ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲೂ ಸಮಸ್ಯೆ, ಸವಾಲುಗಳೆದುರಾಗಿವೆ
ಮೈಸೂರು

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲೂ ಸಮಸ್ಯೆ, ಸವಾಲುಗಳೆದುರಾಗಿವೆ

January 17, 2020

ಮೈಸೂರು,ಜ.16(ಎಂಟಿವೈ)- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಮಸ್ಯೆ ಹಾಗೂ ಸವಾಲುಗಳು ಸೃಷ್ಟಿಯಾಗಿವೆ ಎಂದು ದಕ್ಷಿಣ ಕೊರಿಯಾದ ಜಿಯೋನ್ ಬಕ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಪ್ರೋ. ಜೂಂಗ್ ಹೀ ಲೀ ಅಭಿಪ್ರಾಯಿಸಿದರು.

ಮೈಸೂರು ಶ್ರೀ ಜಯಚಾಮ ರಾಜೇಂದ್ರ ಇಂಜಿನಿಯರಿಂಗ್ ಕಾಲೇಜು, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಹಾಗೂ ಟೆಕ್ಯುಪ್ ಸಂಸ್ಥೆ ಸಹಯೋಗದಲ್ಲಿ ಎಸ್‍ಜೆಸಿಇ ಸೆಮಿ ನಾರ್ ಹಾಲ್‍ನಲ್ಲಿ ಗುರುವಾರ ಆಯೋಜಿ ಸಿದ್ದ `ಸುಧಾರಿತ ವಸ್ತುಗಳು ಮತ್ತು ತಂತ್ರ ಜ್ಞಾನ’ ಕುರಿತ ಎರಡನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಲಭ್ಯತೆ ಮಿತಿ ಸೇರಿದಂತೆ ಪ್ರಸ್ತುತ ಅನೇಕ ರೀತಿಯ ವೈಜ್ಞಾನಿಕ ಸಮಸ್ಯೆ ಎದುರಾಗಿವೆ. ಹಾಗಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸವಾಲು ಎದು ರಾಗಿದ್ದು, ಭವಿಷ್ಯದಲ್ಲಿ ಗಮನಾರ್ಹ ಪರಿ ಣಾಮ ಬೀರುವ ಸಾಧ್ಯತೆಯಿದೆ ಎಂದರು.

ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ಪಾದನೆ ಹಾಗೂ ಆವಿಷ್ಕಾರದ ಮೇಲೆ ಪರಿಣಾಮ ಬೀರುತ್ತಿದೆ. ವಿಮಾನÀ ತಯಾರಿಕೆಯಿಂದ ಹಿಡಿದು ಸಂಗೀತ ಉಪ ಕರಣಗಳ ತಯಾರಿಕೆವರೆಗೂ ಸವಾಲು ಸಾಮಾನ್ಯ ಎಂಬಂತಾಗಿದೆ. ರಕ್ಷಣಾ ಕ್ಷೇತ್ರ, ಆಹಾರ, ಕ್ರೀಡೆ ಸೇರಿದಂತೆ ಯಾವ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ ಎಂದು ತಿಳಿ ಸಿದ ಅವರು, ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ಪ್ರಕ್ರಿಯೆಗಳಿಂದ ಹಾಗೂ ಪರ್ಯಾಯ ಇಂಧನ ಮೂಲಗಳ ಮೂಲಕ ಉತ್ಪಾ ದನಾ ಕ್ಷೇತ್ರದಲ್ಲಿ ಸಾಧನೆ ಮಾಡಬಹುದೇ ಎಂಬ ಅವಲೋಕನ ನಡೆಯಬೇಕಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾದ ಉಪ ಕರಣ, ಕೃತಕ ಅಂಗಾಂಗಗಳ ಉತ್ಪಾದನೆ, ಕಂಪ್ಯೂಟರ್ ಚಿಪ್, ಡೇಟಾ ಶೇಖರಣಾ ಸಾಧನಗಳ ಉತ್ಪಾದನಾ ಕ್ಷೇತ್ರದಲ್ಲಿರುವ ಸವಾಲುಗಳ ತೊಡೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಬೇಕೆಂದು ಹೇಳಿದರು.

ದಕ್ಷಿಣ ಕೊರಿಯಾದ ಜಿಯೋನ್ ಬಕ್ ರಾಷ್ಟ್ರೀಯ ವಿಶ್ವವಿದ್ಯಾಲಯ (ಜೆಬಿ ಎನ್‍ಯು) ಕೊರಿಯಾದ ಐತಿಹಾಸಿಕ ನಗರ ಜಿಯಾಂಜುವಿನಲ್ಲಿದ್ದು, ಜಿಯಾ ನ್ಬುಕ್ ಪ್ರಾಂತ್ಯದ ಪ್ರಮುಖ ರಾಷ್ಟ್ರೀಯ ವಿಶ್ವವಿದ್ಯಾಲಯವಾಗಿದೆ. ಪ್ರಾಂತೀಯ ನಿಧಿ ಯಿಂದ 1947ರಲ್ಲಿ ಸ್ಥಾಪಿತಗೊಂಡಿದ್ದು, ಸುಮಾರು 32 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ನೀಡುತ್ತಿದೆ. 2,400ಕ್ಕೂ ಹೆಚ್ಚು ಪೂರ್ಣ ಹಾಗೂ ಅರೆಕಾಲಿಕ ಪ್ರಾಧ್ಯಾ ಪಕರು ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವದ ವಿವಿಧ ಸಂಸ್ಥೆಗಳೊಂದಿಗೆ ನಮ್ಮ ವಿವಿ ಒಡಂಬಡಿಕೆ ಮಾಡಿಕೊಂಡಿದೆ. ಕ್ಯೂಎಸ್ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ನಮಗೆ ಎಸ್‍ಜೆ ಸಿಇಯೊಂದಿಗೆ ಉತ್ತಮ ಸಂಬಂಧವಿದೆ. ಎರಡೂ ಸಂಸ್ಥೆಗಳು ಜಂಟಿ ಸಂಶೋ ಧನಾ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಸಂಬಂಧವನ್ನು ಬಲಪಡಿಸುವ ತಿಳು ವಳಿಕೆಯ ಜ್ಞಾಪಕ ಪತ್ರಕ್ಕೆ ಸಹಿ ಹಾಕು ತ್ತಿದ್ದೇವೆ ಎಂದು ತಿಳಿಸಿದರು.

ಜೆಎಸ್‍ಎಸ್ ವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ ಸೂರ್ ಮಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸಾಬಿಕ್ ಸಂಸ್ಥೆಯ ಡಾ.ಸುಮಂದ ಬಂಡೋ ಪಾಧ್ಯಾಯ, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಸಚಿವ ಡಾ.ಕೆ.ಎಸ್. ಲೋಕೇಶ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ ಉಪ ಸ್ಥಿತರಿದ್ದರು. ಸಮ್ಮೇಳನವೂ ಜ.18ರವರೆಗೆ ನಡೆಯಲಿದ್ದು, 27 ತಾಂತ್ರಿಕ ಗೋಷ್ಠಿಯಲ್ಲಿ 13 ದೇಶಗಳ 30 ಪ್ರತಿನಿಧಿಗಳು 280ಕ್ಕೂ ಹೆಚ್ಚು ವಿಷಯ ಮಂಡಿಸಲಿದ್ದಾರೆ.

ಭಾರತ ಶ್ರೀಮಂತ ರಾಷ್ಟ್ರ: ಪಾರಂಪರಿಕ ಹಾಗೂ ಸಾಂಸ್ಕøತಿಕತೆ ಹಿನ್ನೆಲೆಯಲ್ಲಿ ಭಾರತ ಅತ್ಯಂತ ಶ್ರೀಮಂತ ದೇಶ. ಸಾಂಪ್ರ ದಾಯಿಕ ಕಲೆಗಳ ಪ್ರದರ್ಶನದಲ್ಲಿ ಭಾರತ ಸದಾ ಮುಂಚೂಣಿಯಲ್ಲಿರುವುದು ವಿಶೇಷ. ಧರ್ಮ, ಕಲೆ, ಬೌದ್ಧಿಕ ಸಾಧನೆ ಗಳು, ಪ್ರದರ್ಶನ ಕಲಾ ಕ್ಷೇತ್ರದಲ್ಲಿ ವರ್ಣ ರಂಜಿತ, ಶ್ರೀಮಂತ ಹಾಗೂ ವೈವಿ ಧ್ಯಮಯವನ್ನು ಭಾರತದಲ್ಲಿ ಕಾಣ ಬಹುದು ಎಂದು ಬಣ್ಣಿಸಿದರು

ಜೆಎಸ್‍ಎಸ್ ಸಂಸ್ಥೆಗೆ ಮೆಚ್ಚುಗೆ: `ಸುಧಾರಿತ ವಸ್ತುಗಳು ಮತ್ತು ತಂತ್ರಜ್ಞಾನ’ ಅಂತಾರಾಷ್ಟ್ರೀಯ ಸಮ್ಮೇಳನ ಅರ್ಥ ಪೂರ್ಣವಾಗಿದೆ. ಜೆಎಸ್‍ಎಸ್ ಸಂಸ್ಥೆ ಆರೋಗ್ಯ, ಶಿಕ್ಷಣ, ಅನ್ನದಾಸೋಹ ಕ್ಷೇತ್ರ ಗಳ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದೆ. ನಾನು ಜೆಎಸ್‍ಎಸ್ ಚಟು ವಟಿಕೆಗಳ ವರದಿಗಳನ್ನು ನೋಡಿದ್ದೇನೆ. ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆಹಾರವನ್ನು ನೀಡುತ್ತಿದೆ. ಹೊರ ದೇಶಗಳಲ್ಲಿಯೂ ಶಾಖೆ ಹೊಂದಿರು ವುದು ಸಂಸ್ಥೆಗೆ ಇರುವ ಬದ್ಧತೆಯನ್ನು ಸಾಬೀತುಪಡಿಸುತ್ತದೆ ಎಂದರು.

Translate »