ಎಲ್ಲಾ ಅಧಿಕಾರ ಅನುಭವಿಸಿದರೂ ದೇವೇಗೌಡರ ಕುಟುಂಬಕ್ಕೆ ಆಸೆ ಬಿಟ್ಟಿಲ್ಲ
ಮೈಸೂರು

ಎಲ್ಲಾ ಅಧಿಕಾರ ಅನುಭವಿಸಿದರೂ ದೇವೇಗೌಡರ ಕುಟುಂಬಕ್ಕೆ ಆಸೆ ಬಿಟ್ಟಿಲ್ಲ

July 15, 2019

ಬೆಂಗಳೂರು,ಜು.14- ಹೆಚ್.ಡಿ.ದೇವೇಗೌಡ ಅವರ ಕುಟುಂಬ ಸದ ಸ್ಯರೇ ರಾಜಕೀಯದಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದು, ಪ್ರಧಾನಿ, ಮುಖ್ಯಮಂತ್ರಿ, ಸಚಿವ, ಸಂಸದ, ಶಾಸಕ ಸ್ಥಾನ ಸೇರಿದಂತೆ ರಾಜಕಾರಣದ ಎಲ್ಲಾ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರೂ ಅವರಿಗೆ ಇನ್ನೂ ಆಸೆ ಬಿಟ್ಟಿಲ್ಲ ಎಂದು ಜೆಡಿಎಸ್ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ರಾಜ್ಯದಲ್ಲಿ ಈಗ ಸಾಂವಿಧಾನಿಕ ಬಿಕ್ಕಟ್ಟು ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ದೇವೇಗೌಡರು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ. ನಾವು ಅತೃಪ್ತ ಶಾಸಕರಲ್ಲ. ರಾಜ್ಯದ ಜನತೆಗೆ ಮೈತ್ರಿ ಸರ್ಕಾರದ ಮೇಲಿರುವ ಅತೃಪ್ತ ಅಸಮಾ ಧಾನದ ಪ್ರತಿನಿಧಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದರು.

Translate »