ಇಂಗ್ಲಿಷ್ ಮಾಧ್ಯಮ ಮಕ್ಕಳ ಸೃಜನಾತ್ಮಕತೆಯನ್ನು ಕೊಲ್ಲುತ್ತದೆ
ಮೈಸೂರು

ಇಂಗ್ಲಿಷ್ ಮಾಧ್ಯಮ ಮಕ್ಕಳ ಸೃಜನಾತ್ಮಕತೆಯನ್ನು ಕೊಲ್ಲುತ್ತದೆ

August 2, 2019

ಮೈಸೂರು,ಆ.1(ಎಂಟಿವೈ)-ಮಕ್ಕಳಲ್ಲಿ ರುವ ಸೃಜನಾತ್ಮಕತೆಯನ್ನು ಕೊಂದು ಹಾಕುವ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ತ್ಯಜಿಸಿ, ಸುಲಭವಾಗಿ ಅರ್ಥವಾಗುವ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಮಾತ್ರ ಪ್ರಗತಿ ಸಾಧಿಸಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಮಾನಸಗಂಗೋತ್ರಿಯಲ್ಲಿ ರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಸಭಾಂ ಗಣದಲ್ಲಿ ನಡೆದ ಸಂಸ್ಥೆಯ 57ನೇ ಸಂಸ್ಥಾ ಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಪ್ರಸ್ತುತ ಚಾಲ್ತಿ ಯಲ್ಲಿರುವ ಆಂಗ್ಲ ಮಾಧ್ಯಮದ ಶಿಕ್ಷಣ ಬಾಯಿಪಾಠ ಮಾಡಿ ಒಪ್ಪಿಸುವ ಪದ್ಧತಿ ಯಾಗಿದೆ. ಇದರಿಂದ ವಿದ್ಯಾರ್ಥಿಗಳು ಏನನ್ನು ಓದುತ್ತಾರೋ ಅಷ್ಟನ್ನೇ ಬಾಯಿಪಾಠ ಮಾಡಿಕೊಂಡು ಹೇಳುತ್ತಾರೆ. ಇದರಿಂದ ವಿಷಯವನ್ನು ಸಮಗ್ರವಾಗಿ ಅರ್ಥ ಮಾಡಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ವಿಷಯ ಮನಮುಟ್ಟುತ್ತದೆ. ಇದರಿಂದ ಸೃಜನಾತ್ಮಕತೆಗೆ ಅವಕಾಶ ದೊರೆಯುವುದಲ್ಲದೆ ಪ್ರಗತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.

ಜಪಾನ್, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆಂಗ್ಲ ಭಾಷೆಯನ್ನು ಇಂದಿಗೂ ಬಳಸುತ್ತಿಲ್ಲ. ಅವರ ಭಾಷೆಯಲ್ಲಿಯೇ ಶಿಕ್ಷಣ ಪಡೆದು ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ ವನ್ನು ಮಾತೃಭಾಷೆಯಲ್ಲಿಯೇ ಬೋಧಿ ಸಿದರೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಯಾಗಿ ಅರ್ಥವಾಗುತ್ತದೆ. ಈ ಹಿಂದೆ ಕನ್ನ ಡದ ಹೆಸರಾಂತ ಕವಿಗಳಾದ ಬಿಎಂಶ್ರೀ ಅವರು ಸ್ಥಳೀಯ ವಿಷಯಕ್ಕೆ ಸಂಬಂಧಿಸಿ ದಂತೆ ಕನ್ನಡದಲ್ಲಿ ಕವಿತೆ, ಕಾದಂಬರಿ ರಚಿಸಿ ಗಮನ ಸೆಳೆದರು. ನಂತರದ ದಿನಗಳಲ್ಲಿ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರ ಅವರು ನಮ್ಮ ರಾಜ್ಯದ ಕಾಡು, ಪರಿಸರವನ್ನು ಕನ್ನಡದಲ್ಲಿ ವರ್ಣಿಸಲಾರಂಭಿಸಿದರು. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ವಿಜೃಂಭಿಸತೊಡಗಿತು ಎಂದರು.

ಶಿಕ್ಷಕರು ಮನಸ್ಸು ಮಾಡಿದರೆ ವಿಜ್ಞಾನ ವನ್ನೂ ಕನ್ನಡದಲ್ಲಿ ಬೋಧಿಸಬಹುದಾ ಗಿದೆ. ಆದರೆ ಶಿಕ್ಷಕರೂ ಪುಸ್ತಕ ನೋಡಿ, ಬಾಯಿ ಪಾಠ ಮಾಡಿಕೊಳ್ಳುವುದರಿಂದ ಕನ್ನಡ ದಲ್ಲಿ ಬೋಧನೆ ಮಾಡಲು ಸಿದ್ಧರಿಲ್ಲ. ಇಂಗ್ಲಿಷ್‍ನಲ್ಲಿ ಬೋಧನೆ ಮಾಡುವುದರಿಂದ ನಾವು ಎಷ್ಟನ್ನು ಹೇಳಿಕೊಡುತ್ತೇವೋ, ವಿದ್ಯಾರ್ಥಿಗಳು ಅಷ್ಟನ್ನೇ ಕಲಿಯುತ್ತಾರೆ. ಕನ್ನಡ ದಲ್ಲಿ ಹೇಳಿಕೊಟ್ಟರೆ ತಾವು ಕಲಿತದ್ದನ್ನು ಸೃಜನಾತ್ಮಕವಾಗಿ ವಿವರಿಸುತ್ತಾರೆ. ತೆಂಗಿನ ಮರಕ್ಕೆ ಬರುವ ನುಸಿ ರೋಗಕ್ಕೆ ಇಂದಿಗೂ ಔಷಧ ಕಂಡು ಹಿಡಿದಿಲ್ಲ. ಯಾಕೆಂದರೆ ನುಸಿ ರೋಗ ಕುರಿತಂತೆ ಯಾವುದೇ ವಿಚಾರ ಪಠ್ಯ ಪುಸ್ತಕದಲ್ಲಿ ಇಲ್ಲದಿರುವುದೇ ಇಂದಿಗೂ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಮಾತನಾಡಿ, ಮೈಸೂ ರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಎಲ್ಲೆಡೆ ಪ್ರಸಿದ್ಧಿ ಪಡೆದಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮನೆ ಮಾತಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಶಿಕ್ಷಕರ ಕೊರತೆ ಕಂಡು ಬರುತ್ತಿದೆ. ಶಿಕ್ಷಕರನ್ನು ರೂಪಿಸಬೇಕಾದ ಶಿಕ್ಷಣ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಕರನ್ನು ರೂಪಿಸಿ, ಕೊಡುಗೆಯಾಗಿ ನೀಡು ವತ್ತ ಗಮನ ಹರಿಸಬೇಕು. ಇದರಿಂದ ಉತ್ತಮ ವಿದ್ಯಾರ್ಥಿಗಳು ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಬಹುದು ಎಂದು ಅಭಿ ಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್, ಡೀನ್‍ಗಳಾದ ಪ್ರೊ. ಸಿ.ಜಿ.ವೆಂಕಟೇಶ್ ಮೂರ್ತಿ ಹಾಗೂ ಪ್ರೊ.ಜಿ.ವಿ.ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »