ಕಚೇರಿಗೆ ತಡವಾಗಿ ಬರುವ ಸಿಬ್ಬಂದಿ ವಿರುದ್ಧ ಡಿಸಿ ಗರಂ
ಹಾಸನ

ಕಚೇರಿಗೆ ತಡವಾಗಿ ಬರುವ ಸಿಬ್ಬಂದಿ ವಿರುದ್ಧ ಡಿಸಿ ಗರಂ

July 15, 2019

ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳಕ್ಕೆ ಕತ್ತರಿ: ಅಕ್ರಂ ಪಾಷ ಎಚ್ಚರಿಕೆ
ಹಾಸನ, ಜು.14- ಜಿಲ್ಲೆಯ ಪ್ರಧಾನ ಆಡಳಿತ ಕೇಂದ್ರವಾದ ಜಿಲ್ಲಾಧಿಕಾರಿ ಕಚೇರಿ ಯಲ್ಲೇ ಅಧಿಕಾರಿ ಬಹಳ ತಡವಾಗಿ ಕಚೇರಿಗೆ ಬರುವುದು ಈ ವಾರ ಜಗ ಜ್ಜಾಹೀರಾಯಿತು. ಇದು ಖುದ್ದು ಜಿಲ್ಲಾ ಧಿಕಾರಿಗಳೇ ದಿಗ್ಬ್ರಮೆಗೊಳಗಾಗುವಂತೆ ಮಾಡಿತು. ಕೆಲವು ವಿಭಾಗಗಳ ಮುಖ್ಯ ಸ್ಥರೇ ಸಮಯಕ್ಕೆ ಹಾಜರಾಗುವುದನ್ನು ಕಂಡು ಜಿಲ್ಲಾಧಿಕಾರಿ ಅಕ್ರಂ ಪಾಷ ಸಿಟ್ಟಾದರು.

ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳು ಎಂದಿನಂತೆ ಶುಕ್ರವಾರ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜ ರಾದರು. ಮೊದಲು ವಿವಿಧ ವಿಭಾಗಕ್ಕೂ ತೆರಳಿದಾಗ ಖಾಲಿ ಚೇರುಗಳೇ ಕಂಡು ಬಂದವು. 10 ಗಂಟೆ ದಾಟಿದ್ದರೂ ಕೆಲ ಅಧಿಕಾರಿಗಳು ಹಾಜರಾಗಿರ ಲಿಲ್ಲ. ಇದನ್ನು ನೋಡಿ ಸಿಟ್ಟಾದ ಡಿಸಿ ಇನ್ನು ಮುಂದೆ ಬೆಳಿಗ್ಗೆ 10 ಗಂಟೆ ಒಳಗೆ ಎಲ್ಲಾ ಇಲಾಖೆ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಖಡಕ್ ವಾರ್ನಿಂಗ್ ಕೊಟ್ಟರು. ಯಾರು ಸರಿ ಯಾದ ಸಮಯಕ್ಕೆ ಕೆಲಸಕ್ಕೆ ಬರುವುದಿಲ್ಲ ಅವರಿಗೆ ಹಾಜರಿ ಕೊಡಬಾರದು, ಕೆಲಸಕ್ಕೆ ಬರಲು ಇಷ್ಟವಿರದವರು ಹೊರಟು ಹೋಗಿ, ಕೆಲಸ ಇಲ್ಲದೇ ಅದೆಷ್ಟೋ ನಿರುದ್ಯೋಗಿಗಳು ಇದ್ದಾರೆ. ಅವರಿಗಾದರೂ ನೌಕರಿ ಸಿಗುತ್ತದೆ ಎಂದು ಬೇಸರದಿಂದಲೇ ಹೇಳಿದರು.

ಕಚೇರಿಗೆ ತಡವಾಗಿ ಬಂದವರಿಗೆ ನೋಟಿಸ್ ನೀಡಿ ಮತ್ತು ಒಂದು ದಿನದ ಸಂಬಳ ಕಡಿತ ಮಾಡಿ ಎಂದು ಸೂಚನೆ ನೀಡಿದರು. ಸಾರ್ವಜನಿಕರು ಸ್ಪಂದನ ಕೇಂದ್ರ, ಆಧಾರ್ ಕೇಂದ್ರದಲ್ಲಿ ಕಾಯು ತ್ತಿದ್ದಾರೆ. ಅವರಿಗೆ ತೊಂದರೆ ಆಗದಂತೆ ನಿಗಾವಹಿಸಿ ಎಂದು ಸೂಚಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳು ಇಡೀ ಕಟ್ಟಡದ ಸ್ವಚ್ಛತೆ ಪರಿಶೀಲಿಸಿದರು. ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಿಬ್ಬಂದಿಗೆ ಆಜ್ಞಾಪಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ವಿವಿಧ ಕೆಲಸ ಕ್ಕಾಗಿ ನಿತ್ಯವೂ ನೂರಾರು ಜನರು ಬರು ತ್ತಾರೆ. ಅವರನ್ನು ವೃಥಾ ಕಾಯಿಸದೇ ಕೆಲಸ ಮಾಡಿಕೊಡಲು ಸಿದ್ಧರಿರಬೇಕು. ಹಾಗಾಗಿ ಕಚೇರಿ ಕೆಲಸದಲ್ಲಿ ಶಿಸ್ತು ಕಾಪಾಡಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಹೇಳಿದರು. ಇನ್ನು ಮುಂದೆ ಎಲ್ಲ ಇಲಾಖೆ ಅಧಿಕಾರಿಗಳ ಹಾಜರಿ ಬಗ್ಗೆ ನನಗೆ ಸಮಯ ಸಿಕ್ಕಿದಾಗೆಲ್ಲಾ ಭೇಟಿ ನೀಡಿ ಪರಿಶೀಲಿಸುವೆ ಎಂದರು.

Translate »