ಅಂಚೆ ಇಲಾಖೆ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯುವುದು ಅನುಮಾನ
ಮೈಸೂರು

ಅಂಚೆ ಇಲಾಖೆ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯುವುದು ಅನುಮಾನ

August 5, 2019

ಮೈಸೂರು,ಆ.4(ಪಿಎಂ)-ಕಾರ್ಮಿಕ ವರ್ಗದ ಬೆನ್ನು ಮೂಳೆ ಮುರಿದು ಬಂಡ ವಾಳಶಾಹಿಗಳಿಗೆ ಅನುಕೂಲ ಮಾಡಿ ಕೊಡುವಂತಹ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದ್ದು, ಅಂಚೆ ಇಲಾಖೆ ಸರ್ಕಾರಿ ಸ್ವಾಮ್ಯದಲ್ಲಿ ಉಳಿಯು ವುದು ಅನುಮಾನ ಎಂದು ಎಐಪಿಯು ಪೋಸ್ಟ್‍ಮನ್ ಮತ್ತು ಎಂಟಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಸೀತಾಲಕ್ಷ್ಮಿ ಹೇಳಿದರು.

ಮೈಸೂರಿನ ಸರಸ್ವತಿಪುರಂನ ಪ್ರಾದೇ ಶಿಕ ದೂರಸಂಪರ್ಕ ತರಬೇತಿ ಕೇಂದ್ರದ (ಆರ್‍ಟಿಟಿಸಿ) ಸಭಾಂಗಣದಲ್ಲಿ ಭಾನು ವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಅಂಚೆ ನೌಕರರ ಗ್ರೂಪ್ ಸಿ, ಪೋಸ್ಟ್ ಮನ್ ಮತ್ತು ಎಂಟಿಎಸ್ ಹಾಗೂ ಗ್ರಾಮೀಣ ಅಂಚೆ ನೌಕರರ ಸಂಘಟನೆ ಗಳ ಮೈಸೂರು ವಿಭಾಗದ 38ನೇ ಜಂಟಿ ದ್ವೈವಾರ್ಷಿಕ ಅಧಿವೇಶನದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ನೀತಿಗಳು ದುಡಿ ಯುವ ವರ್ಗದ ಮೇಲೆ ಪ್ರಹಾರ ನಡೆಸು ತ್ತಿವೆ. ಕಳೆದ 15 ದಿನಗಳಲ್ಲಿ ಹಲವು ಮಸೂದೆಗಳಿಗೆ ಸಂಸತ್‍ನಲ್ಲಿ ಅನುಮೋ ದನೆ ನೀಡಿದ್ದು, ಇವುಗಳು ಕಾರ್ಮಿಕರ ಹಾಗೂ ಜನಸಾಮಾನ್ಯರ ಪರವಾಗಿ ಇಲ್ಲ ವಾಗಿದ್ದರೂ ರಾಜ್ಯಸಭೆಯಲ್ಲೂ ಅಂಗೀ ಕರಿಸಲಾಗಿದೆ. ಇದರಿಂದ ನಾವು ನಿಂತ ನೆಲ ಅಲುಗಾಡುವಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ವಿವೇಕ ಕೆಲಸ ಮಾಡುವ ಅಗತ್ಯವಿದ್ದು, ಸಂಘಟನೆಗೆ ಸನ್ನದ್ಧರಾಗಬೇಕು ಎಂದು ತಿಳಿಸಿದರು.

ಬ್ರಿಟಿಷರ ಕಾಲದಲ್ಲೇ ಆರಂಭವಾಗಿ 200 ವರ್ಷಗಳ ಇತಿಹಾಸ ಹೊಂದಿರುವ 41 ಆರ್ಡನೆನ್ಸ್ ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ತೆರೆಮರೆಗೆ ಸರಿಸಲು ಮುಂದಾ ಗಿದೆ. ಇದರಿಂದ 82 ಸಾವಿರ ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. 160 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿ ರುವ ಅಂಚೆ ಇಲಾಖೆ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕೇಂದ್ರದ ಹಣಕಾಸು ಮಸೂದೆ ಆಘಾತಕಾರಿಯಾಗಿದ್ದು, ಇದರ ಪ್ರಕಾರ 10 ಲಕ್ಷ ರೂ. ಬ್ಯಾಂಕಿನಲ್ಲಿ ಠೇವಣಿ ಇಟ್ಟಿ ದ್ದರೆ, 1 ಲಕ್ಷ ರೂ.ಗೆ ಮಾತ್ರ ಬ್ಯಾಂಕ್ ಖಾತ್ರಿ ನೀಡುತ್ತದೆ. ಇನ್ನು ವೇತನ ಮಸೂದೆ ಪ್ರಕಾರ ಕಾರ್ಮಿಕನ ದಿನದ ಕನಿಷ್ಠ ಕೂಲಿ ಕೇವಲ 178 ರೂ. ಆಗಿದೆ. ಇಂದಿನ ಬೆಲೆ ಏರಿಕೆಯ ಭರಾಟೆಯಲ್ಲಿ ಇದರಲ್ಲಿ ಜೀವನ ಮಾಡಲಾಗುವುದೇ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಕೆಲಸ ಮಾಡುವವರಿಗೆ ಈ ಹಿಂದೆ `ಉದ್ಯೋಗಿ’ ಎಂದು ಮಾತ್ರ ಉಲ್ಲೇಖಿಸ ಲಾಗುತ್ತಿತ್ತು. ಇದೀಗ 16 ಹೆಸರಿನಲ್ಲಿ ಕರೆಯಲಾಗುತ್ತಿದ್ದು, ಹೊಸ ಪದಗಳು ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಸಂಘಟಿತ ರಾಗದಿದ್ದರೆ ದಮನಕ್ಕೆ ಒಳಪಡಬೇಕಾಗು ತ್ತದೆ ಎಂದು ಎಚ್ಚರಿಸಿದರು.

ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎನ್.ಪ್ರಕಾಶ್ ಅಧಿ ವೇಶನ ಉದ್ಘಾಟಿಸಿದರು. ಎಐಪಿಇಯು ಗ್ರೂಪ್ ಸಿ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಕೆ.ವಿ.ಸತೀಶ್, ಪೋಸ್ಟ್‍ಮನ್ ಮತ್ತು ಎಂಟಿಎಸ್ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಕೆ.ಶ್ರೀನಿವಾಸ್, ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಎಂ.ಮಂಜು ನಾಥ್, ಸಂಘಟನೆ ಮುಖಂಡರಾದ ಹೆಚ್.ಆರ್. ಈಶ್ವರಪ್ಪ, ದೇವಪಾಲ್, ಮುತ್ತುಕುಮಾರ್, ಹೆಚ್.ಸುಂದರಯ್ಯ ಮತ್ತಿತರರು ಹಾಜರಿದ್ದರು.

Translate »