ಮೈಸೂರು, ಜ.11(ಪಿಎಂ)- ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲಿನಲ್ಲಿ ನಿಲ್ಲುವಂತಹ ವಾತಾವರಣ ನಿರ್ಮಾಣ ಮಾಡಬೇಕೆಂಬ ಆಸೆ ನನಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.
ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಆವ ರಣದಲ್ಲಿ ಶನಿವಾರ ಫಾರ್ಮಸಿ ಕಾಲೇ ಜಿನ ಅಡ್ವಾನ್ಸ್‍ಡ್ ರಿಸರ್ಚ್ ಸೆಂಟರ್ ಹಾಗೂ ಸಂಸ್ಥೆಯ ಮಹಾದ್ವಾರ ಉದ್ಘಾ ಟಿಸಿ ಇಲ್ಲಿನ ಶಾರದಾ ವಿಲಾಸ ಶತಮಾ ನೋತ್ಸವ ಭವನದಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಅವಧಿಯಲ್ಲಿ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ತುದಿಗಾಲಲ್ಲಿ ನಿಲ್ಲುವಂತಹ ವಾತಾವರಣ ನಿರ್ಮಿಸುವ ಆಸೆ ನನ್ನದು. ಇದನ್ನು ನಾನು ಗುರಿ ಎನ್ನಲಾರೆ. ಆದರೆ ಇಂತಹ ಮಹತ್ವದ ಬೆಳವಣಿಗೆ ಕಾಣಬೇಕೆಂಬ ಹಂಬಲ ನನ್ನಲ್ಲಿದೆ. 158 ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆಗೆ ಭೇಟಿ ನೀಡಿರುವುದು ನನ್ನ ಅದೃಷ್ಟ. ಹಲವು ಮಹನೀಯರು ಓದಿದ ಸಂಸ್ಥೆ ಇದು. ಶಿಕ್ಷಣ ವ್ಯಾಪಾರೀಕರಣ ವಾಗಿರುವ ಈ ಸಂದರ್ಭದಲ್ಲಿ ವಿದ್ಯೆ ಕಲಿಸು ವುದು ಒಂದು ಸೇವೆ ಎಂಬ ಧ್ಯೇಯದೊಂ ದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು. ಕೊನೆ ಬೆಲ್ ಹೊಡೆದರೆ ಮಕ್ಕಳು ಖುಷಿಪಡುತ್ತಾರೆ. ಇಂತಹ ವಾತಾವರಣದ ಬದಲಿಗೆ ಮಕ್ಕಳು ಶಾಲೆಯಲ್ಲಿ ಲವಲವಿಕೆಯಿಂದ ಕಲಿಯು ವಂತಹ ವಾತಾವರಣ ನಿರ್ಮಿಸಬೇಕಿದೆ. ಇದಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಸುಧಾ ರಣೆ ತರಬೇಕಿದೆ. ಸಾಹಿತಿ ಲಕ್ಷ್ಮೀನಾರಾ ಯಣಭಟ್ `ನಿಲುವುಗನ್ನಡಿ ಮುಂದೆ’ ಪುಸ್ತಕ ಅವರ ಆತ್ಮಚರಿತ್ರೆಯ ಪುಸ್ತಕ. ಸ್ವಾರಸ್ಯ ಕರ ಮಾತ್ರ ವಲ್ಲದೆ, ಪ್ರಮುಖ ವಿಚಾರಗಳ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ. ಅಕ್ಕನ ಮದುವೆ ಹಿನ್ನಲೆಯಲ್ಲಿ ಪರೀಕ್ಷೆಗೆ ಹೋಗದೇ ಇದ್ದಾಗ ಮುಖ್ಯ ಶಿಕ್ಷಕರು ಪಠ್ಯವೊಂದನ್ನು ಓದಿಸಿ 2ನೇ ತರಗತಿಗೆ ಪಾಸ್ ಮಾಡಿದ್ದು ಸೇರಿದಂತೆ ಅಂದಿನ ಶಿಕ್ಷಣದ ಆದರ್ಶಗಳನ್ನು ಅಲ್ಲಿ ವಿವರಿಸಿದ್ದಾರೆ. ಶಿಕ್ಷಕರು ದೇವರಿಗೆ ಸಮಾನ. ಅವರು ವಿದ್ಯಾರ್ಥಿಗಳನ್ನು ಕೈಹಿಡಿದು ನಡೆಸಬೇಕು ಎಂದು ಹೇಳಿದರು.
ಒಳ್ಳೆಯ ಅವಕಾಶಗಳು ಸಿಕ್ಕಾಗ ಬಳಸಿ ಕೊಂಡು ಬೆಳೆಯಬೇಕು. ಬೆಂಗಳೂರಿನ ಆನೆಕಲ್ಲು ಬಳಿ ಹಳ್ಳಿಯೊಂದರಲ್ಲಿ ವಿಧವೆ ಯೊಬ್ಬಳು ತನ್ನ ಮಗು ಆಂಜನಪ್ಪ ಎಂಬ ಬಾಲಕನನ್ನು ಶಾಲೆಗೆ ಸೇರಿಸದೇ ಇರು ವುದನ್ನು ನಿರ್ಮಲ ಎಂಬ ಶಿಕ್ಷಕಿ ಗಮನಿಸಿ ಆ ಬಾಲಕನನ್ನು ಶಾಲೆಗೆ ಸೇರಿಸಿದರು. ಆತ ಜೆಇಇ ಪರೀಕ್ಷೆ 8 ಲಕ್ಷ ಮಂದಿಯಲ್ಲಿ 91ನೇ ರ್ಯಾಂಗ್ ಗಳಿಸಿದ್ದಾನೆ. ಈಗ ಮುಂಬೈನಲ್ಲಿ ಓದುತ್ತಿದ್ದಾನೆ ಎಂದರು. ಆಹಾರ ಹಾಗೂ ಔಷಧ ಕುರಿತಂತೆ ಸಂಶೋಧನೆ ನಡೆಸಲು ಸಂಸ್ಥೆಯಲ್ಲಿ ಕೇಂದ್ರ ಆರಂಭಿಸಿ ದೊಡ್ಡ ಹೆಜ್ಜೆ ಇಡಲಾಗಿದೆ. ಇದು ಮೈಸೂರು ಹಾಗೂ ರಾಜ್ಯಕ್ಕೆ ಸದುಪಯೋಗವಾಗಲಿದೆ ಎಂದು ಹಾರೈ ಸಿದರು. ಮೈಸೂರು ಜಿಲ್ಲಾ ಸಹಕಾರ ಸಂಘ ಅಧ್ಯಕ್ಷ ಹೆಚ್.ವಿ.ರಾಜೀವ್, ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಕಾರ್ಯದರ್ಶಿ ಹೆಚ್.ಕೆ. ಶ್ರೀನಾಥ್ ಮತ್ತಿತರರು ಹಾಜರಿದ್ದರು.