ಮೈಸೂರು,ಜು.11(ಎಂಕೆ)- ಐಎಎಸ್, ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಜ್ಞಾನ ಮತ್ತು ಕಠಿಣ ಪ್ರಯತ್ನ ಬಹಳ ಮುಖ್ಯ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ(ಎಸ್ಪಿ) ಸಿ.ಬಿ.ರಿಷ್ಯಂತ್ ಕಿವಿಮಾತು ಹೇಳಿದರು.
ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂದುಕೊಂಡಿದ್ದನ್ನು ಸಾಧಿಸುತ್ತೇನೆ ಎನ್ನುವ ಬಯಕೆ ನಿಮ್ಮಲ್ಲಿ ಮೊದಲು ಮೂಡಬೇಕು. ಅದಕ್ಕಾಗಿ ಬೇಕಾದ ಜ್ಞಾನ ಸಂಪಾದಿಸಲು ನಿರಂತರ ಓದಿನಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು.
ನಿರಂತರ ಓದಿನ ಜೊತೆಗೆ ಎಷ್ಟು ವಿಷಯಗಳನ್ನು ಅರ್ಥಮಾಡಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿ ಉತ್ತಮ ಸಾಧನೆಗೆ ಕಠಿಣ ಪ್ರಯತ್ನ, ಸಮಯ ಪಾಲನೆ ಅತ್ಯವಶ್ಯ. ಯಾವುದೇ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಬೇಕು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಪ್ರಚಲಿತ ಘಟನೆಗಳಿಗೆ ಹೆಚ್ಚು ಒತ್ತು ನೀಡಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಬೇಕು. ಇದು ಸಿದ್ಧತೆಗೆ ಸಹಕಾರಿ ಯಾಗುತ್ತದೆ ಎಂದು ತಿಳಿಸಿದರು. ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಡಾ.ಎನ್.ಎನ್. ಪ್ರಹ್ಲಾದ್, ಪೆÇ್ರ ಕೃ.ಪ.ಗಣೇಶ, ಡಾ.ಎಸ್.ಬಿ.ಎಂ.ಪ್ರಸನ್ನ, ಜೈನಹಳ್ಳಿ ಸತ್ಯನಾರಾಯಣ ಗೌಡ, ಹೆಚ್.ಬಾಲಕೃಷ್ಣ, ರಾ.ರಾಮಕೃಷ್ಣ ಉಪಸ್ಥಿತರಿದ್ದರು.