ಶ್ರೀ ಸುತ್ತೂರು ಮಠ ಅನಿಮೇಷನ್ ಚಿತ್ರ ನೇರಪ್ರಸಾರ ರಸಪ್ರಶ್ನೆಯಲ್ಲಿ ವಿಜೇತರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ವಿತರಣೆ
ಮೈಸೂರು

ಶ್ರೀ ಸುತ್ತೂರು ಮಠ ಅನಿಮೇಷನ್ ಚಿತ್ರ ನೇರಪ್ರಸಾರ ರಸಪ್ರಶ್ನೆಯಲ್ಲಿ ವಿಜೇತರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ವಿತರಣೆ

September 1, 2020

ಮೈಸೂರು, ಆ.31- ಆ.29ರಂದು ನೆರ ವೇರಿದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 105ನೆಯ ಜಯಂತಿ ಸಂದರ್ಭದಲ್ಲಿ ಬಿಡುಗಡೆಯಾದ ‘ಸುತ್ತೂರು ಶ್ರೀಮಠ-ಗುರುಪರಂಪರೆ’ ಮತ್ತು ‘ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್’–ಅನಿಮೇಷನ್ ಚಿತ್ರ ಗಳು ಸಂಜೆ ನೇರಪ್ರಸಾರವಾದವು.

ಸುಮಾರು 3500ಕ್ಕೂ ಹೆಚ್ಚು ಜನರು ಇವುಗಳನ್ನು ವೀಕ್ಷಿಸಿದರು. ಚಿತ್ರಗಳು ಪ್ರದ ರ್ಶನಗೊಳ್ಳುತ್ತಿದ್ದಂತೆ ಆಯಾ ಚಿತ್ರಗಳ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಸರಿಯಾಗಿ ಮತ್ತು ಅತೀ ವೇಗವಾಗಿ ಉತ್ತರಿಸಿದ ಸ್ಪರ್ಧಾಳು ಗಳನ್ನು ವಿಜೇತರನ್ನಾಗಿ ಆಯ್ಕೆ ಮಾಡ ಲಾಯಿತು. ರಸಪ್ರಶ್ನೆ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ 580 ಜನ ಭಾಗವಹಿಸಿದ್ದರು.

ಚಾಮರಾಜನಗರ ಜೆಎಸ್‍ಎಸ್ ಪಬ್ಲಿಕ್ ಶಾಲೆಯ 9ನೇ ತರಗತಿಯ ಕು. ಎ.ಎಂ. ಕುಶಾಲ್ ಪ್ರಥಮ, ಸಿದ್ಧಾರ್ಥನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆಯ 8ನೇ ತರ ಗತಿಯ ಕು. ಕೆ.ಎನ್.ಸರ್ವೇಶ್‍ಕುಮಾರ್ ದ್ವಿತೀಯ, ಎಸ್‍ಜೆಸಿಇಯ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಎಂ.ನೀತಿ ತೃತೀಯ, ಸಿದ್ಧಾರ್ಥನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ಶ್ರೀಮತಿ ಬಿ.ಎಸ್.ವಿನುತಾ ನಾಲ್ಕನೆಯ ಹಾಗೂ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಕು.ಆರ್.ಮಾಲಾ 5ನೇ ಸ್ಥಾನ ಪಡೆದರು. ಇಂಗ್ಲಿಷ್ ವಿಭಾಗದಲ್ಲಿ 898 ಜನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿ ಸಿದ್ದರು. ಬೆಂಗಳೂರಿನ ಹೆಚ್.ಎಸ್.ಆರ್. ಬಡಾವಣೆಯ ಗೃಹಿಣಿ 83 ವರ್ಷದ ಶ್ರೀಮತಿ ಸರೋಜಾ ರಾಮಸ್ವಾಮಿ ಪ್ರಥಮ, ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಸಹಾ ಯಕ ಪ್ರಾಧ್ಯಾಪಕ ಡಾ.ಹೆಚ್.ಎಂ.ಅಕ್ಷಯ್ ದ್ವಿತೀಯ, ಬೆಂಗಳೂರು ಹೆಚ್.ಎಸ್.ಆರ್. ಬಡಾವಣೆಯ ಜೆಎಸ್‍ಎಸ್ ಪಬ್ಲಿಕ್ ಶಾಲೆಯ 1ನೇ ತರಗತಿಯ ಕು.ಎಂ.ಸ್ಮøತಿ ತೃತೀಯ, ಅದೇ ಶಾಲೆಯ 8ನೇ ತರಗತಿಯ ಕು. ಕೀರ್ತನಾ ಚೇತನ್ 4ನೇ ಹಾಗೂ ಚಾಮ ರಾಜನಗರ ಜೆಎಸ್‍ಎಸ್ ಪಬ್ಲಿಕ್ ಶಾಲೆಯ 10ನೇ ತರಗತಿಯ ಕು. ಕೆ.ಪಿ. ಶ್ರೀಸೌಮಿ ಐದನೆಯ ಸ್ಥಾನವನ್ನು ಪಡೆದರು.

ವಿಜೇತರಿಗೆ ಪ್ರಶಂಸನಾ ಪತ್ರದ ಜೊತೆಗೆ ಕ್ರಮವಾಗಿ ಪ್ರಥಮ 5,000, ದ್ವಿತೀಯ 4,000, ತೃತೀಯ 3,000, ಚತುರ್ಥ 2,000 ಮತ್ತು ಪಂಚಮ 1,000 ರೂ.ಗಳ ಬಹುಮಾನವನ್ನು ನೀಡಲಾಗುತ್ತದೆ.

Translate »