ಮೈತ್ರಿ ಸರ್ಕಾರ ಬೀಳಲಿಲ್ಲ, ನೀವು ಬೀಳಿಸಿದ್ದೀರಿ: ಸಿದ್ದು
ಮೈಸೂರು

ಮೈತ್ರಿ ಸರ್ಕಾರ ಬೀಳಲಿಲ್ಲ, ನೀವು ಬೀಳಿಸಿದ್ದೀರಿ: ಸಿದ್ದು

July 30, 2019

ಬೆಂಗಳೂರು, ಜು. 29- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿತ್ತು. ಹೀಗಾಗಿ ಅದು ಅಧಿಕಾರದಲ್ಲಿನ ಲೋಪದಿಂದ ಪದ ಚ್ಯುತಗೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ಹೇಳಿದರು.

ಆ ಸರ್ಕಾರವನ್ನು ನೀವು ಬೀಳಿಸಿದ್ದೀರಿ. ಅದಕ್ಕಾಗಿ ಯಾವ ಮಾರ್ಗವನ್ನು ಹಿಡಿದಿರಿ ಎಂದು ನಾನು ಇವತ್ತು ಹೇಳಲು ಹೋಗುವುದಿಲ್ಲ. ಬದಲಿಗೆ ಮುಖ್ಯಮಂತ್ರಿಯಾಗಿರುವ ನಿಮಗೆ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ ಎಂದರು. ನೀವು ಒಮ್ಮೆಯು ಜನಾದೇಶ ಪಡೆದು ಮುಖ್ಯಮಂತ್ರಿಯಾಗಲಿಲ್ಲ. ಮೊದಲು ಜೆಡಿಎಸ್ ಬೆಂಬಲ ಪಡೆದು, ನಂತರ ಪಕ್ಷೇತರ ಬೆಂಬಲದಿಂದ ಮುಖ್ಯ ಮಂತ್ರಿಯಾದಿರಿ. ಇಂದು ಮೈತ್ರಿ ಪಕ್ಷದ ಶಾಸಕರ ರಾಜೀನಾಮೆ ಕೊಡಿಸಿ, ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದೀರಿ. ಜನರ ಆಶೀರ್ವಾದದಿಂದ ದೊರಕಿರುವ ಅಧಿಕಾರವಲ್ಲ. ಅತೃಪ್ತರು ನೀಡಿರುವ ಬಳು ವಳಿಯಿಂದ ಮತ್ತೆ ಮುಖ್ಯಮಂತ್ರಿ ಗಾದಿಗೇರಿದ್ದೀರಿ. ಈ ಗಾದಿ ಶಾಶ್ವತವಲ್ಲ. ಅತೃಪ್ತರು ಈಗ ತೃಪ್ತರಾಗಿದ್ದಾರೆ. ಅವರು ನಿಮ್ಮನ್ನು ಯಾವಾಗ ಕೆಳಗಿಳಿಸುತ್ತಾರೋ ನೋಡೋಣ ಎಂದರು.

ಸಂವಿಧಾನಗಾಳಿಗೆ ತೂರಿ ಅಧಿಕಾರ ಪಡೆದುಕೊಂಡಿದ್ದೀರಿ. ವಿಧಾನಸಭೆ ಯಲ್ಲಿ 221 ಸದಸ್ಯರ ಬಲವಿದೆ. 112 ಶಾಸಕರು ಇರಬೇಕು. ಆದರೆ ನಿಮ್ಮ ಬಳಿ ಇರುವುದು 105 ಅದನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಯಾಗಿದ್ದೀರಿ. ನಿಮ್ಮ ಈ ನಡವಳಿಕೆಗೆ ಮತ್ತು ಸಂವಿಧಾನದ ವಿರುದ್ಧವಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ನಿಮ್ಮ ವಿಶ್ವಾಸಮತವನ್ನು ತೀವ್ರವಾಗಿ ವಿರೋಧಿಸುತ್ತೇನೆ. ನೈತಿಕತೆ, ಅನೈತಿಕತೆ, ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ, ಅಧಿಕಾರ ಚುಕ್ಕಾಣಿ ಹಿಡಿದಿದ್ದೀರಿ ಎಂದು ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

Translate »