ಮೈಸೂರು, ಜ.9(ಎಂಟಿವೈ)- ಸ್ವಚ್ಛ ಸರ್ವೇಕ್ಷಣ್ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆ ವಿವಿಧ ಸಂಘ ಸಂಸ್ಥೆ ಗಳ ನೆರವಿನೊಂದಿಗೆ ಗುರುವಾರ ಆಯೋ ಜಿಸಿದ್ದ `ಗೋಡೆ ಚಿತ್ರಕಲಾ ಸ್ಪರ್ಧೆ’ಯಲ್ಲಿ ಮೈಸೂರಿನ ಕಲಾವಿದ ಯೋಗಾನಂದ್ ಹಾಗೂ ಚಾಮರಾಜನಗರದ ಮಧು ಸೂದನ್ `ಸ್ವಚ್ಛತಾ ಹಾಗೂ ಪೇಂಟಿಂಗ್ ಹೀರೊ’ ಬಿರುದಿನೊಂದಿಗೆ ಪ್ರಥಮ ಬಹುಮಾನ ಹಂಚಿಕೊಂಡರು.
`ಸ್ವಚ್ಛ ನಗರ’ ಪಟ್ಟಕ್ಕೆ ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣ್-2020 ಸರ್ವೆ ಜ.4ರಿಂದ ಆರಂಭವಾಗಿದ್ದು, ಜ.31ರವರೆಗೂ ನಡೆಯ ಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪಾಲಿಕೆ ವಿವಿಧ ಕಾರ್ಯಕ್ರಮ ರೂಪಿಸಿದ್ದು, ಅದರಲ್ಲಿ ಗೋಡೆಗಳ ಮೇಲೆ ಚಿತ್ರ ಬಿಡಿಸುವುದೂ ಒಂದಾಗಿದೆ. ಇಂದು ಬೆಳಿಗ್ಗೆ ಎಂ.ಜಿ ರಸ್ತೆ (ಲಲಿತ ಮಹಲ್ ರಸ್ತೆ)ಗೆ ಹೊಂದಿ ಕೊಂಡಂತಿರುವ ಮೃಗಾಲಯದ ಕಾಂಪೌಂಡ್ ಮೇಲೆ ಚಿತ್ರ ಬರೆಯುವ ಸ್ಪರ್ಧೆ ಆಯೋ ಜಿಸಲಾಗಿತ್ತು. ಮೈಸೂರು ಹಾಗೂ ಚಾಮ ರಾಜನಗರದ 20ಕ್ಕೂ ಹೆಚ್ಚು ಕಲಾವಿದರು ತಮ್ಮ ಸಹಾಯಕರೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ವನ್ಯ ಸಂಪತ್ತಿನ ಸಂರಕ್ಷಣೆ, ಸ್ವಚ್ಛತೆ, ಬಯಲು ಶೌಚ ಮುಕ್ತ, ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಪರಿಸರ ಸಂರಕ್ಷಣೆ ಹಾಗೂ ಮೈಸೂರಿನ ಸ್ವಚ್ಛತೆ ಕಾಪಾಡುವ ಥೀಮ್ ನಲ್ಲಿ ಚಿತ್ರ ರಚಿಸುವಂತೆ ಸೂಚನೆ ನೀಡಲಾ ಗಿತ್ತು. 5ಘಿ12 ಅಳತೆಯ 57 ಬ್ಲಾಕ್‍ಗಳನ್ನು ಚಿತ್ರ ರಚನೆಗೆ ಸಿದ್ಧಪಡಿಸಲಾಗಿತ್ತು. ಆದರೆ 20 ಬ್ಲಾಕ್‍ಗಳಲ್ಲಷ್ಟೇ ಕಲಾವಿದರು ಚಿತ್ರ ರಚಿಸಿದರು. ಬೆಳಿಗ್ಗೆ 8ರಿಂದ ಆರಂಭವಾದ ಚಿತ್ರ ರಚನಾ ಸ್ಪರ್ಧೆ ಮಧ್ಯಾಹ್ನ 12.30 ರವರೆಗೆ ನಡೆಯಿತು. `ಕಾವಾ’ದ ಹಿರಿಯ ಉಪನ್ಯಾಸಕರ ನೇತೃತ್ವದಲ್ಲಿ ಹಿರಿಯ ಕಲಾ ವಿದರ ತಂಡ ಮೌಲ್ಯಮಾಪನ ಮಾಡಿತು. ಅದರಲ್ಲಿ ಮೈಸೂರಿನ ಕಲಾವಿದ ಯೋಗಾ ನಂದ ಬರೆದಿದ್ದ `ಪ್ರಕೃತಿ ನಮ್ಮ ಸ್ವತ್ತಲ್ಲ -ನಾವು ಪ್ರಕೃತಿ ಸ್ವತ್ತು’ ಶೀರ್ಷಿಕೆಯ ಚಿತ್ರ ಹಾಗೂ ಮಧುಸೂದನ್ ಅವರ `ಹೇ ಮನು ಕುಲ ಜಗವೆಲ್ಲವೂ ನಿನಗಲ್ಲ… ವನ್ಯ ಸಂಕುಲ ವಿರದಿರೆ ಜಗವಿಲ್ಲ’ ಶೀರ್ಷಿಕೆಯಲ್ಲಿ ಮಾನವ ಹೆಜ್ಜೆ ಇಟ್ಟ ಕಡೆಯೆಲ್ಲಾ ನಾಶ ಎಂಬ ಪರಿ ಕಲ್ಪನೆಯಲ್ಲಿ ನಗರೀಕರಣದ ಬಗ್ಗೆ ಬರೆದಿ ರುವ ಚಿತ್ರಗಳು ಸಮ ಅಂಕ ಪಡೆದವು. ಹಾಗಾಗಿ ಇಬ್ಬರೂ ಕಲಾವಿದರು ಪ್ರಥಮ ಸ್ಥಾನ ಹಂಚಿಕೊಂಡರು.
ತೀರ್ಪುಗಾರರ ಸೂಚನೆ ಮೇರೆಗೆ ಮೊದಲ ಬಹುಮಾನದ 10 ಸಾವಿರ ಹಾಗೂ ಎರ ಡನೇ ಬಹುಮಾನದ ಮೊತ್ತ 5 ಸಾವಿರ ರೂ. ಗಳನ್ನು ಒಟ್ಟಿಗೆ ಸೇರಿಸಿ, ವಿಭಜಿಸಿ ಇಬ್ಬ ರಿಗೂ ತಲಾ 7.500 ರೂ. ಹಂಚಲಾಯಿತು. ಜತೆಗೆ ಪ್ರಮಾಣಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕಲಾ ವಿದರಿಗೂ ತಲಾ 500 ರೂ. ಗೌರವಧನ ಹಾಗೂ ಪ್ರಮಾಣಪತ್ರ ನೀಡಲಾಯಿತು.
ಚಾಲನೆ: ಗೋಡೆಗಳ ಮೇಲೆ ಚಿತ್ರ ಬರೆಸಿ ನಗರದ ಸೌಂದರ್ಯ ಹೆಚ್ಚಿಸುವ ಅಭಿಯಾನಕ್ಕೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಚಾಲನೆ ನೀಡಿದರು. ಬಳಿಕ ಮಾತ ನಾಡಿದ ಅವರು, ಮೈಸೂರಿಗೆ ಈ ಬಾರಿ `ಸ್ವಚ್ಛ ನಗರ’ ಬಿರುದು ದೊರಕಿಸಿಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಪ್ಲಾಗಥಾನ್, ಗೋಡೆಗಳ ಮೇಲೆ ಚಿತ್ರ ಬರೆಯುವ ಸ್ಪರ್ಧೆ ನಡೆಸಿ, ಜನರಲ್ಲಿ ಸ್ವಚ್ಛ ಸರ್ವೇಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರು ಸರ್ವೇ ಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರತಿ ಕ್ರಿಯೆ (ಫೀಡ್‍ಬ್ಯಾಕ್) ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಎಂ.ಕುಲಕರ್ಣಿ, ನಮ್ಮ ಮೈಸೂರು ಫೌಂಡೇಷನ್‍ನ ದಶರತ್, ಮಲ್ಲೇಶ್, ಪಾಲಿಕೆ ಪರಿಸರ ಅಭಿಯಂತರರಾದ ಮೈತ್ರಿ, ಪೂರ್ಣಿಮಾ ಇನ್ನಿತರರಿದ್ದರು.