ಮೈಸೂರು,ಆ.3(ಆರ್ಕೆ)- ಮನೆ ಯಲ್ಲೇ ಕುಳಿತು ಆನ್ಲೈನ್ ಮೂಲಕ ಮಾಡುವ ಉದ್ಯೋಗ ಕೊಡುವುದಾಗಿ ನಂಬಿಸಿ ಸಾವಿರ ಮಂದಿಯಿಂದ ಲಕ್ಷಾಂ ತರ ರೂ. ಹಣ ವಸೂಲಿ ಮಾಡಿ ವಂಚಿ ಸಿರುವ ವ್ಯಕ್ತಿಯನ್ನು ವಿಜಯನಗರ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ತಮಿಳುನಾಡು ಮೂಲದವನಾದ ಮೈಸೂರಿನ ವಿಜಯನಗರ 3ನೇ ಹಂತದ ನಿವಾಸಿ ಲೇಟ್ ಕಣ್ಣಪ್ಪನ್ ಅವರ ಮಗ ಕಾರ್ತಿಕ್ ಅಲಿಯಾಸ್ ಶರವಣ (29) ಬಂಧಿತ ನಯವಂಚಕ. ಮನೆ ಯಲ್ಲೇ ಕುಳಿತು ಲ್ಯಾಪ್ಟಾಪ್ ಮೂಲಕ ಆನ್ಲೈನ್ನಲ್ಲಿ ಕೆಲಸ ಮಾಡಿ ತಿಂಗಳಿಗೆ 15,000 ರೂ. ಸಂಪಾದಿಸಬಹುದೆಂದು ಹೇಳಿ ತಮ್ಮಿಂದ ತಲಾ 1,200 ರೂ. ಪಡೆದು ವಂಚಿಸಿದ್ದಾನೆ ಎಂದು ಮೈಸೂ ರಿನ 12 ಮಂದಿ ದೂರು ನೀಡಿದ ಹಿನ್ನೆಲೆಯಲ್ಲಿ ಸೆಕ್ಷನ್ 420 ರೀತ್ಯಾ ಕಾರ್ತಿಕ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿಜಯನಗರ ಠಾಣೆ ಪೊಲೀಸರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಠಾಣೆಗೆ ಕರೆತಂದು ವಿಚಾರಣೆಗೊಳ ಪಡಿಸಿದಾಗ ನಕಲಿ ಸಂಸ್ಥೆಯೊಂದರ ಹೆಸರಿನಲ್ಲಿ ಕಾರ್ತಿಕ್ ನಿರುದ್ಯೋಗಿ ಯುವಕ-ಯುವತಿಯರಿಗೆ ಕೆಲಸ ಕೊಡು ವುದಾಗಿ ನಂಬಿಸಿ ಸುಮಾರು ಸಾವಿರ ಮಂದಿಯಿಂದ ತಲಾ 1,200 ರೂ.ನಂತೆ ಒಟ್ಟು 35 ಲಕ್ಷ ರೂ.ವರೆಗೆ ಹಣ ವಸೂಲು ಮಾಡಿರುವ ಬಗ್ಗೆ ಸಂಶಯ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಪಡೆದ ನಂತರ ಆತ ಯುವಕ ರನ್ನು ಹುಣಸೂರು ರಸ್ತೆಯ ಐಷಾರಾಮಿ ಹೋಟೆಲೊಂದರಲ್ಲಿ ಸಭೆ ಕರೆದು ತರ ಬೇತಿ ನೀಡುವಂತೆ ನಾಟಕವಾಡಿ ಇತರ ರನ್ನು ಕರೆತಂದು ಹಣ ಕಟ್ಟಿಸುವಂತೆ ಪ್ರೇರೇಪಿಸುತ್ತಿದ್ದ ಎಂಬುದೂ ವಿಚಾರಣೆ ಯಿಂದ ತಿಳಿದು ಬಂದಿದೆ. ಕಳೆದ 8 ತಿಂಗಳ ಹಿಂದೆ ಮದುವೆಯಾಗಿದ್ದ ಕಾರ್ತಿಕ್ ವಿಜಯನಗರ 3ನೇ ಹಂತದಲ್ಲಿ ವಾಸ ವಾಗಿದ್ದ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಹೆಚ್ಚಿನ ವಿಚಾರಣೆಗಾಗಿ 6 ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಮೈಸೂರಿನ ವಿಜಯನಗರ, ಜೆ.ಪಿ. ನಗರ, ಉದಯಗಿರಿ, ರಾಜೀವನಗರ, ಹೆಬ್ಬಾಳು, ವಿದ್ಯಾರಣ್ಯಪುರಂನ ನೂರಾರು ಯುವಕರು ಕಾರ್ತಿಕ್ನ ಮಾತಿಗೆ ಮರು ಳಾಗಿ ತಲಾ 1,200 ರೂ.ನಂತೆ ಲಕ್ಷಾಂ ತರ ರೂ. ಹಣ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಹಣ ಕಟ್ಟಿದ ನಂತರ ಯಾವುದೇ ಕೆಲಸವನ್ನು ನೀಡದೆ ಕಳೆದ ಎರಡು ತಿಂಗಳಿಂದ ಆತ ತಲೆಮರೆಸಿಕೊಂಡಿದ್ದ ಎಂದು ನೊಂದವರು ದೂರಿನಲ್ಲಿ ಆರೋಪಿಸಿ ದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ವಂಚನೆಗೊಳಗಾದ ಹಲವರು ದೂರು ನೀಡಲು ಮುಂದಾಗುತ್ತಿದ್ದಾರೆ ಎಂದು ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಸುರೇಶ್ಕುಮಾರ್ ತಿಳಿಸಿದ್ದಾರೆ.