ದೆಹಲಿ: ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ವಾಯುಗುಣ ಮಟ್ಟ ಕುಸಿದಿರುವ ಕಾರಣ 26 ರೈಲುಗಳು ವಿಳಂಬವಾಗಿವೆ. ಕನಿಷ್ಠ ತಾಪಮಾನ 5.8 ಡಿಗ್ರಿ ದಾಖಲಾಗಿದ್ದು, ಗರಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿಯೂ ದೆಹಲಿಯಲ್ಲಿ ಮಂಜು ಕವಿದ ವಾತಾವರಣ ಇರಲಿದೆ. ದಟ್ಟ ಮಂಜು ಆವರಿಸಿರುವ ಪರಿಣಾಮ ಬೆಳಿಗ್ಗೆ 800 ಮೀಟರ್ ದೂರ ದಲ್ಲಿರುವುದಷ್ಟೇ ಕಾಣಿಸುತ್ತಿದೆ. ಇನ್ನು ವಾಯುಗುಣಮಟ್ಟ ಸಹ ಕಳಪೆಯಾಗಿದ್ದು, 302 ರಷ್ಟಿದೆ.
