ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಪರಿಶಿಷ್ಟರ ಅನುದಾನ ದುರ್ಬಳಕೆ
ಮೈಸೂರು

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಪರಿಶಿಷ್ಟರ ಅನುದಾನ ದುರ್ಬಳಕೆ

January 18, 2020

ಮೈಸೂರು,ಜ.17(ಆರ್‍ಕೆಬಿ)- ವಿಶೇಷ ಘಟಕ ಯೋಜನೆ (SಇP) ಮತ್ತು ಬುಡ ಕಟ್ಟು ಉಪ ಯೋಜನೆ (ಖಿSP)ಯ ಹಣದಲ್ಲಿ ಪರಿಶಿಷ್ಟರೇ ಇಲ್ಲದ ಕಡೆ ಶುದ್ಧ ಕುಡಿ ಯುವ ನೀರಿನ ಯೋಜನೆ ಕೈಗೊಂಡು ಅಧಿಕಾರಿಗಳು ಹಣ ದುರುಪಯೋಗ ಮಾಡಿ ದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅಚ್ಯುತಾನಂದ ಮಂಡಿಸಿದ ನಿಲು ವಳಿ ಸಂಬಂಧ ಶುಕ್ರವಾರ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ನನ್ನ ಮತ ಕ್ಷೇತ್ರದಲ್ಲಿ ನನ್ನ ಗಮನಕ್ಕೆ ಬಾರದೆ ಪರಿಶಿಷ್ಟರೇ ಇಲ್ಲದ ಕೆಲ ಗ್ರಾಮಗಳಲ್ಲಿ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯ ಹಣದಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕ ಸ್ಥಾಪಿಸಿ ಅಧಿಕಾರಿ ಗಳು ಎಸ್‍ಸಿಪಿ-ಟಿಎಸ್‍ಪಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಅಚ್ಯುತಾ ನಂದ ಆರೋಪಿಸಿದರು. ಈ ಸಂಬಂಧ ಚರ್ಚೆ ನಡೆಸಿ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ, ಕ್ರಮ ಕೈಗೊಳ್ಳ ಬೇಕು ಎಂದು ಸಭೆಯ ಗಮನ ಸೆಳೆದರು.

ಈ ಹಣ ದುರ್ಬಳಕೆಗೆ ಕಾರಣವೇನು? ಅಲ್ಲಿ ಶುದ್ಧ ನೀರು ಘಟಕ ತೆರೆಯಲು ಸೂಚಿ ಸಿದವರು ಯಾರು? ಶಾಸಕರೇ, ಸಂಸದರೇ ಅಥವಾ ಇನ್ಯಾರು? ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡಬೇಕು. ಪರಿಶಿಷ್ಟರಿಗೆ ಮೀಸ ಲಾದ ಅನುದಾನದ ದುರುಪಯೋಗಕ್ಕೆ ಸಂಬಂಧಿಸಿದಂತೆ ಪರಿಶಿಷ್ಟರ ಕಾಯ್ದೆ ಪ್ರಕಾರ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಕೇವಲ ಕೆ.ಆರ್.ನಗರ ತಾಲೂಕಿನಲ್ಲಿ ಮಾತ್ರ ಆಗಿದೆಯೇ? ಇಡೀ ಜಿಲ್ಲೆಯಲ್ಲಿ ಆಗಿ ದೆಯೇ? ಈ ಕುರಿತು ಸಮಗ್ರ ತನಿಖೆ ಆಗ ಬೇಕು. ಪಕ್ಷಾತೀತವಾಗಿ ಚರ್ಚೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಚ್ಯುತಾನಂದರ ಈ ನಿಲುವಳಿ ಪ್ರಶ್ನೆಗೆ ಸಹಮತ ವ್ಯಕ್ತಪಡಿಸಿ ಸದಸ್ಯರಾದ ಪುಷ್ಪಾ ಅಮರನಾಥ್, ಮಂಗಳಾ ಸೋಮಶೇಖರ್, ಶ್ರೀಕೃಷ್ಣ, ಡಿ.ರವಿಶಂಕರ್, ಬೀರಿಹುಂಡಿ ಬಸವಣ್ಣ ಮಾತನಾಡಿದರು. ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಪುಷ್ಪಾ ಅಮರನಾಥ್ ಮಾತನಾಡಿ, ಇದು ಬಹಳ ಸೂಕ್ಷ್ಮ ವಿಚಾರ. ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಈ ಘಟಕಗಳನ್ನು ತೆರೆಯ ಲಾಗಿದೆ ಎಂದು ಪುಸ್ತಕದಲ್ಲಿ ಸ್ಪಷ್ಟವಾಗಿ ನಮೂದಿಸಿದ್ದೀರಿ. ಇದರಲ್ಲಿ ಅವ್ಯವಹಾರ ನಡೆದಿದ್ದರೆ ಅಧಿಕಾರಿ ವಿರುದ್ಧ ಗಂಭೀರ ತನಿಖೆ ನಡೆಯಬೇಕು. ಅದಕ್ಕೆ ಸಮಿತಿ ರಚಿಸಿ, ಅಧಿಕಾರಿ ವಿರುದ್ಧ ಎಫ್‍ಐಆರ್ ದಾಖಲಿ ಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ನೀಡಿದ ಯೋಜನೆಗಳ ಸಮ ರ್ಪಕ ಅನುಷ್ಠಾನಗೊಳಿಸುವ ಬದ್ಧತೆ ಅಧಿ ಕಾರಿಗಳಿಗಿಲ್ಲ. ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ಸರ್ಕಾರದ ಯೋಜನೆ ಗಳು ಹಳ್ಳ ಹಿಡಿದಿವೆ ಎಂದು ಆರೋಪಿಸಿ ದರು. ಸಮಿತಿ ರಚಿಸಿ, ತನಿಖೆ ನಡೆಸಿ, 15 ದಿನದೊಳಗೆ ಮಾಹಿತಿ ಪಡೆಯಬೇಕು. ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ಮಂಗಳಾ ಸೋಮಶೇಖರ್ ಇದನ್ನು ಬೆಂಬಲಿಸಿ ಮಾತನಾಡಿ, ನನ್ನ ಕ್ಷೇತ್ರ ದಲ್ಲಿ 25 ಶುದ್ಧ ಕುಡಿಯುವ ನೀರು ಘಟಕ ಗಳ ಪೈಕಿ 13 ಕೆಟ್ಟು ನಿಂತಿವೆ. ಅಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ. ಸರ್ಕಾರದ ಹಣ ಪೋಲಾಗುತ್ತಿದೆ ಎಂದರು. ಶ್ರೀಕೃಷ್ಣ ಮಾತ ನಾಡಿ, ಪರಿಶಿಷ್ಟರಿಗೆ ಮೀಸಲಾದ ಹಣದಲ್ಲಿ ಪರಿಶಿಷ್ಟರೇ ಇಲ್ಲದ ಗ್ರ್ರಾಮಗಳಲ್ಲಿ ಯೋಜನೆ ಜಾರಿ ಸರಿಯೇ? ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಪರಿಶಿಷ್ಟರ ಹಣದಲ್ಲಿ ಈ ಯೋಜನೆ ಕೈಗೊಳ್ಳಲು ಯಾರು ಶಿಫಾರಸು ಮಾಡಿ ದ್ದಾರೆ ಎಂಬುದನ್ನು ಬಹಿರಂಗಪಡಿಸಿ ಎಂದು ಸದಸ್ಯ ಡಿ.ರವಿಶಂಕರ್ ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡುವಂತೆ ಅಧ್ಯಕ್ಷೆ ಪರಿಮಳಾ ಶ್ಯಾಂ ಅವರ ಆದೇಶದಂತೆ ಉತ್ತರ ನೀಡಲು ಮುಂದಾದ ಗ್ರಾಮೀಣÀ ನೀರು ಸರಬರಾಜು ಇಲಾಖೆ ಇಂಜಿನಿಯರ್ ಅವರು, ತಾವು ಸರ್ಕಾರದ ಅನುಮತಿಯಂತೆ ರಾಜ್ಯ ವಲಯದ ಅನುದಾನದಲ್ಲಿ ಕೆಲಸ ಮಾಡಿ ದ್ದೇವೆ. ನಿರ್ವಹಣೆ ಮಾಡುವಂತೆ ಸರ್ಕಾರ ನಮಗೆ ನಿರ್ದೇಶನ ನೀಡಿದೆ. ಅದರಂತೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದಾಗ, ಇದಕ್ಕೆ ಸದಸ್ಯ ಬೀರಿಹುಂಡಿ ಬಸವಣ್ಣ ಆಕ್ಷೇಪ ಎತ್ತಿದರು. ಅಧಿಕಾರಿ ವೇದಿಕೆಯಲ್ಲಿ ಉತ್ತರ ನೀಡಬಾರದು. ಅಧ್ಯಕ್ಷರೇ ಅಧಿಕಾರಿ ಯಿಂದ ಮಾಹಿತಿ ಪಡೆದು ಸಭೆಯ ಮುಂದಿ ಡಬೇಕು. ಸಭೆಯಲ್ಲಿ ಸ್ವಲ್ಪ ಕಾಲ ಬಿಸಿ ಯೇರಿದ ವಾತಾವರಣ ನಿರ್ಮಾಣವಾ ಯಿತು. ರಾಜ್ಯ ವಲಯದ ಬಗ್ಗೆ ಪ್ರಶ್ನೆ ಮಾಡು ವಂತಿಲ್ಲ ಎಂದು ಕಳೆದ ಸಭೆಯಲ್ಲಿ ಹೇಳ ಲಾಗಿತ್ತು. ಇದೀಗ ರಾಜ್ಯ ವಲಯದ ಪ್ರಶ್ನೆ ಮಾಡಬೇಕೆ? ಮಾಡುವಂತಿಲ್ಲವೇ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದರು. ಇದು ಇತರೆ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣ ವಾಯಿತು. ಪರಿಶಿಷ್ಟರ ಅನುದಾನ ಇಲ್ಲಿ ದುರುಪಯೋಗ ಆಗಿದೆ. ಅದು ಯಾವುದೇ ಹಣ ಆಗಿರಲಿ. ಪರಿಶಿಷ್ಟರಿಗೆ ಸೇರಿದ ಹಣ. ಆದ್ದರಿಂದ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ವೆಂಕಟಸ್ವಾಮಿ ಒತ್ತಾಯಿಸಿ ದರು. ಪ್ರತಿಯೊಂದು ವಿಚಾರವೂ ಇಲ್ಲಿ ಚರ್ಚೆಯಾಗಬೇಕು ಎಂದು ಬೀರಿಹುಂಡಿ ಬಸವಣ್ಣ ದನಿ ಎತ್ತಿದಾಗ, ಮತ್ತೊಬ್ಬ ಸದಸ್ಯ ಸಾ.ರಾ.ನಂದೀಶ್, ಇಲ್ಲಿ ರಾಜ್ಯವಲಯ, ಕೇಂದ್ರ ವಲಯದ ಬಗ್ಗೆಯೂ ಕೇಳಲು ನಮಗೆ ಹಕ್ಕಿದೆ ಎಂದಾಗ, ಇಬ್ಬರ ನಡುವೆ ಕೆಲ ನಿಮಿಷ ಮಾತಿನ ಚಕಮಕಿಗೆ ಕಾರಣ ವಾಯಿತು. ಮಧ್ಯೆ ದನಿಗೂಡಿಸಿದ ವೆಂಕಟಸ್ವಾಮಿ, ಪುಸ್ತಕದಲ್ಲಿ ಇರುವ ವಿಚಾರದ ಬಗ್ಗೆ ಮಾತ್ರ ಚರ್ಚಿಸಿ, ಇಲ್ಲದ ವಿಚಾರ ಬೇಡ ಎಂದರು.

ಇದಕ್ಕೆ ಉತ್ತರ ನೀಡಿದ ಜಿಪಂ ಸಿಇಓ ಕೆ.ಜ್ಯೋತಿ, ಎಲ್ಲಿಯೂ ರಾಜ್ಯವಲಯ, ಕೇಂದ್ರ ವಲಯ ಎಂಬುದಿಲ್ಲ. ಜಿಲ್ಲಾ ಪಂಚಾಯತ್ ನಿಧಿಯ ಬಗ್ಗೆ ಮಾತ್ರ ಚರ್ಚಿಸಬೇಕು ಎಂಬು ದಾಗಿ ಕಾಯ್ದೆ ಹೇಳುತ್ತದೆ ಎಂದರು. ಅಧ್ಯ ಕ್ಷರ ಸೂಚನೆ ಮೇರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಇಂಜಿನಿಯರ್, ಗ್ರಾಮದ ಜನ ಸಂಖ್ಯಾ ಮಾಹಿತಿಯನ್ನು ಅಧ್ಯಕ್ಷರಿಗೆ ತಲು ಪಿಸುವುದಾಗಿ ಹೇಳಿದರು. ಆದರೆ ಇದಕ್ಕೆ ಸದಸ್ಯರು ಆಕ್ಷೇಪ ಎತ್ತಿದರು. ಈಗಲೇ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು. ಆಗ ಜಿಪಂ ಸಿಇಓ ಕೆ.ಜ್ಯೋತಿ ಅವರು, ಕೇಳಿದ ತಕ್ಷಣವೇ ಮಾಹಿತಿ ಇಲ್ಲಿ ಲಭ್ಯವಿರುವುದಿಲ್ಲ. ಇಂದು ಚರ್ಚೆಗೆ ಬಂದಿದೆ. ಅಧಿಕಾರಿಗಳು ಮಾಹಿತಿ ತರಲು ಕನಿಷ್ಟ ಎರಡು ದಿನವಾದರೂ ಬೇಕು ಎಂದು ಪ್ರತಿಕ್ರಿಯಿಸಿದರು.

ಬಳಿಕ ಅಧ್ಯಕ್ಷೆ ಪರಿಮಳಾ ಶ್ಯಾಂ ಅವರು 5 ದಿನದೊಳಗೆ ಅಧ್ಯಕ್ಷರು, ಸಿಇಓ ಮತ್ತು ಎಲ್ಲಾ ಸದಸ್ಯರಿಗೆ ಮಾಹಿತಿ ನೀಡುವಂತೆ ಅಧಿಕಾರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಪಂ ಸಿಇಓ ಕೆ. ಜ್ಯೋತಿ ಮತ್ತು ಸ್ಥಾಯಿ ಸಮಿತಿ ಸದಸ್ಯರು, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಶುದ್ಧ ನೀರಿನ ಘಟಕಗಳು ಕೆಟ್ಟು ವರ್ಷವಾದರೂ ಸರಿಪಡಿಸಿಲ್ಲ: ಜಿಪಂ ಸದಸ್ಯರ ಆಕ್ರೋಶ
ಮೈಸೂರು,ಜ.17(ವೈಡಿಎಸ್)-ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಬಹುಪಾಲು ಶುದ್ಧ ನೀರಿನ ಘಟಕಗಳು ಕೆಟ್ಟು ವರ್ಷಗಳೇ ಕಳೆದರೂ ಸರಿಪಡಿಸಲು ಮುಂದಾಗಿಲ್ಲ ಎಂದು ಜಿಪಂ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಂಜುನಾಥ್ ಮಾತನಾಡಿ, ಕಾಳಿಹುಂಡಿ ಮತ್ತು ತಲಕಾಡು ಮತ್ತಿತರೆ ಗ್ರಾಮಗಳಲ್ಲಿ ಕುಡಿಯುವ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ 2 ವರ್ಷಗಳ ಹಿಂದೆಯೇ ಗುತ್ತಿಗೆದಾರರಿಗೆ ಟೆಂಡರ್ ನೀಡಲಾ ಗಿತ್ತು. ಆದರೆ ಇದುವರೆಗೂ ಕಾಮಗಾರಿಯನ್ನೇ ಆರಂಭಿಸಿಲ್ಲ. ಕೆಲ ಗ್ರಾಮಿಣ ಪ್ರದೇಶ ಗಳ ಕುಡಿಯುವ ನೀರಿನಲ್ಲಿ ಕ್ಲೊರೈಡ್ ಅಂಶ ಹೆಚ್ಚಿದೆಂಬ ದೂರು ಕೇಳಿ ಬಂದಿವೆ. ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಅನುದಾನ ಕಡಿತವಾಗಲಿದೆ. ಕಾಮಗಾರಿ ಆರಂಭಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿ ಸಿದರು. ಇದಕ್ಕೆ ಮಂಗಳಾ ಸೋಮಶೇಖರ್ ಧ್ವನಿಗೂಡಿಸಿ, ನನ್ನ ಕ್ಷೇತ್ರ ವ್ಯಾಪ್ತಿಯ 3 ಗ್ರಾಮ ಪಂಚಾಯತಿಗಳಲ್ಲಿ 13 ನೀರಿನ ಘಟಕಗಳು ಕೆಟ್ಟು ನಿಂತಿವೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದರು. ಈ ವೇಳೆ ಸಂಬಂಧಪಟ್ಟ ಅಧಿಕಾರಿ ಮಾತನಾಡಿ, ಸಧ್ಯದಲ್ಲೇ ದುರಸ್ಥಿ ಮಾಡಿಸಲಾಗುವುದು ಎಂದು ಉತ್ತರಿಸಿದರು.

Translate »