ಕುರುಬ ಸಮುದಾಯ ಮೂಲ ಕಸುಬು ಮರೆಯಬಾರದು
ಮೈಸೂರು

ಕುರುಬ ಸಮುದಾಯ ಮೂಲ ಕಸುಬು ಮರೆಯಬಾರದು

February 2, 2020

ಮೈಸೂರು,ಫೆ.1(ವೈಡಿಎಸ್)-ಕುರುಬ ಸಮುದಾಯವು ಎಂದಿಗೂ ಮೂಲ ಕಸು ಬನ್ನು ಮರೆಯಬಾರದು ಎಂದು ಕಾಗಿ ನೆಲೆ ಪೀಠ ಮೈಸೂರು ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹೇಳಿದರು.

ನಗರದ ಆರಾಧ್ಯ ಮಹಾಸಭಾದಲ್ಲಿ ಕುರುಬರಿಂದ ಕುರುಬರಿಗಾಗಿ ಶುದ್ಧ ಗಾಳಿ -ಶುದ್ಧ ನೀರು-ಶುದ್ಧ ಮನಸ್ಸಿನ ಶುದ್ಧ ಬದುಕಿನೆಡೆಗೆ ಧ್ಯೇಯವಾಕ್ಯದೊಂದಿಗೆ ಎಸ್.ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗ ಆಯೋಜಿಸಿದ್ದ ಉಳ್ಳವರಿಂದ ಅವಶ್ಯ ವಿರುವವರಿಗೆ ಕುರಿ ನೀಡುವ ಕಾರ್ಯ ಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಕುರುಬ ಸಮುದಾಯ ಎಂದಿಗೂ ನಮ್ಮತನವನ್ನು ಬಿಡಬಾರದು. ಕುರಿಯೇ ಕುರುಬರ ಐಶ್ವರ್ಯ, ಹಾಲುಮತ ಸಮಾ ಜದ ಗುರುತು. ಆದರೆ, ಇತ್ತೀಚಿನ ದಿನ ಗಳಲ್ಲಿ ಕುರಿ ಸಾಕುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಕುರಿ ಸಾಕುವುದರಿಂದ ಸಮಾಜ ಆರ್ಥಿಕವಾಗಿ ಬೆಳೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆಯಾದ ತೀ.ನರಸೀಪುರ ಕ್ಷೇತ್ರದ ಮಣಿ ಕಂಠ, ವರುಣಾ ಕ್ಷೇತ್ರದ ಬೀರಪ್ಪ, ಪಿರಿಯಾ ಪಟ್ಟಣ ಕ್ಷೇತ್ರದ ಲೋಕೇಶ್, ಚಾಮುಂಡೇ ಶ್ವರಿ ಕ್ಷೇತ್ರದ ಸೋಮಶೇಖರ್, ಶಿವಲಿಂಗ ಮತ್ತು ಕೆ.ಆರ್.ನಗರದ ವಿಕಲಚೇತನ ಪ್ರಮೋದ್ ಅವರಿಗೆ ಕುರಿಗಳನ್ನು ವಿತರಿಸ ಲಾಯಿತು. ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್, ತಗಡೂರು ಅರ್ಚಕ ವೇಣುಗೋಪಾಲ್, ಯದು ನಂದನ್, ಕುರಿದಾನಿ ರೇವಣ್ಣ, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್, ವರಕೋಡು ದೊಡ್ಡೇ ಗೌಡ, ಕೊಲ್ಲಾಪುರ ದೇವಾಲಯ ಅಧ್ಯಕ್ಷ ನಾಗರಾಜು, ಬಸಪ್ಪ, ಭಾಸ್ಕರ್ ಇದ್ದರು.

Translate »