ನಾವೆಲ್ಲಾ ಒಂದು ಎಂಬುದೇ ಭಾರತದ ಮಹಾಶಕ್ತಿ
ಮೈಸೂರು

ನಾವೆಲ್ಲಾ ಒಂದು ಎಂಬುದೇ ಭಾರತದ ಮಹಾಶಕ್ತಿ

January 12, 2020

ಮೈಸೂರು, ಜ.11- ಮೈಸೂರಿನ ಶ್ರೀ ಮಹಾಲಕ್ಷ್ಮೀ ಸ್ವೀಟ್ಸ್ ವತಿಯಿಂದ ಧಾರ್ಮಿಕ ಪ್ರಚಾರಕರಿಂದ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಬಸಂತ್ ಕನ್ವೆನ್ಷನ್ ಸೆಂಟರ್‍ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಗೋತೀರ್ಥ ಕಪಿಲಾಶ್ರಮದ ಶ್ರೀ ರಾಮಚಂದ್ರ ಭಾರತೀ ಸ್ವಾಮೀಜಿ, ಭಾರತದ ಸಂಸ್ಕøತಿ `ವಸುದೈವ ಕುಟುಂಬಕಂ’ ಆಧಾರದಲ್ಲಿ ನಿಂತಿದೆ. ಭಾರತವು ಭಾವನೆ, ರಾಗ, ತಾಳವನ್ನು ಒಳಗೊಂಡಿದೆ. ನಾವೆಲ್ಲಾ ಒಂದು ಎಂಬುದು ಭಾರತದ ಶಕ್ತಿ. ಹಾಗೆಯೇ ಶ್ರೀ ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕರಾದ ಶಿವಕುಮಾರ್ ಅವರ ಮನಸ್ಸು, ಹೃದಯವೂ ಸಿಹಿಯಾಗಿದೆ. ಮಹಾಲಕ್ಷ್ಮೀ ಸ್ವೀಟ್ಸ್‍ನ ಮೈಸೂರು ಪಾಕನ್ನು ದುಬೈಗೆ ಕೊಂಡೊಯ್ದು, ಪರಿಚಿತರಿಗೆ ನೀಡಿದ್ದೆ ಎಂದು ಸ್ಮರಿಸಿಕೊಂಡರು.

ಗೋಕಾಕ್‍ನ ವಿಶ್ವಪ್ರೇಮ ಪ್ರಸಾರಕರಾದ ಶ್ರೀ ನಾರಾಯಣ ಶರಣರು ಜೀವನ ಮೌಲ್ಯಗಳ ಬಗ್ಗೆ ಆಶೀರ್ವಚನ ನೀಡಿದರು. ಶರಣ ತತ್ವ ಚಿಂತಕ ಶಂಕರ ದೇವನೂರು ಮಾತನಾಡಿ, ಶ್ರೀ ಮಹಾಲಕ್ಷ್ಮೀ ಸ್ವೀಟ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಮಾತೃ ಹೃದಯಿ. ಅವರ ಮುಗ್ದತೆ, ಆಪ್ತತೆ ಎಲ್ಲರನ್ನೂ ಹತ್ತಿರವಾಗಿಸುತ್ತದೆ ಎಂದು ಬಣ್ಣಿಸಿದರು.

ಐಎಎಸ್ ಅಧಿಕಾರಿ ಕೆಂಪಹೊನ್ನಯ್ಯ ಮಾತನಾಡಿ, ಎಲ್ಲಾ ಮಕ್ಕಳನ್ನೂ ಸರಿಸಮಾನ ವಾಗಿ ಕಾಣುವ ವಾತ್ಸಲ್ಯವಿರುವುದು ತಾಯಿಯಲ್ಲಿ ಮಾತ್ರ. ಹಾಗೆ ಸರ್ವರನ್ನೂ ಮಾತೃ ವಾತ್ಸಲ್ಯದಿಂದ ಕಾಣುವ ಮೌಲ್ಯ ಶಿವಕುಮಾರ್ ಅವರಲ್ಲಿದೆ. ವೃತ್ತಿಯಿಂದ ಶ್ರೇಷ್ಠರಾಗ ಬಹುದೇ ಹೊರತು ಹುಟ್ಟಿನಿಂದಲ್ಲ ಎಂಬಂತೆ ಶಿವಕುಮಾರ್ ನಂಬಿಕೆ, ಸಮಯಪ್ರಜ್ಞೆ, ಆದರ್ಶದೊಂದಿಗೆ ಬದುಕಿ ಸಾಧಿಸಿದ್ದಾರೆ. ತಮ್ಮೊಂದಿಗೆ ಕೆಲಸ ಮಾಡುವ ನೌಕರರನ್ನು ಕಾಯಕ ಯೋಗಿಗಳೆಂದು ಶಿವಕುಮಾರ್ ಭಾವಿಸಿದ್ದಾರೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಮಹಾಲಕ್ಷ್ಮೀ ಸ್ವೀಟ್ಸ್ ಉತ್ಪಾದನಾ ಘಟಕದ ನೌಕರರಿಗೆ ಬೋನಸ್ ವಿತರಿಸಲಾಯಿತು. ಶ್ರೀ ಮಹಾಲಕ್ಷ್ಮೀ ಸ್ವೀಟ್ಸ್ ಮತ್ತು ಭೀಮಾ ಪ್ರಾಪರ್ಟೀಸ್‍ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ಪುತ್ರ ನಿತಿನ್ ಶಿವಕುಮಾರ್, ಪುತ್ರಿ ಸಹನಾ ಶಿವಕುಮಾರ್, ಭೀಮಾ ಪ್ರಾಪರ್ಟೀಸ್‍ನ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »