಾದಚಾರಿಗಳು ರಸ್ತೆಯಲ್ಲಿ ಓಡಾ ಡುವಂತಾಗಿದೆ. ದುರದೃಷ್ಟವಶಾತ್ ರಸ್ತೆಯಲ್ಲಿ ಪಾದಚಾರಿ ಗಳು ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ಪಾಲಿಕೆ ಪರಿಹಾರ ನೀಡುವುದೇ?. ಫುಟ್ಪಾತ್ಗಳನ್ನು ಪಾದಚಾರಿಗಳಿಗೆ ಮುಕ್ತಗೊಳಿಸಿ, ಇಲ್ಲವೇ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಪಾಲಿಕೆ ವತಿಯಿಂದ ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವುದಿಲ್ಲ ಎಂದು ನಿರ್ಣಯ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫುಟ್ಪಾತ್ ವ್ಯಾಪಾರಿಗಳ ರಕ್ಷಣೆ: ಮಾಜಿ ಮೇಯರ್ ಅಯೂಬ್ಖಾನ್ ಮಾತನಾಡಿ, ಹಾಕಿಂಗ್ ಜೋನ್ ನಿರ್ಮಾ ಣದ ನೆಪದಲ್ಲಿ ಅಧಿಕಾರಿಗಳು ಫುಟ್ಪಾತ್ ವ್ಯಾಪಾರಿಗಳಿಗೆ ರಕ್ಷಣೆ ನೀಡುತ್ತಿದ್ದೀರಿ. ಇದರಿಂದ ಬೀದಿಬದಿ ವ್ಯಾಪಾರಿ ಗಳ ಸಂಖ್ಯೆ ದುಪ್ಪಟ್ಟಾಗಿದೆ. ಪಾಲಿಕೆ ಮುಂಭಾಗದ ಫುಟ್ ಪಾತ್ನಲ್ಲಿ ನಾಳೆಯಿಂದಲೇ ವ್ಯಾಪಾರ ಆರಂಭಿಸುತ್ತೇವೆ. ಆಗಲಾದರೂ ಅಧಿಕಾರಿಗಳಿಗೆ ನಾಚಿಕೆಯಾಗುವುದೇ ನೋಡೋಣ. ಕೌನ್ಸಿಲ್ ನಿರ್ಣಯ ಹಾಗೂ ಮೇಯರ್ ಆದೇ ಶಕ್ಕೆ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯ ರಮೇಶ್ ಮಾತನಾಡಿ, ಫಾಸ್ಟ್ಫುಡ್ ಇನ್ನಿತರ ತಿಂಡಿ ತಿನಿಸು ಮಾರಾಟ ಮಾಡುವವರು ಅಲ್ಲಿಯೇ ಸಿಲಿಂ ಡರ್ ಇಟ್ಟುಕೊಂಡಿರುತ್ತಾರೆ. ಏನಾದರೂ ಸಿಡಿದು ಅನಾ ಹುತ ಸಂಭವಿಸಿದರೆ ಯಾರು ಹೊಣೆ. ಶಿವರಾಂಪೇಟೆ ರಸ್ತೆಯ ಫುಟ್ಪಾತ್ ಅನ್ನು ಸಂಪೂರ್ಣವಾಗಿ ಅತಿಕ್ರಮಿಸಿ ಕೊಂಡಿದ್ದಾರೆ. ಇನ್ನು ದೇವರಾಜ ಮಾರುಕಟ್ಟೆ ಬಳಿ ಓಡಾಡಲು ಸಾಹಸ ಮಾಡಬೇಕೆಂದು ಹೇಳಿದರು. ಸರಸ್ವತಿಪುರಂ ಸಿಗ್ಮಾ ಆಸ್ಪತ್ರೆಯವರು ಫುಟ್ಪಾತ್ ಅತಿಕ್ರಮಿಸಿಕೊಂಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯೆ ವೇದಾವತಿ ದೂರಿದರು. ಕೌನ್ಸಿಲ್ ನಿರ್ಣಯವಾಗಿದ್ದರೂ ಇಲ್ಲಿವರೆಗೂ ಫುಟ್ಪಾತ್ಗಳನ್ನು ಪಾದಚಾರಿಗಳಿಗೆ ಮುಕ್ತ ಗೊಳಿಸಲು ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದರು.
ಕಡೆಗೆ ಫುಟ್ಪಾತ್ ಅತಿಕ್ರಮವನ್ನು ತೆರವುಗೊಳಿಸಿ, ಪಾದಚಾರಿಗಳ ಸಂಚಾರಕ್ಕೆ ಮುಕ್ತಗೊಳಿಸಿ. ಇಲ್ಲವೇ ಪಾಲಿಕೆ ಮುಂಭಾಗದ ಫುಟ್ಪಾತ್ನಲ್ಲಿ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡಲು ಅವಕಾಶ ನೀಡಿ ಎಂದು ಸದಸ್ಯರು ಒಕ್ಕೊ ರಲಿನಿಂದ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್, ಫುಟ್ಪಾತ್ ಅತಿಕ್ರಮವನ್ನು ಕಟ್ಟು ನಿಟ್ಟಾಗಿ ತೆರವುಗೊಳಿಸುವಂತೆ ಆದೇಶಿಸಿದರು.
ಟೆಂಡರ್ ಕರೆಯುವುದಿಲ್ಲ: ವಿವಿಧ ಕಾರ್ಯ ನಿರ್ವ ಹಣೆಯನ್ನು ಟೆಂಡರ್ ಮೂಲಕ ಖಾಸಗಿಯವರಿಗೆ ವಹಿಸ ಲಾಗಿದೆ. ಅವರ ಅವಧಿ ಮುಗಿದು ವರ್ಷ ಕಳೆದಿದ್ದರೂ ಹೊಸದಾಗಿ ಟೆಂಡರ್ ಕರೆದಿಲ್ಲ. ಯಾರ ಅನುಕೂಲಕ್ಕಾಗಿ ಈ ಧೋರಣೆ ಅನುಸರಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ. ನೀರಿನ ಬಿಲ್ ಕಲೆಕ್ಷನ್ಗೆ ಪ್ರತ್ಯೇಕ ಟೆಂಡರ್ ನೀಡಲಾಗಿದ್ದು, ಪಾಲಿಕೆ ಯಿಂದ ಮಾಸಿಕ 15 ಲಕ್ಷ ರೂ. ನೀಡಲಾಗುತ್ತಿದೆ. ಮೂಲ ಸೌಲಭ್ಯದ ಜೊತೆಗೆ ಪಾಲಿಕೆಯ 30 ಬಿಲ್ ಕಲೆಕ್ಟರ್ ಗಳನ್ನೂ ಒದಗಿಸಲಾಗಿದೆ. ಟೆಂಡರ್ದಾರ ಕೇವಲ 40 ಸಿಬ್ಬಂದಿಗಳನ್ನು ನಿಯೋಜಿಸಿಕೊಂಡಿದ್ದಾರೆ. ಆದರೂ ಸಮ ರ್ಪಕವಾಗಿ ಶುಲ್ಕ ಸಂಗ್ರಹಿಸುತ್ತಿಲ್ಲ. ಇನ್ನೂ ಸುಮಾರು 1.60 ಕೋಟಿ ರೂ.ಗೂ ಬಾಕಿಯಿದೆ. ನೀರು ಸರಬರಾಜು ಲಾರಿ ಗಳು, ಅಭಯ ಸೇವೆಯ ಟೆಂಡರ್ ಮುಗಿದಿದ್ದರೂ ಮತ್ತೆ ಟೆಂಡರ್ ಕರೆದಿಲ್ಲ. ಇದು ಉದಾಹರಣೆಯಷ್ಟೇ. ಇಂತಹ ಪ್ರಕರಣಗಳು ಸಾಕಷ್ಟಿವೆ. ಇದರಿಂದ ಪಾಲಿಕೆಗೆ ನಷ್ಟವಾಗು ತ್ತಿದೆ. ಪರವಾನಗಿಯುಳ್ಳ ಅನುಭವಿ ಪ್ಲಂಬರ್ಗಳಿಂದಲೇ ಯುಜಿಡಿ ಸಂಪರ್ಕ ಕಾಮಗಾರಿಗಳನ್ನು ನಡೆಸಬೇಕೆಂಬ ನಿಯಮ ಪಾಲಿಸದ ಪರಿಣಾಮ ಮ್ಯಾನ್ಹೋಲ್ ಛೇಂಬರ್ಗಳೇ ಹಾನಿಯಾಗುತ್ತಿವೆ. ಮುಡಾ ಎನ್ಓಸಿ ಪಡೆಯದಿದ್ದರೂ ಪಾಲಿಕೆ ಕಡೆಯಿಂದ ಅನುಮತಿ ನೀಡ ಲಾಗುತ್ತಿದೆ. ಇಂತಹ ಖಾತೆಗಳನ್ನು ರದ್ದುಗೊಳಿಸಬೇಕೆಂದು ಕಾರ್ಪೊರೇಟರ್ ಕೆ.ವಿ.ಶ್ರೀಧರ್ ಆಗ್ರಹಿಸಿದರು.
ಅನಧಿಕೃತ ಬಡಾವಣೆಗಳು: ಸದಸ್ಯ ಸಾತ್ವಿಕ್ ಸಂದೇಶ್ ಸ್ವಾಮಿ ಮಾತನಾಡಿ, ನಾನು ಪ್ರತಿನಿಧಿಸುವ 35ನೇ ವಾರ್ಡ್ ಸೇರಿದಂತೆ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಮುಡಾ ಅಥವಾ ಪಾಲಿಕೆಯಿಂದ ಅನುಮತಿ ಪಡೆಯದೆ ಅನಧಿಕೃತ ವಾಗಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ. ಇದು ಅಧಿಕಾರಿಗಳಿಗೆ ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಯಾವುದೇ ಮೂಲಸೌಕರ್ಯ ಕಲ್ಪಿಸದ ರೆವಿನ್ಯೂ ಬಡಾ ವಣೆಗಳು ಮೈಸೂರಲ್ಲಿ ಸಾಕಷ್ಟಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರು ತೊಂದರೆ ಎದುರಿಸಬೇಕಿದೆ ಎಂದು ಹೇಳಿದರು.
ಹಿರಿಯ ಸದಸ್ಯೆ ಶಾಂತಕುಮಾರಿ, ಸಾತ್ವಿಕ್ ಸೇರಿದಂತೆ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕಾರ್ಪೊರೇಟರ್ಗಳು ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ದರು. ನಿಯಮಿತವಾಗಿ ನೀರು ಸರಬರಾಜು ಮಾಡುವು ದಿಲ್ಲ. ಮಧ್ಯರಾತ್ರಿ ಒಂದೆರಡು ಗಂಟೆಗಳ ಕಾಲ ನೀರು ಬರು ತ್ತದೆ. ಮೋಟಾರ್ ಕೆಟ್ಟರೆ ವಾರಗಟ್ಟಲೆ ನೀರಿರುವುದಿಲ್ಲ. ನೀರಿನ ಸಮಸ್ಯೆ ಪರಿಹರಿಸದಿದ್ದರೆ ಸಾರ್ವಜನಿಕರು ಪ್ರತಿಭಟನೆಗಿಳಿಯುವುದು ಖಚಿತ ಎಂದು ಎಚ್ಚರಿಸಿದರು.
ಆರ್ಐಗಳ ಬಗ್ಗೆ ಅಸಮಾಧಾನ: ಕಂದಾಯ ಅಧಿಕಾರಿ ಗಳು ತಮ್ಮ ಕಚೇರಿಯನ್ನು ವ್ಯಾಪಾರದ ಸ್ಥಳ ಮಾಡಿ ಕೊಂಡಿದ್ದಾರೆ. ಮನಸ್ಸೋಇಚ್ಛೆ ಕಂದಾಯ ನಿಗದಿ ಮಾಡು ತ್ತಾರೆ. ಈ ಬಗ್ಗೆ ಕನಿಷ್ಠ ಜ್ಞಾನವೂ ಅವರಿಗಿಲ್ಲ. ಸಾರ್ವ ಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅರ್ಹತೆಯಿಲ್ಲ ದವರನ್ನು ಆರ್ಐಗಳಾಗಿ ನಿಯೋಜಿಸಿದ್ದೀರಿ. ಅರ್ಹ ರನ್ನು ಕಚೇರಿ ಕೆಲಸಕ್ಕೆ ಹಾಕಿದ್ದೀರಿ ಎಂದು ಕಾರ್ಪೊರೇಟರ್ ಶರತ್ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಸತೀಶ್, ಶಾಂತಕುಮಾರಿ ಇನ್ನಿತರ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.
ಪಾರ್ಕಿಂಗ್ ಲಾಟ್ಗೆ 5 ಕೋಟಿ: ಪುರಭವನ ಆವರಣ ದಲ್ಲಿರುವ ಅಪೂರ್ಣ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್ ಕಾಮಗಾರಿ ಮುಂದುವರೆಸಲು ನರ್ಮ್ ಯೋಜನೆಯಡಿ 4.97 ಕೋಟಿ ರೂ. ಒದಗಿಸಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಾರ್ವಜನಿಕರಿಗೆ ಸಕಾಲದಲ್ಲಿ ಅಧಿಕಾರಿ ಲಭ್ಯವಿರುವಂತೆ ಮೇಯರ್ ಸೂಚನೆ
ಮೈಸೂರು, ಜು.8(ಎಸ್ಬಿಡಿ)- ನಿಗ ದಿತ ಸಮಯದಲ್ಲಿ ಅಧಿಕಾರಿಗಳು ಸಾರ್ವ ಜನಿಕರ ಭೇಟಿಗೆ ಲಭ್ಯರಿರಬೇಕೆಂದು ಸೂಚನೆ ನೀಡುವುದಾಗಿ ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕಾರ್ಪೊ ರೇಟರ್ ಮ.ವಿ.ರಾಂಪ್ರಸಾದ್ ಮಾತ ನಾಡಿ, ಪಾಲಿಕೆಯ ಪ್ರಧಾನ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಮಧ್ಯಾ ಹ್ನದ ನಂತರ ಅಧಿಕಾರಿಗಳೇ ಇರುವು ದಿಲ್ಲ. ಯಾವಾಗ ಕೇಳಿದರೂ ಮೀಟಿಂಗ್ಗೆ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ಸಿಬ್ಬಂದಿಯಿಂದ ಬರುತ್ತದೆ. ಸದಸ್ಯರಿಗೇ ಹೀಗಾದರೆ ಸಾಮಾನ್ಯರ ಪಾಡೇನು. ಸಾರ್ವಜನಿಕರ ಭೇಟಿಗೆ ನಿಗದಿಪಡಿ ಸಿರುವ ಮಧ್ಯಾಹ್ನ 3ರಿಂದ 5ರವರೆಗೆ ಅಧಿಕಾರಿಗಳು ಕಡ್ಡಾಯವಾಗಿ ಕಚೇರಿ ಯಲ್ಲೇ ಇರಬೇಕೆಂದು ಆದೇಶಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಮೇಯರ್ ಅವರು, 15 ದಿನಗಳ ಹಿಂದೆಯೇ ಈ ಸಂಬಂಧ ಆಯುಕ್ತ ರಿಗೆ ಸೂಚನೆ ನೀಡಲಾಗಿದ್ದು, ಈಗ ಮತ್ತೊಮ್ಮೆ ಸೂಚಿಸುತ್ತೇನೆಂದು ತಿಳಿಸಿದರು.
ಲಾರಿ ವ್ಯವಸ್ಥೆಗೆ ನಿರ್ಧಾರ: ಕಸ ವಿಲೇ ವಾರಿಗೆ ವಾರ್ಡ್ಗೆ ಒಂದರಂತೆ ಲಾರಿ ವ್ಯವಸ್ಥೆ ಮಾಡಬೇಕೆಂದು ಮಾಜಿ ಮೇಯರ್ಗಳಾದ ಆರಿಫ್ ಹುಸೇನ್ ಹಾಗೂ ಅಯೂಬ್ಖಾನ್ ಆಗ್ರಹಿಸಿ ದರು. ಅನೇಕ ಬಡಾವಣೆಗಳನ್ನು ಹಸ್ತಾಂ ತರಿಸಿಕೊಂಡಿದ್ದು, ಪಾಲಿಕೆಯ ವ್ಯಾಪ್ತಿ ವಿಸ್ತರಿಸಿದೆ. ಹಾಗಾಗಿ ವಾರ್ಡ್ಗೆ ಒಂದ ರಂತೆ ಲಾರಿ ವ್ಯವಸ್ಥೆ ಮಾಡಬೇಕು. ಕಾರ್ಮಿಕರ ಕೊರತೆ ಇರುವುದರಿಂದ ಟೆಂಡರ್ ನೀಡುವಾಗ ಒಂದು ಲಾರಿಯ ಜೊತೆಗೆ ನಾಲ್ಕೈದು ಕಾರ್ಮಿಕರನ್ನೂ ಒದಗಿಸಬೇಕೆಂಬ ನಿಯಮವಿರಬೇ ಕೆಂದು ಒತ್ತಾಯಿಸಿದರು. ಇದಕ್ಕೆ ಮೇಯರ್ ಸಮ್ಮತಿಸಿದರು.