ತಿ.ನರಸೀಪುರ ಪುರಸಭೆ ವಾರ್ಡ್‍ಗಳಿಗೆ ಮೀಸಲಾತಿ ನಿಗದಿ
ಮೈಸೂರು

ತಿ.ನರಸೀಪುರ ಪುರಸಭೆ ವಾರ್ಡ್‍ಗಳಿಗೆ ಮೀಸಲಾತಿ ನಿಗದಿ

June 15, 2018

ತಿ.ನರಸೀಪುರ:  ಪಟ್ಟಣದ ಪರಿವರ್ತಿತ ಪುರಸಭೆಗೆ ಸೆಪ್ಟೆಂಬರ್‍ನಲ್ಲಿ ಚುನಾವಣೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ ನೂತನ ವಾಗಿ ರಚನೆಯಾಗಿರುವ 23 ವಾರ್ಡು ಗಳಿಗೂ ಮೀಸಲಾತಿಯನ್ನು ಪ್ರಕಟಿಸಲಾಗಿದೆ.

ಪಟ್ಟಣ ಪಂಚಾಯಿತಿಯಲ್ಲಿ ಭೈರಾಪುರ ಮತ್ತು ಆಲಗೂಡು ಗ್ರಾಮ ಪಂಚಾಯಿತಿ ಗಳನ್ನು ವಿಲೀನಗೊಳಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ ನಂತರ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಯಾವೊಬ್ಬ ಚುನಾಯಿತ ಪ್ರತಿನಿಧಿಯಿಲ್ಲದೆ ಸಾರ್ವಜನಿಕರ ಅಹವಾಲು ಹಾಗೂ ಮೂಲ ಭೂತ ಸಮಸ್ಯೆಗಳನ್ನು ಕೇಳುವವರಿಲ್ಲದಂತಾ ಗಿತ್ತು. ಹಿಂದಿನ ಪಟ್ಟಣ ಪಂಚಾಯಿತಿಯ ಜನಪ್ರತಿನಿಧಿಗಳೇ ಪರಿವರ್ತಿತ ಪುರಸಭೆ ಯಲ್ಲಿ ಮುಂದುವರೆದಿದ್ದರು. ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಸರ್ಕಾರ, ಆಕ್ಷೇಪಗಳಿಗೆ ಅವಕಾಶ ಕಲ್ಪಿಸಿದೆ. ಪುರ ಸಭೆಯ ನೂತನ 23 ವಾರ್ಡುಗಳಲ್ಲಿ ಸಾಮಾನ್ಯಕ್ಕೆ 6 ಕ್ಷೇತ್ರ, ಸಾಮಾನ್ಯ ಮಹಿಳೆ ಯರಿಗೆ 6, ಪ.ಜಾತಿಗೆ 2, ಪ.ಜಾತಿ ಮಹಿಳೆಗೆ 2, ಪ.ಪಂಗಡಕ್ಕೆ 3, ಪ.ಪಂಗಡ ಮಹಿಳೆಗೆ 3 ಹಾಗೂ ಹಿಂದುಳಿವ ವರ್ಗ ಎಗೆ 1 ಕ್ಷೇತ್ರದಲ್ಲಿ ಮೀಸಲು ನಿಗದಿಗೊಳಿ ಸಲಾಗಿದೆ. ಕ್ಷೇತ್ರವಾರು ವಿವರ ಹಾಗೂ ಮೀಸಲಾತಿಯ ಮಾಹಿತಿ ಇಲ್ಲಿದೆ.

ಮೀಸಲಾತಿ ವಿವರ: ವಾರ್ಡ್ ನಂ. 1 ಸಾಮಾನ್ಯ, 2 ಸಾಮಾನ್ಯ, 3 ಪರಿಶಿಷ್ಟ ಜಾತಿ, ಮಹಿಳೆ, 4 ಪರಿಶಿಷ್ಟ ಜಾತಿ, 5 ಹಿಂದುಳಿದ ವರ್ಗ, 6 ಪರಿಶಿಷ್ಟ ಜಾತಿ, 7 ಸಾಮಾನ್ಯ ಮಹಿಳೆ, 8 ಸಾಮಾನ್ಯ, 9 ಸಾಮಾನ್ಯ, 10 ಸಾಮಾನ್ಯ (ಮಹಿಳೆ), 11 ಪರಿಶಿಷ್ಟ ಪಂಗಡ, 12 ಸಾಮಾನ್ಯ, 13 ಸಾಮಾನ್ಯ, 14 ಪರಿಶಿಷ್ಟ ಜಾತಿ ಮಹಿಳೆ, 15 ಪರಿಶಿಷ್ಟ ಪಂಗಡ ಮಹಿಳೆ, 16 ಪರಿಶಿಷ್ಟ ಪಂಗಡ, 17 ಪರಿಶಿಷ್ಟ ಪಂಗಡ ಮಹಿಳೆ, 18 ಪರಿಶಿಷ್ಟ ಪಂಗಡ ಮಹಿಳೆ, 19 ಸಾಮಾನ್ಯ ಮಹಿಳೆ, 20 ಪರಿಶಿಷ್ಟ ಪಂಗಡ, 21 ಸಾಮಾನ್ಯ ಮಹಿಳೆ, 22 ಸಾಮಾನ್ಯ ಮಹಿಳೆ, 23 ಸಾಮಾನ್ಯ ಮಹಿಳೆ.

Translate »