ನ್ಯಾಯಾಲಯ ಆವರಣದಲ್ಲಿ ಹೃದಯಾಘಾತದಿಂದ ಕಕ್ಷಿದಾರ ಸಾವು
ಮೈಸೂರು

ನ್ಯಾಯಾಲಯ ಆವರಣದಲ್ಲಿ ಹೃದಯಾಘಾತದಿಂದ ಕಕ್ಷಿದಾರ ಸಾವು

July 2, 2019

ಮೈಸೂರು, ಜು.1(ಎಸ್‍ಬಿಡಿ)- ಮೈಸೂರು ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರ ನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಮೈಸೂರು ತಾಲೂಕು, ಮಂಡಕಳ್ಳಿ ನಿವಾಸಿ ಶಿವನಂಜಯ್ಯ ಅವರ ಪುತ್ರ ಎಸ್.ನಂದೀಶ(36) ಮೃತಪಟ್ಟ ಕಕ್ಷಿದಾರ. ಪ್ರಕರಣವೊಂದರ ವಿಚಾರಣೆಗೆಂದು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಬಂದಿದ್ದ ಸಂದರ್ಭದಲ್ಲಿ ಹೃದಯಾಘಾತ ವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರೆಂದು ತಿಳಿದುಬಂದಿದೆ.

ಆರೋಗ್ಯ ಕೇಂದ್ರಕ್ಕೆ ಆಗ್ರಹ: ನ್ಯಾಯಾಲಯದ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕೆಂಬ ದಶಕದ ಬೇಡಿಕೆಯನ್ನು ನಿರ್ಲಕ್ಷಿಸಿರುವ ಪರಿಣಾಮ ಇಂದು ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಹೃದಯಾಘಾತವಾದಾಗ ಕೂಡಲೇ ಪ್ರಾಥಮಿಕ ಚಿಕಿತ್ಸೆ ದೊರೆತಿದ್ದರೆ ನಂದೀಶ್ ಬದುಕುಳಿಯುತ್ತಿದ್ದರು ಎಂದು ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರು ನ್ಯಾಯಾಲಯದಲ್ಲಿ ನ್ಯಾಯಾ ಧೀಶರು, ಸುಮಾರು 250 ಮಂದಿ ಸಿಬ್ಬಂದಿ, ಮೂರ್ನಾಲ್ಕು ಸಾವಿರ ವಕೀಲರು, ಏಳೆಂಟು ಸಾವಿರ ಕಕ್ಷಿದಾರರು ನಿತ್ಯ ಬಂದು ಹೋಗುತ್ತಾರೆ. ನ್ಯಾಯಾಲಯದ ಆವ ರಣದಲ್ಲಿ ಅದೆಷ್ಟೋ ಮಂದಿ ಅನಾರೋಗ್ಯದಿಂದ ಅಸ್ವಸ್ಥರಾಗಿರುವ ಘಟನೆಯೂ ನಡೆದಿವೆ. ಹಾಗಾಗಿ ಇಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವಂತೆ ಮೈಸೂರು ವಕೀಲರ ಸಂಘ ದಶಕದಿಂದ ಒತ್ತಾಯಿಸುತ್ತಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಡುವೆ 5 ಕಿ.ಮೀ. ಅಂತರವಿರಬೇಕೆಂಬ ನಿಯಮವಿದ್ದು, ಕೃಷ್ಣಮೂರ್ತಿಪುರಂನಲ್ಲಿ ಆರೋಗ್ಯ ಕೇಂದ್ರವಿರುವ ಕಾರಣ ನ್ಯಾಯಾಲಯದ ಆವರಣದಲ್ಲಿ ತೆರೆಯಲು ಅವಕಾಶವಿಲ್ಲ ಎಂಬುದು ಆರೋಗ್ಯ ಇಲಾಖೆ ಅಧಿಕಾರಿ ಗಳ ಪ್ರತಿಕ್ರಿಯೆಯಾಗಿದೆ ಎಂದು ಸಂಘದ ಕಾರ್ಯದರ್ಶಿ ಬಿ.ಶಿವಣ್ಣ ತಿಳಿಸಿದ್ದಾರೆ.

ಇದೇನೇ ಇರಲಿ ಜೀವರಕ್ಷಣೆ ಮುಖ್ಯ. ಕೇವಲ ಅಂತರವನ್ನು ದೃಷ್ಟಿಯಲ್ಲಿಟ್ಟು ಕೊಳ್ಳಬಾರದು. ನಿತ್ಯ ಸಹಸ್ರಾರು ಜನ ಬಂದು ಹೋಗುವ ನ್ಯಾಯಾಲಯ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜನೌಷಧಿ ಕೇಂದ್ರವೊಂದನ್ನು ತೆರೆಯಬೇಕೆಂದು ಆಗ್ರಹಿಸಿರುವ ಶಿವಣ್ಣನವರು, ಈಗಲೂ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗದಿದ್ದರೆ ಉಪವಾಸ ಸತ್ಯಾಗ್ರಹದ ಮೂಲಕ ಎಚ್ಚರಿಸಲು ಸಂಘ ಚಿಂತನೆ ನಡೆಸಿದೆ ಎಂದು ಎಚ್ಚರಿಸಿದ್ದಾರೆ.

Translate »