ಮೈಸೂರು,ಜ.20(ಎಂಟಿವೈ)- ದೆಹಲಿ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಜ.8ರಂದು ಸಂಜೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಯುವತಿ ನಳಿನಿ ಬಾಲಕುಮಾರ್ ಹಾಗೂ ಪ್ರತಿಭ ಟನೆಯ ನೇತೃತ್ವ ವಹಿಸಿದ್ದ ಮೈಸೂರು ವಿವಿ ಸಂಶೋಧÀಕರ ಸಂಘದ ಅಧ್ಯಕ್ಷ ಮರಿ ದೇವಯ್ಯ ಪರ ವಕಾಲತ್ತು ವಹಿಸಲು ವಿವಿ ಧೆಡೆಯಿಂದ ಆಗಮಿಸಿದ್ದ 163 ವಕೀಲರು ಸೋಮವಾರ ಅರ್ಜಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದು, ದೇಶದ್ರೋಹಿ ಕೃತ್ಯ ಎಂದು ದೊಡ್ಡಮಟ್ಟದಲ್ಲಿ ವಿವಾದ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸ್ವಯಂ ದೂರು ದಾಖಲಿಸುವಂತೆ ನೀಡಿದ ಸೂಚನೆ ಮೇರೆಗೆ ಜಯಲಕ್ಷ್ಮೀಪುರಂ ಪೊಲೀಸರು ಜ.9 ರಂದು ಎಫ್‍ಐಆರ್(02/2020) ದಾಖ ಲಿಸಿ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಎ.1 ಆರೋಪಿಯಾಗಿ ಪರಿಗಣಿಸಿ ಐಪಿಸಿ 1860(ಯು/ಎಸ್-34, 124ಎ) ಅನ್ವಯ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಗಂಭೀರ ಸ್ವರೂಪ ಪಡೆಯು ತ್ತಿದ್ದಂತೆ `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿ ಸಿದ್ದ ಮೈಸೂರು ರಾಮಕೃಷ್ಣನಗರ ನಿವಾಸಿ, ಮೈಸೂರು ವಿವಿ ಹಳೆ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಮೈಸೂರು ನ್ಯಾಯಾ ಲಯದಿಂದ ಮಧÀ್ಯಂತರ ಜಾಮೀನು ಪಡೆದಿ ದ್ದರು. ಆದರೆ ಫಲಕ ಪ್ರದರ್ಶಿಸಿದವರು ಹಾಗೂ ಪ್ರತಿಭಟನೆ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವ್ಯಕ್ತವಾದ ಆಗ್ರಹದ ಹಿನ್ನೆಲೆಯಲ್ಲಿ ಮೈಸೂರು ವಕೀ ಲರ ಸಂಘ ವಿಶೇಷ ಸಭೆ ನಡೆಸಿ, ಪ್ರಕರಣದ ಆರೋಪಿಗಳ ವಿರುದ್ಧ ವಕಾಲತ್ತು ವಹಿಸ ದಿರುವ ನಿರ್ಣಯ ಕೈಗೊಂಡಿತ್ತು. ಹಾಗಾಗಿ ಮೈಸೂರಿನ ವಕೀಲರು ಆರೋಪಿಗಳ ಪರ ವಕಾಲತ್ತು ವಹಿಸಲು ಮುಂದೆ ಬರಲಿಲ್ಲ.
ವಕಾಲತ್ತು ವಹಿಸಲು ಬಂದ ವಕೀಲರ ತಂಡ: ಮೈಸೂರು ವಕೀಲರ ಸಂಘದ ನಿರ್ಣಯದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆಯೇ ಬೆಂಗಳೂರು, ಮಂಡ್ಯ, ಚಾಮ ರಾಜನಗರ ಸೇರಿದಂತೆ ವಿವಿಧೆಡೆಗಳಿಂದ 200ಕ್ಕೂ ಹೆಚ್ಚು ವಕೀಲರು ಆಗಮಿಸಿ ದ್ದರು. ಪ್ರಕರಣದ ವಿಚಾರಣೆ ನಡೆಯಲಿ ರುವ 2ನೇ ಪಿಡಿಜೆ ನ್ಯಾಯಾಲಯಕ್ಕೆ 163 ಮಂದಿ ವಕೀಲರು `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ನಳಿನಿ ಹಾಗೂ ಸಂಶೋಧ ಕರ ಸಂಘದ ಅಧ್ಯಕ್ಷ ಮರಿದೇವಯ್ಯ ಪರ ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿದರು.
ವಕಾಲತ್ತು ವಹಿಸುವುದು ನಮ್ಮ ಕರ್ತವ್ಯ: ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿದ ಬಳಿಕ ಹಿರಿಯ ವಕೀಲ ಕೆ.ಎನ್.ಜಗದೀಶ್ ಕುಮಾರ್ ಪತ್ರಕರ್ತರೊಂದಿಗೆ ಮಾತನಾಡಿ, ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ವಿರುದ್ಧ ಎಫ್‍ಐಆರ್ ದಾಖ ಲಾಗಿದೆ. ಮೈಸೂರು ವಕೀಲರ ಸಂಘ ಕೈಗೊಂಡ ನಿರ್ಣಯದ ಅನುಸಾರ ನ್ಯಾಯಾ ಲಯದಲ್ಲಿ ವಕಾಲತ್ತು ವಹಿಸಲು ಮೈಸೂ ರಿನ ವಕೀಲರು ಮುಂದೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ವಾದ ಮಾಡುವಂತೆ ನಮ್ಮನ್ನು ಕೋರಿಕೊಂಡರು. ನಾವು ವಕೀಲ ಧರ್ಮ ವನ್ನು ಪಾಲಿಸಬೇಕಾಗಿರುವುದರಿಂದ ಇಂದು ಬೆಂಗಳೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ 163 ವಕೀಲರು ಮರಿದೇ ವಯ್ಯ ಹಾಗೂ ನಳಿನಿ ಪರ ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿದ್ದೇವೆ ಎಂದರು.
ನಾವು ಕಕ್ಷಿದಾರರ ಪರ ವಕಾಲತ್ತು ವಹಿ ಸಲು ಬಂದಿದ್ದೇವೆಯೇ ಹೊರತು ಮೈಸೂರು ವಕೀಲರ ಸಂಘದ ನಿರ್ಣಯವನ್ನು ವಿರೋಧಿ ಸುವ ಹಾಗೂ ಖಂಡಿಸಲು ಬಂದಿಲ್ಲ. ಹಲವು ಪ್ರಕರಣಗಳಲ್ಲಿ ಮೈಸೂರಿನ ವಕೀಲರು ಬೆಂಗ ಳೂರು ನ್ಯಾಯಾಲಯದಲ್ಲಿ ವಾದ ಮಂಡಿ ಸಲು ಬರುತ್ತಾರೆ. ಅದೇ ರೀತಿ ನಾವು ಮೈಸೂ ರಿನ ನ್ಯಾಯಾಲಯದಲ್ಲಿ ವಾದ ಮಂಡಿಸಲು ಆಗಮಿಸಿದ್ದೇವೆ. ಎಲ್ಲಾ ವಕೀಲರು ಒಂದೇ ವೃತ್ತಿ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಒಡಕಿಲ್ಲ ಎಂದರು. ಕಕ್ಷಿದಾರರ ಪರ ವಾದ ಮಂಡಿಸುತ್ತೇವೆ. ನ್ಯಾಯಾಧೀಶರು ಯಾವುದು ಸರಿ, ತಪ್ಪು ಎನ್ನುವುದನ್ನು ನಿರ್ಧರಿಸಲಿ ದ್ದಾರೆ. ತಪ್ಪಿತಸ್ಥರಾದರೆ ಶಿಕ್ಷೆ ನೀಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.