ರೌಡಿಶೀಟರ್ ಜೊತೆ ಸೇರಿ ಕಾಫಿ  ವ್ಯಾಪಾರಿಯ ಕೊಂದ ಬಾಲ್ಯ ಸ್ನೇಹಿತ
ಕೊಡಗು

ರೌಡಿಶೀಟರ್ ಜೊತೆ ಸೇರಿ ಕಾಫಿ ವ್ಯಾಪಾರಿಯ ಕೊಂದ ಬಾಲ್ಯ ಸ್ನೇಹಿತ

February 7, 2019

ವಿ.ಪೇಟೆಯಲ್ಲಿ ಕೃತ್ಯ, ಮೂವರ ಬಂಧನ
ವಿರಾಜಪೇಟೆ: ಹಣಕಾಸು ವಿಚಾ ರಕ್ಕೆ ಸಂಬಂಧಿಸಿದಂತೆ ಬಾಲ್ಯ ಸ್ನೇಹಿತನೇ ಇತರ ಇಬ್ಬರೊಂದಿಗೆ ಸೇರಿ ಕಾಫಿ ವ್ಯಾಪಾ ರಿಯನ್ನು ಡ್ರ್ಯಾಗರ್‍ನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಸಾರ್ವಜನಿಕರು ಹಾಗೂ ಪೊಲೀ ಸರ ಸಮಯ ಪ್ರಜ್ಞೆಯಿಂದಾಗಿ ರೌಡಿಶೀಟರ್ ಸೇರಿ ಮೂವರನ್ನು ಬಂಧಿಸಲಾಗಿದೆ.

ವಿರಾಜಪೇಟೆ ಪಟ್ಟಣ ವ್ಯಾಪ್ತಿಯ ಮಂಜು ನಾಥನಗರ ನಿವಾಸಿ ಕಾಫಿ ವ್ಯಾಪಾರಿ ಶಫೀಕ್ ಹತ್ಯೆಗೀಡಾದವರಾಗಿದ್ದು, ಇವರ ಬಾಲ್ಯ ಸ್ನೇಹಿತ ದರ್ಶನ್, ಆತನ ತೋಟದ ಕಾರ್ಮಿಕ ಅಸ್ಸಾಂ ಮೂಲಕ ಮಹಮದ್ ರೋಹನ್ ಮತ್ತು ರೌಡಿಶೀಟರ್ ತಮಿಳರ ಜೀವನ್ ಬಂಧನಕ್ಕೊಳಗಾಗಿದ್ದಾರೆ.

ಬಾಲ್ಯ ಸ್ನೇಹಿತನಾದ ಶಫೀಕ್ ಅವರಿಂದ ಕಾಫಿ ಕೊಯ್ದ ನಂತರ ಕಾಫಿ ಕೊಡುವುದಾಗಿ ದರ್ಶನ್ 5 ಲಕ್ಷ ರೂ. ಮುಂಗಡ ಪಡೆ ದಿದ್ದ ಎನ್ನಲಾಗಿದೆ. ಕೊಯ್ಲು ಮುಗಿದ ನಂತರ ಈತ ಬೇರೆಯವರಿಗೆ ಕಾಫಿ ಮಾರಾಟ ಮಾಡಿ ಶಫೀಕ್‍ಗೆ ಮುಂಗಡವಾಗಿ ಪಡೆದಿದ್ದ ಹಣವನ್ನೂ ನೀಡದೇ ಸತಾಯಿಸುತ್ತಿದ್ದ. ಈ ಸಂಬಂಧ ಇವರಿಬ್ಬರ ಮಧ್ಯೆ ಆಗಿಂದಾಗ್ಗೆ ಗಲಾಟೆಗಳು ನಡೆಯುತ್ತಿದ್ದವು ಎಂದು ಹೇಳಲಾಗಿದೆ. ಹಣಕ್ಕಾಗಿ ಶಫೀಕ್‍ನ ಒತ್ತಡ ಹೆಚ್ಚಾದಾಗ ಆತನನ್ನು ಕೊಲೆ ಮಾಡಲು ನಿರ್ಧರಿಸಿದ ದರ್ಶನ್, ರೌಡಿಶೀಟರ್ ತಮಿಳರ ಜೀವನ್ ಜೊತೆ ಸೇರಿ ಸಂಚು ರೂಪಿಸಿದ್ದ. ಮಂಗಳವಾರ ರಾತ್ರಿ 9.45ರ ಸುಮಾರಿನಲ್ಲಿ ಶಫೀಕ್ ಒಬ್ಬನೇ ಮನೆಯಲ್ಲಿರುವುದನ್ನು ತಿಳಿದುಕೊಂಡಿದ್ದ ದರ್ಶನ್, ಹಣದ ವಿಚಾರ ವಾಗಿ ಮಾತನಾಡಲು ಮನೆಗೆ ಬರುವುದಾಗಿ ಅವರಿಗೆ ದೂರವಾಣಿ ಮೂಲಕ ತಿಳಿಸಿ ರೌಡಿಶೀಟರ್ ತಮಿಳರ ಜೀವನ್ ಮತ್ತು ತನ್ನ ತೋಟದ ಕಾರ್ಮಿಕ ಮಹಮದ್ ರೋಹನ್ ಅವರೊಂದಿಗೆ ಶಫೀಕ್ ಮನೆಗೆ ತೆರಳಿದ್ದಾನೆ.

ಮಾತನಾಡುತ್ತಿದ್ದಂತೆಯೇ ಹಠಾತ್ತಾಗಿ ಶಫೀಕ್ ಮೇಲೆ ಎರಗಿದ ಈ ಮೂವರು ಡ್ರ್ಯಾಗರ್‍ನಿಂದ ಅವರ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳಿಗೆ ಇರಿಯಲಾ ರಂಭಿಸಿದ್ದಾರೆ. ಶಫೀಕ್‍ನ ಅರಚಾಟ ಕೇಳಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಧಾವಿಸಿ ನೋಡಲಾಗಿ ಶಫೀಕ್ ಹತ್ಯೆಯಾಗಿರು ವುದು ಕಂಡು ಬಂದಿದೆ. ತಕ್ಷಣವೇ ಅವ ರುಗಳು ಮನೆಯ ಬಾಗಿಲು ಹಾಕಿ ಹೊರ ಗಿನಿಂದ ಚಿಲಕ ಭದ್ರಪಡಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಡಿವೈ ಎಸ್‍ಪಿ ನಾಗಪ್ಪ, ಇನ್ಸ್‍ಪೆಕ್ಟರ್ ಕ್ಯಾತೇಗೌಡ, ವಿರಾಜಪೇಟೆ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಅವರುಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಮೂವ ರನ್ನು ಬಂಧಿಸಿ, ಡ್ರ್ಯಾಗರ್, ಕೈ ಗ್ಲೌಸ್‍ಗಳು ಹಾಗೂ ಹತ್ಯೆಯ ನಂತರ ಪರಾರಿಯಾ ಗಲು ಸಿದ್ಧವಾಗಿ ನಿಲ್ಲಿಸಿದ್ದ ಕಾರನ್ನು ವಶ ಪಡಿಸಿಕೊಂಡಿದ್ದಾರೆ. ಈ ಹಂತಹಕರು ಫಿಂಗರ್ ಪ್ರಿಂಟ್ ಸಿಗಬಾರದು ಎಂಬ ಉದ್ದೇ ಶದಿಂದ ಕೈಗಳಿಗೆ ಗ್ಲೌಸ್ ಹಾಕಿಕೊಂಡು ನಂತರ ಹತ್ಯೆ ಮಾಡಿದ್ದಾರೆ ಎಂದು ಹೇಳ ಲಾಗಿದೆ. ಆರೋಪಿಗಳನ್ನು ನ್ಯಾಯಾಧೀ ಶರ ಮುಂದೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಸಂಬಂಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »