ಯುವ ಸಮೂಹ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು
ಮೈಸೂರು

ಯುವ ಸಮೂಹ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು

August 9, 2019

ಮೈಸೂರು, ಆ.8- ನಗರದ ದಟ್ಟಗಳ್ಳಿ ಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್‍ನ ರೋವರ್ ಹಾಗೂ ರೇಂಜರ್ ಘಟಕದ ಉದ್ಘಾಟನಾ ಸಮಾ ರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾ ಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಭಾರತ್ ಸ್ಕೌಟ್ ಮತ್ತು ಗೈಡ್ಸ್‍ನ ಜಿಲ್ಲಾ ಸಂಘಟಕರಾದ ಕೆ.ರಾಮಪ್ರಸಾದ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವ ಜನರು ಸ್ವತಂತ್ರಮತ್ತು ಸ್ವಾವಲಂಬಿಯಾಗಿ ತಮ್ಮ ಬದುಕು ಕಟ್ಟಿಕೊಳ್ಳಲು ಹಾಗೂ ನಾಯ ಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ರೋವರ್ ಹಾಗೂ ರೇಂಜರ್‍ನ ಚಟುವಟಿಕೆ ಗಳು ಸಹಕಾರಿಯಾಗುತ್ತದೆ ಎಂದರು. ಯುವಜನರು ಸಮಾಜದಲ್ಲಿ ಶಿಸ್ತಿನಿಂದ ಬದುಕುವುದರೊಂದಿಗೆ ನಮ್ಮ ಸಮಾಜಕ್ಕೆ ಏನಾದರೂ ಒಳ್ಳೆಯ ಸೇವೆ ಸಲ್ಲಿಸಬೇಕು ಎಂಬ ಸೇವಾ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮೈಸೂರಿನ ಭಾರತ್ ಸ್ಕೌಟ್ ಮತ್ತು ಗೈಡ್ಸ್‍ನ ಜಿಲ್ಲಾ ಪ್ರಧಾನ ಆಯುಕ್ತ ಎಂ. ಎನ್.ಸುರೇಶ್‍ಕುಮಾರ್ ಮಾತನಾಡಿ, ಯುವಜನರು ಈ ವಯಸ್ಸಿನಲ್ಲಿ ಆಕರ್ಷ ಣೆಗೆ ಒಳಗಾಗುವ ಸಂಭವಗಳು ಹೆಚ್ಚಿರು ತ್ತವೆ. ಆದ್ದರಿಂದ ನೀವು ಈ ವಯಸ್ಸಿನಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ವಿವೇಚನೆ ಮೈಗೂಡಿಸಿಕೊಳ್ಳಬೇಕು ಎಂದರು. ಈ ವೇಳೆ ವಿದ್ಯಾರ್ಥಿ ರೋವರ್ ನಾಯಕನಾಗಿ ಚಂದ್ರಚೂಡ, ರೇಂಜರ್ ನಾಯಕಿಯಾಗಿ ಟಿ.ಬಿ.ವಾಣಿಶ್ರೀ ಇವರನ್ನು ಆಯ್ಕೆ ಮಾಡಲಾಯಿತು. ಕಾಲೇಜಿನ ವ್ಯವ ಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಕಾರ್ಯ ಕ್ರಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಖಜಾಂಚಿ ಎಸ್.ಮನೋಹರ್, ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಪ್ರಾಂಶು ಪಾಲರಾದ ರಚನ್ ಅಪ್ಪಣಮಯ್ಯ, ಸಾರ್ವ ಜನಿಕ ಸಂಪರ್ಕಾಧಿಕಾರಿ ಡಾ.ಮೋಹನ ಕುಮಾರ, ರೋವರ್ ಮತ್ತು ರೇಂಜರ್ ಸ್ಕೌಟ್ ಲೀಡರ್‍ಗಳಾದ ಆಭಿಷೇಕ್ ಹಾಗೂ ಯಶೋದ ಉಪಸ್ಥಿತರಿದ್ದರು.

Translate »